For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟ್ ಮೈದಾನದಲ್ಲೇ 'ಬುಟ್ಟ ಬೊಮ್ಮ' ಡ್ಯಾನ್ಸ್ ಮಾಡಿದ ಡೇವಿಡ್ ವಾರ್ನರ್

  |

  ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದ ವೇಳೆ ಆಸಿಸ್ ಆಟಗಾರ ಡೇವಿಡ್ ವಾರ್ನರ್ ಕ್ರಿಕೆಟ್ ಮೈದಾನದಲ್ಲೇ 'ಬುಟ್ಟ ಬೊಮ್ಮ' ಡ್ಯಾನ್ಸ್ ಮಾಡಿ ವೀಕ್ಷಕರ ಗಮನ ಸೆಳೆದಿದ್ದಾರೆ.

  ತೆಲುಗು ನಟ ಅಲ್ಲು ಅರ್ಜುನ್ ನಟಿಸಿದ್ದ 'ಅಲಾ ವೈಕುಂಠಪುರಂಲೋ' ಸಿನಿಮಾದ 'ಬುಟ್ಟ ಬೊಮ್ಮ' ಹಾಡಿಗೆ ಆಸಿಸ್ ಆಟಗಾರ ಫಿದಾ ಆಗಿದ್ದರು. ಟಿಕ್‌ ಟಾಕ್‌ನಲ್ಲಿ ಈ ಹಾಡಿಗೆ ವಾರ್ನರ್ ಡ್ಯಾನ್ಸ್ ಮಾಡಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.

  ಹೊಸ ದಾಖಲೆ ಬರೆದ 'ಬುಟ್ಟ ಬೊಮ್ಮಾ' ಹಾಡು, ಸೂಪರ್ ಎಂದ ವಾರ್ನರ್

  ಐಪಿಎಲ್ ಟೂರ್ನಿಯಲ್ಲಿ ಡೇವಿಡ್ ವಾರ್ನರ್ ಸನ್‌ರೈಸ್ ಹೈದರಾಬಾದ್‌ ತಂಡವನ್ನು ಮುನ್ನಡೆಸುತ್ತಾರೆ. ಈ ವೇಳೆ ತೆಲುಗು ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿ ಮೋಡಿ ಮಾಡಿದ್ದರು. ವಾರ್ನರ್ ಅವರ 'ಬುಟ್ಟ ಬೊಮ್ಮ' ಟಿಕ್ ಟಾಕ್ ನೋಡಿ ಭಾರತೀಯರು ಮೆಚ್ಚಿಕೊಂಡಿದ್ದರು.

  ಈ ಡ್ಯಾನ್ಸ್ ಬಳಿಕ ವಾರ್ನರ್ ಎಲ್ಲೇ ಇದ್ದರೂ ಬುಟ್ಟ ಬೊಮ್ಮ ಡ್ಯಾನ್ಸ್ ಮಾಡಿ ಎಂದು ಭಾರತೀಯರು ಕೇಳುವಂತಾಗಿದೆ. ನಿನ್ನೆ (ನವೆಂಬರ್ 27) ಸಿಡ್ನಿಯಲ್ಲಿ ಭಾರತ ವಿರುದ್ಧ ಆಸ್ಟ್ರೇಲಿಯಾ ಮೊದಲ ಏಕದಿನ ಪಂದ್ಯ ಆಡಿತ್ತು.

  ಈ ಪಂದ್ಯದಲ್ಲಿ ಭಾರತ ಸೋಲು ಕಂಡಿತ್ತು. ಆಟದ ನಡುವೆ ಡೇವಿಡ್ ವಾರ್ನರ್ ಫೀಲ್ಡಿಂಗ್ ಮಾಡಬೇಕಾದರೆ ಬುಟ್ಟ ಬೊಮ್ಮ ಡ್ಯಾನ್ಸ್ ಮಾಡುವಂತೆ ಭಾರತೀಯ ಫ್ಯಾನ್ಸ್ ಗ್ಯಾಲರಿಯಿಂದ ಒತ್ತಾಯಿಸಿದ್ದಾರೆ. ಅಭಿಮಾನಿಗಳ ಕೋರಿಕೆಯನ್ನು ನಿರಾಸೆ ಮಾಡದ ವಾರ್ನರ್ ಆನ್‌ಫೀಲ್ಡ್‌ನಲ್ಲಿ ಬುಟ್ಟ ಬೊಮ್ಮ ಸ್ಟೆಪ್ ಹಾಕಿದ್ದಾರೆ.

  Sudeep, Vivek Oberoi ಕೈ ತಪ್ಪಿದ Muttappa Rai ಸಿನಿಮಾ | MR | Filmibeat Kannada

  ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಾರ್ನರ್ ಮತ್ತು ಬುಟ್ಟು ಬೊಮ್ಮ ಹಾಡಿನ ಸಂಬಂಧ ಮುಗಿಯದ ಕಥೆ ಎಂದು ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಎಸ್ ತಮನ್ ಸಂಗೀತ ನೀಡಿದ್ದ ಈ ಹಾಡನ್ನು ಅರ್ಮನ್ ಮಲ್ಲಿಕ್ ಹಾಡಿದ್ದರು. ಅಲ್ಲು ಅರ್ಜುನ್ ಮತ್ತು ಪೂಜಾ ಹೆಗಡೆ ಡ್ಯಾನ್ಸ್ ಮಾಡಿದ್ದರು.

  English summary
  Australian Cricketer David Warner Danced For Butt Bomma song in field during india's first ODI Match.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X