ಡಿಸೆಂಬರ್ 15ಕ್ಕೆ ಕ್ರಾಂತಿ ಎರಡನೇ ಹಾಡಿನ ಅಪ್‌ಡೇಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಷನ್ ನ ಎರಡನೇ ಚಿತ್ರ ಕ್ರಾಂತಿ ಬಿಡುಗಡೆಗೆ ದಿನಗಣನೆ ಆರಂಭಗೊಂಡಿದೆ.

ಈ‌ ಮೊದಲೇ ಚಿತ್ರದ ಟೀಸರ್ ಒಂದನ್ನು ಬಿಡುಗಡೆಗೊಳಿಸಿದ್ದ ಚಿತ್ರತಂಡ ಈಗ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರ ಮೇಲಿನ ನಿರೀಕ್ಷೆ ಹೆಚ್ಚಾಗುವಂತೆ ಮಾಡುತ್ತಿದೆ.

ಕ್ರಾಂತಿ ಚಿತ್ರತಂಡ ಒಂದೊಂದು ಹಾಡನ್ನು ರಾಜ್ಯದ ಒಂದೊಂದು ಊರಿನಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಿತ್ತು. ಅದರಂತೆ ಕಳೆದ ಡಿಸೆಂಬರ್ 10ರಂದು ಮೈಸೂರಿನಲ್ಲಿ ಮೊದಲ ಹಾಡು 'ಧರಣಿ'ಯನ್ನು ಬಿಡುಗಡೆಗೊಳಿಸಿದ್ದ ಕ್ರಾಂತಿ ಚಿತ್ರತಂಡ ಇದೀಗ ಎರಡನೇ ಹಾಡಿನ ಬಿಡುಗಡೆಗೆ ಸಜ್ಜಾಗಿದೆ.

 Darshan will announce Kranti second song release date on December 15

ಮೊದಲ‌ ಹಾಡು ಸದ್ದು ಮಾಡುತ್ತಿರುವಾಗಲೇ ಎರಡನೇ ಹಾಡು ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಳೆ ( ಡಿಸೆಂಬರ್ 15 ) ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಲಿದ್ದಾರೆ ಎಂಬ ವಿಷಯವನ್ನು ಚಿತ್ರದ ನಿರ್ದೇಶಕ ವಿ ಹರಿಕೃಷ್ಣ ಟ್ವಿಟರ್ ಮೂಲಕ ತಿಳಿಸಿದ್ದಾರೆ‌.

ಇನ್ನು ಮೊದಲ ಹಾಡು ಧರಣಿ ಬಿಡುಗಡೆ ದಿನ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವಾಗ ಮುಂದಿನ ಹಾಡನ್ನು ಡಿಸೆಂಬರ್ 18ರಂದು ಹೊಸಪೇಟೆ ಪಟ್ಟಣದಲ್ಲಿ ಬಿಡುಗಡೆ ಮಾಡಲಿದ್ದೇವೆ, ಯಾವ ಹಾಡು ಎಂಬ ವಿವರವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ ಎಂದು ದರ್ಶನ್ ತಿಳಿಸಿದ್ದರು. ಇದೀಗ ನಾಳೆ ( ಡಿಸೆಂಬರ್ 15 ) ಬೆಳಗ್ಗೆ 9 ಗಂಟೆಗೆ ದರ್ಶನ್ ಅವರು ಯಾವ ಹಾಡು ಹಾಗೂ ಎಷ್ಟು ಗಂಟೆಗೆ ಆ ಹಾಡನ್ನು ಡಿಸೆಂಬರ್ 18ರಂದು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಲಿದ್ದಾರೆ.

More from Filmibeat

FB Artcles

English summary
Darshan will announce Kranti second song update on December 15. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X