Just In
Don't Miss!
- Sports
ಐಪಿಎಲ್: ರಾಜಸ್ಥಾನ್ vs ಪಂಜಾಬ್, ಹೈವೋಲ್ಟೇಜ್ ಪಂದ್ಯದ ಹೈಲೈಟ್ಸ್
- News
ಈಜಿಪ್ಟ್ ಹಠಮಾರಿ ಧೋರಣೆ, ಭಾರತೀಯರಿಗೆ ಎದುರಾಯ್ತು ಭಾರಿ ಸಂಕಷ್ಟ
- Automobiles
ಅತ್ಯುತ್ತಮ ಫೀಚರ್ಸ್ ಒಳಗೊಂಡ ಟೈಗನ್ ಇಂಟಿರಿಯರ್ ಅನಾವರಣಗೊಳಿಸಿದ ಫೋಕ್ಸ್ವ್ಯಾಗನ್
- Finance
ಟಿಸಿಎಸ್ ತ್ರೈಮಾಸಿಕ ಲಾಭ ಏರಿಕೆ: 9,246 ಕೋಟಿ ರೂಪಾಯಿ
- Lifestyle
ನಿಮ್ಮ ಮಗುವಿಗೆ ಆರೋಗ್ಯ ಆಹಾರ ತಿನ್ನಿಸಲು ಇಲ್ಲವೆ ಟ್ರಿಕ್ ಗಳು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಜೂನಿಯರ್ ಚಿರು ಜೊತೆ ಖರಾಬು ಹಾಡು ವೀಕ್ಷಿಸಿದ ಧ್ರುವ ಸರ್ಜಾ
ಧ್ರುವ ಸರ್ಜಾ ನಟನೆಯಲ್ಲಿ ಮೂಡಿ ಬಂದಿದ್ದ ಪೊಗರು ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಅದ್ಭುತ ಪ್ರದರ್ಶನ ಕಾಣುತ್ತಿದೆ. ರಾಬರ್ಟ್ ಅಬ್ಬರ ನಡುವೆಯೂ ಹಲವು ಥಿಯೇಟರ್‌ನಲ್ಲಿ ಪೊಗರು ಶೋ ಕಾಣ್ತಿದೆ.
ಪೊಗರು ಸಿನಿಮಾದ ಖರಾಬು ಹಾಡು ಯಾವ ಮಟ್ಟಿಗೆ ಹಿಟ್ ಆಗಿತ್ತು ಎನ್ನುವುದನ್ನು ವಿಶೇಷವಾಗಿ ಹೇಳಬೇಕಿಲ್ಲ. ಸಣ್ಣ ಮಕ್ಕಳಿಂದ ಹಿಡಿದು, ಮುದುಕರವರೆಗೂ ಖರಾಬು ಹಾಡನ್ನು ಎಂಜಾಯ್ ಮಾಡದವರಿಲ್ಲ.
ಫೋಟೋ ವೈರಲ್: ರೊಮ್ಯಾಂಟಿಕ್ ಮೂಡ್ ನಲ್ಲಿ ಧ್ರುವ ಸರ್ಜಾ ಮತ್ತು ಪ್ರೇರಣಾ ದಂಪತಿ
ಇದೀಗ, ಖರಾಬು ಹಾಡನ್ನು ಜೂನಿಯರ್ ಚಿರು ವೀಕ್ಷಿಸುತ್ತಿರುವ ಝಲಕ್ ಹೊರಬಿದ್ದಿದೆ. ಧ್ರುವ ಸರ್ಜಾ ಮನೆಯಲ್ಲಿ ಕುಳಿತು ತನ್ನ ಅಣ್ಣನ ಮಗನ ಜೊತೆ ಖರಾಬು ಹಾಡನ್ನು ನೋಡಿ ಖುಷಿಪಡುತ್ತಿದ್ದಾರೆ.
ಧ್ರುವ ಸರ್ಜಾರ ತೊಡೆಯ ಮೇಲೆ ಕುಳಿತು ನಗು ಬೀರುತ್ತಿರುವ ಮಗು ವಿಡಿಯೋ ಹೃದಯ ಮುಟ್ಟವಂತಿದೆ. ಅಣ್ಣನ ಮೇಲಿನ ಪ್ರೀತಿ ಮತ್ತು ಅಭಿಮಾನದ ಪ್ರತೀಕ ಜೂನಿಯರ್ ಚಿರು ವಿಚಾರದಲ್ಲಿ ನೋಡಬಹುದು. ಧ್ರುವ ಸರ್ಜಾ ಅವರ ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂದ್ಹಾಗೆ, ನಂದಕಿಶೋರ್ ನಿರ್ದೇಶಿಸಿರುವ ಈ ಚಿತ್ರಕ್ಕೆ ಹೆಚ್ಚು ಬಲ ತುಂಬಿರುವುದು ಚಂದನ್ ಶೆಟ್ಟಿ ಸಂಗೀತ ಹಾಗೂ ಖುದ್ದು ಚಂದನ್ ಅವರೇ ಸಾಹಿತ್ಯ ರಚಿಸಿದ್ದಾರೆ.