»   » ತುಳು ಚಿತ್ರ 'ದಂಡ್ 'ನಲ್ಲಿ ಸೋನು ಸಾಂಗ್ಸ್ ಸೂಪರ್

ತುಳು ಚಿತ್ರ 'ದಂಡ್ 'ನಲ್ಲಿ ಸೋನು ಸಾಂಗ್ಸ್ ಸೂಪರ್

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಿರೆಲ್ ಎಂಬ ಉತ್ತಮ ಚಿತ್ರ ತೆರೆಗೆ ತಂದಿದ್ದ ಸಂಧ್ಯಾ ಕ್ರಿಯೇಷನ್ಸ್ ಈಗ ದಂಡ್ ಚಿತ್ರ ನಿರ್ಮಿಸಿದೆ. ನಿರೆಲ್ ಚಿತ್ರದ ಯಶಸ್ವಿ ತಂಡ ಈ ಚಿತ್ರದಲ್ಲೂ ಮುಂದುವರೆದಿದೆ.

ಅರ್ಜುನ್ ಕಾಪಿಕಾಡ್ ಹಾಗೂ ಸಂದೀಪ್ ಶೆಟ್ಟಿ ಅವರ ನಟನೆ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ. ನಿರೆಲ್ ಮೂಲಕ ತುಳು ಚಿತ್ರರಂಗಕ್ಕೆ ಪರಿಚಿತರಾದ ಅಭಿಷೇಕ್ ಎಸ್ ಎನ್ ಅವರು ಈ ಚಿತ್ರದಲ್ಲೂ ಉತ್ತಮ ಸ್ವರ ಸಂಯೋಜನೆ ಮೂಲಕ ಗಮನ ಸೆಳೆದಿದ್ದಾರೆ.
ಸೋನು ನಿಗಮ್ ಹಾಡು ಕೇಳಿ:

ರಜನೀಶ್ ಅಮೀನ್ ಹಾಗೂ ಲೋಕು ಕುಡ್ಲ ಅವರ ಸಾಹಿತ್ಯ ಅಭಿಷೇಕ್ ಎಸ್ ಎನ್ ಅವರು ಸಂಗೀತ ನೀಡಿದ್ದಾರೆ.ಸೋನು ನಿಗಮ್ , ಅನೂಪ್ ಶಂಕರ್ ದನಿಯಲ್ಲಿ ಮೂಡಿ ಬಂದಿರುವ ಹಾಡುಗಳು ಮೆಚ್ಚುಗೆ ಗಳಿಸುತ್ತಿದೆ.

ಕಾಮಿಡಿ, ಆಕ್ಷನ್, ಮೆಲೋಡಿ ಹಾಡುಗಳು, ಸುಂದರ ಲೋಕೇಷನ್ ನಲ್ಲಿ ಚಿತ್ರೀಕರಣ, ಉಗ್ರಂ ಚಿತ್ರ ಖ್ಯಾತಿ ಅಲ್ಟಿಮೇಟ್ ಶಿವು ಸಾಹಸ ಸಂಯೋಜನೆ ಹೊಂದಿರುವ ಈ ಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಶಿಲ್ಪಾ ಸುವರ್ಣ, ನಿಧಿ ಹಾಗೂ ಅನ್ವಿತಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯಕ್ಕೆ ಚಿತ್ರ ಹಾಡುಗಳ ಜ್ಯೂಕ್ ಬಾಕ್ಸ್ ಹಾಗೂ ಸೋನು ನಿಗಮ್ ಹಾಡಿನ ವಿಡಿಯೋ ಝಲಕ್ ಇಲ್ಲಿದೆ ನೋಡಿ

ಸಾಂಗ್ ವಿಡಿಯೋ ಪ್ರೋಮೊ:


ದಂಡ್ ಫುಲ್ ಸಾಂಗ್ಸ್ ಜೂಕ್ ಬಾಕ್ಸ್:

English summary
'Dhand' movie has the tagline 'Pira Onji Gobbu Suru' meaning 'The Game Begins Again is set to release in the last week of May 2015. Abhishek SN musical has a melody song sung by Sonu Nigam. Here is audio jukebox and video.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada