»   » ವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್

ವಿಡಿಯೋ: ದುನಿಯಾ ವಿಜಿ-ಭಟ್ರ 'ಕಾವೇರಿ ಗಾನ'ದ ಸಣ್ಣ ಝಲಕ್

Posted By:
Subscribe to Filmibeat Kannada

ಯೋಗರಾಜ್ ಭಟ್ರು ಅಂದ್ರೆ ಹಾಗೆ, ಏನಾದ್ರೂ ವಿಶೇಷತೆ ಇದ್ರೆ, ಅಥವಾ ಯಾವುದೋ ವಿಚಾರಕ್ಕೆ ಟಾಂಗ್ ಕೊಟ್ಟು, ಹಾಡೋ, ಡೈಲಾಗೋ, ಕವಿತೆನೋ ಬರೆದು ಬಿಡ್ತಾರೆ. ಭಟ್ರ ಈ ಚೇಷ್ಟೆಗೆ ದುನಿಯಾ ವಿಜಯ್ ಅವರು ಸಾಥ್ ಕೊಡ್ತಾರೆ.

ಇತ್ತೀಚೆಗಷ್ಟೇ ಪಿಯುಸಿ ವಿದ್ಯಾರ್ಥಿಗಳ ರಾಸಾಯನಿಕ ಪ್ರಶ್ನೆ ಪತ್ರಿಕೆ ಸೋರಿ ಹೋಗಿದ್ದಾಗ, ನಿರ್ದೇಶಕ ಯೋಗರಾಜ್ ಭಟ್ ಮತ್ತು ದುನಿಯಾ ವಿಜಯ್ ಅವರು ಒಂದು ವಿಶೇಷ ಹಾಡು ರಚಿಸಿ, ಬಿಡುಗಡೆ ಮಾಡಿದ್ದರು. ಭಟ್ರು ಮತ್ತು ವಿಜಿ ಹಾಡಿದ ಹಾಡು ಸಾಕಷ್ಟು ಸುದ್ದಿ ಮಾಡಿತ್ತು.[ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?]


Dniya Vijay lends voice for 'Cauvery' Song written by Yogaraj Bhat

ಇದೀಗ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಕೂಡ ಯೋಗರಾಜ್ ಭಟ್ರು ವಿಶೇಷ ಹಾಡು ಬರೆದಿದ್ದಾರೆ. ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಅವರು ಮ್ಯೂಸಿಕ್ ಕಂಪೋಸ್ ಮಾಡಿ, ಭಟ್ರ ಮಿರ್ಚಿಗೆ, ಇನ್ನಷ್ಟು ಮಸಾಲೆ ಬೆರೆಸಿದ್ದಾರೆ.


ಭಟ್ರ ಸಾಹಿತ್ಯಕ್ಕೆ ದುನಿಯಾ ವಿಜಿ ಅವರು ತಮ್ಮ ಧ್ವನಿ ನೀಡಿದ್ದು, ಸಖತ್ ಆಗಿ ಹಾಡಿದ್ದಾರೆ. ಈ ಹಾಡನ್ನು ವಿಜಿ ಮತ್ತು ಪ್ರಿಯಾಮಣಿ ಕಾಣಿಸಿಕೊಂಡಿರುವ 'ದನ ಕಾಯೋನು' ಚಿತ್ರದಲ್ಲಿ ಬಳಸಿಕೊಳ್ಳುತ್ತಾರಂತೆ. ಈಗಾಗಲೇ ಬಿಡುಗಡೆ ಆಗಿರುವ ಈ ವಿಡಿಯೋ ಸಾಂಗ್ ಸಾಕಷ್ಟು ರೆಸ್ಪಾನ್ಸ್ ಗಿಟ್ಟಿಸಿಕೊಳ್ಳುತ್ತಿದೆ.[ಧನ ಬೇಕು ಅಂದರೆ ಇನ್ನೊಂದಷ್ಟು ದಿನ ದನ ಕಾಯಬೇಕು!]


Dniya Vijay lends voice for 'Cauvery' Song written by Yogaraj Bhat

ದುನಿಯಾ ವಿಜಯ್ ಮತ್ತು ಯೋಗರಾಜ್ ಭಟ್ರ 'ದನ ಕಾಯೋನು' ಚಿತ್ರ ಬಿಡುಗಡೆಗೆ ತಯಾರಾಗಿದ್ದು, ದಸರಾ ಹಬ್ಬಕ್ಕೆ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿದ್ದಾರೆ. ಚಿತ್ರಕ್ಕೆ ಕನಕಪುರ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ.


Dniya Vijay lends voice for 'Cauvery' Song written by Yogaraj Bhat

ದುನಿಯಾ ವಿಜಿ ಮತ್ತು ಭಟ್ರ ಕಾಂಬಿನೇಷನ್ 'ಕಾವೇರಿ ನೀರು' ಹಾಡಿನ ಮೇಕಿಂಗ್ ಝಲಕ್ ಇಲ್ಲಿದೆ ನೋಡಿ....English summary
Watch ‘Cauvery Bhatru - Viji’ Video Song 1 starring Duniya Vijay, Lyrics by Yogaraj Bhat and Produced by R Srinivas.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada