Don't Miss!
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Sports
IND vs NZ 3rd T20: ಶುಭ್ಮನ್ ಗಿಲ್, ಹಾರ್ದಿಕ್ ಪಾಂಡ್ಯ ಮಿಂಚು; ನ್ಯೂಜಿಲೆಂಡ್ ವಿರುದ್ಧ ಸರಣಿ ಗೆದ್ದ ಭಾರತ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಲವ್ ಮಾಕ್ ಟೇಲ್-2' ಹಾಡಿಗೆ ಟಾಂಗ್ ಕೊಟ್ರಾ ರಘು ದೀಕ್ಷಿತ್?
ಡಾರ್ಲಿಂಗ್ ಕೃಷ್ಣ ನಟನೆಯ, ನಿರ್ದೇಶನದ ಮತ್ತು ನಿರ್ಮಾಣದ ಲವ್ ಮಾಕ್ ಟೇಲ್ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. 2020ರ ಪ್ರಾರಂಭದಲ್ಲಿ ಬಂದ ಈ ಸಿನಿಮಾ ಕನ್ನಡ ಚಿತ್ರ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಚಿತ್ರದ ಸಕ್ಸಸ್ ಗೆ ಹಾಡುಗಳು ಕೂಡ ಪ್ರಮುಖ ಕಾರಣವಾಗಿದೆ.
ಲವ್ ಮಾಕ್ ಟೇಲ್ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. ಲವ್ ಮಾಕ್ ಟೇಲ್-2 ಮೇಲು ನಿರೀಕ್ಷೆ ಹೆಚ್ಚಾಗಿದೆ. ಪಾರ್ಟ್-2ಗೆ ಸಂಗೀತ ನೀಡಲು ರಘು ದೀಕ್ಷಿತ್ ಸಹ ಉತ್ಸುಕರಾಗಿದ್ದರು. ಚಿತ್ರದ ಹಾಡುಗಳು ಹೇಗಿರಲಿವೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೆ ರಘು ದೀಕ್ಷಿತ್ ಪಾರ್ಟ್-2ನಿಂದ ಹೊರ ಬರುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದರು. ಇದೀಗ ರಘು ದೀಕ್ಷಿತ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಅಭಿಮಾನಿಗಳಲ್ಲಿ ಅನುಮಾನ ಹುಟ್ಟುಹಾಕಿದೆ..
ಗ್ಯಾಂಗ್
ಸ್ಟರ್
ಜೊತೆ
ಸೇರಿದ
ಖ್ಯಾತ
ಗಾಯಕ
ಮತ್ತು
ಸಂಗೀತ
ನಿರ್ದೇಶಕ
ರಘು
ದೀಕ್ಷಿತ್

ಲವ್ ಮಾಕ್ ಟೇಲ್-2 ಗೆ ನಕುಲ್ ಸಂಗೀತ
ಕೆಲವು ಕಾರಣಗಳಿಂದ ರಘು ದೀಕ್ಷಿತ್ ಲವ್ ಮಾಕ್ ಟೇಲ್ ಪಾರ್ಟ-2 ನಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ. ರಘು ದೀಕ್ಷಿತ್ ಜಾಗಕ್ಕೆ ನಕುಲ್ ಅಭ್ಯಂಕರ್ ಎಂಟ್ರಿ ಕೊಟ್ಟಿದ್ದಾರೆ. ಲವ್ ಮಾಕ್ ಟೇಲ್ ಸಿನಿಮಾದಲ್ಲಿ ಹಾಡಿಗೆ ಧ್ವನಿಯಾಗಿದ್ದ ನಕುಲ್ ಇದೀಗ ಪಾರ್ಟ್-2ಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಲವ್ ಮಾಕ್ ಟೇಲ್-2 ಹಾಡಿಗೆ ಟಾಂಗ್ ಕೊಟ್ರಾ ರಘು?
ಚಿತ್ರದ ಮೊದಲ ಹಾಡು ಈಗಾಗಲೇ ರಿಲೀಸ್ ಆಗಿದೆ. ಪ್ರೇಮಿಗಳ ದಿನದಂದು ಮತ್ತು ಕೃಷ್ಣ ಹಾಗೂ ಮಿಲನಾ ಮದುವೆ ದಿನವೇ ಹಾಡು ಬಿಡುಗಡೆಯಾಗಿದೆ. ಹಾಡು ರಿಲೀಸ್ ಆದ ಎರಡು ದಿನಗಳ ಬಳಿಕ ರಘು ದೀಕ್ಷಿತ್, ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ ಹಾಕಿದ್ದಾರೆ. ರಘು ದೀಕ್ಷಿತ್ ಅವರ ಈ ಪೋಸ್ಟ್ ಲವ್ ಮಾಕ್ ಟೇಲ್-2 ಮತ್ತು ಹಾಡಿಗೆ ಟಾಂಗ್ ಕೊಟ್ಟಿದ್ದಾರಾ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ.
ಸುಳ್ಳು
ಸುದ್ದಿ
ಪ್ರಕಟಿಸಿದ
ಚಾನೆಲ್
ವಿರುದ್ಧ
ರಘು
ದೀಕ್ಷಿತ್
ಗರಂ

ರಘು ದೀಕ್ಷಿತ್ ಪೋಸ್ಟ್
'ಒಂದು ಹಾಡಿಗೆ ಆತ್ಮ ಎನ್ನುವುದು ತುಂಬಾ ಮುಖ್ಯ. ಕೇವಲ ದೊಡ್ಡ ನಿರ್ಮಾಣ, ಮಿಕ್ಸಿಂಗ್ ಮತ್ತು ಮಾಸ್ಟರ್ ಇವೆಲ್ಲಕ್ಕಿಂತ ಮುಖ್ಯ ಆತ್ಮ. ಹಾರ್ಟ್ ಹೇಗೆ ಛಿದ್ರವಾಗುತ್ತೆ ಮತ್ತು ಹೇಗೆ ಚೇತರಿಸಿಕೊಳ್ಳುತ್ತದೆ ಎನ್ನುವ ಬಗ್ಗೆ ಗೊತ್ತಿರಬೇಕು.' ಎಂದು ಹೇಳಿದ್ದಾರೆ.

ಯಾವ ಹಾಡಿನ ಬಗ್ಗೆ ಹಾಕಿರುವ ಪೋಸ್ಟ್?
ರಘು ದೀಕ್ಷಿತ್ ಅವರ ಈ ಪೋಸ್ಟ್ ಅಚ್ಚರಿ ಮೂಡಿಸಿದ್ದು, ಇದು ಲವ್ ಮಾಕ್ ಟೇಲ್ 2 ಹಾಡಿನ ಬಗ್ಗೆಯೇ ಹಾಕಿರುವ ಪೋಸ್ಟ್ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ರಘು ದೀಕ್ಷಿತ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಪೋಸ್ಟ್ ಗೆ ಲವ್ ಮಾಕ್ ಟೇಲ್-2 ತಂಡ ಕೂಡ ಪ್ರತಿಕ್ರಿಯೆ ನೀಡಿಲ್ಲ. ಇದು ನಿಜಕ್ಕೂ ಲವ್ ಮಾಕ್ ಟೇಲ್-2 ಹಾಡಿನ ಬಗ್ಗೆ ಹಾಕಿರುವ ಪೋಸ್ಟ್ ಆಗಿದೆಯಾ ಅಥವಾ ಬೇರೆ ಹಾಡಿನ ಬಗ್ಗೆ ಬರೆದುಕೊಂಡಿದ್ದಾರಾ ಎನ್ನುವುದನ್ನು ರಘು ದೀಕ್ಷಿತ್ ಅವರೇ ಉತ್ತರ ನೀಡಬೇಕು.