»   » ತುಂಡ್ ಹೈಕ್ಳ್ ಸಾಂಗ್ ಪಾಲಿಟಿಕ್ಸ್ ಭಾಷೇಲಿ

ತುಂಡ್ ಹೈಕ್ಳ್ ಸಾಂಗ್ ಪಾಲಿಟಿಕ್ಸ್ ಭಾಷೇಲಿ

By: * ವಿಜಯರಾಜ್ ಕನ್ನಂತ
Subscribe to Filmibeat Kannada
Drama Movie Song Lyrics in Political Satire Style
ರಾಜಕೀಯ ನಾಯಕರನ್ನು ವಿಡಂಬನೆ ಮಾಡಲು ಹೊಸ ಕವನ ಹುಟ್ಟು ಹಾಕಬೇಕಿಲ್ಲ. ದಿನ ನಿತ್ಯ ಪಡ್ಡೆಗಳ ಬಾಯಲ್ಲಿ ಸುಪ್ರಭಾತವಾಗಿರುವ ಸಾಂಗ್ಸ್ ಹಾಂಗೆ ಸ್ವಲ್ಪ ತಿರುಗಿಸಿದರೆ ಸಾಕು. ರಾಜಕೀಯ ಪಕ್ಷಗಳು ಕೂಡಾ ತಮ್ಮ ಪ್ರಚಾರಕ್ಕೆ ಬಿಟ್ಟಿಯಾಗಿ ಕನ್ನಡ ಚಿತ್ರಗೀತೆಗಳನ್ನು ಬಳಸಿಕೊಳ್ಳುತ್ತಲೇ ಬಂದಿದೆ.

ಯೋಗರಾಜ್ ಭಟ್ಟರ ಗೀತ ಸಾಹಿತ್ಯವಿರುವ ಡ್ರಾಮಾ ಚಿತ್ರದ ತುಂಡ್ ಹೈಕ್ಳ ಸವಾಸ ಹಾಡನ್ನು ಸದ್ಯ ಯುಪಿಎ ಸರ್ಕಾರ, ಕಾಂಗ್ರೆಸ್ ಕಡೆಗೆ ತಿರುಗಿಸಿದರೆ ಹೇಗೆ ಬರಬಹುದು ಎಂಬ ಪ್ರಯತ್ನ ಇಲ್ಲಿದೆ.

ಅಂದ ಹಾಗೆ, ಇದು ಕಾಂಗ್ರೆಸ್ ಪಕ್ಷ ಟಾರ್ಗೆಟ್ ಮಾಡಿ ಬರೆದ ಸಾಹಿತ್ಯವಲ್ಲ, ಭ್ರಷ್ಟಾಚಾರದ ವಿಷಯದಲ್ಲಿ ಕಾಂಗ್ರೆಸ್, ಬಿಜೆಪಿ, ಕೆಜೆಪಿ, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದವರು ತಪ್ಪು ಎಸಗಿದರೆ ಕವಿ ಬಳಸುವ ಪೆನ್ನಿನ ಇಂಕಿನ ಮಸಿಗೆ ತಲೆಕೊಡಲೆಬೇಕು ಏನಂತೀರಾ?

ಭಂಡ್ ಈ-ಕಳ್ಳ್ ಸರ್ಕಾರಾ
ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ... ಸೋನ್ಯಾ ಕೈಲೇ ಆದೇಸಾ

ಹೆಂಗೋ ತಳ್ಳುತಾನೇ... ನಾ...ಕ್ವರ್ಸ ಮುಗ್ಸ್-ತವ್ರೆ
ಸ್ಕ್ಯಾಮ್-ಗೋಳ ಮಾಡೋದಕ್ಕೆ... ಬೋ-ಸಂಚು ಮಾಡ್ತಾವ್ರೆ

ಹಿಂಗೇ ಮಾಡಿದರೆ... ಕೈ ಸೋಲ್ತದೆ...
ಇನ್ನೂ ಸಹ್ಸಿಕೊಂಡ್ರೆ... ದೇಶಾ ಕೆಡ್ತದೆ...

ಹಿಂಗೇ ಮಾಡಿದರೆ... ಕೈ ಸೋಲ್ತದೆ...
ಇನ್ನೂ ಸಹ್ಸಿಕೊಂಡ್ರೆ... ದೇಶಾ ಕೆಡ್ತದೆ...

ಭಂಡ್ ಈ-ಕಳ್ಳ್ ಸರ್ಕಾರಾ
ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ... ಸೋನ್ಯಾ ಕೈಲೇ ಆದೇಸಾ

ಇವ್ರು ಬಾಯಿ ಬಿಟ್ರು ಅಂದ್ರೆ... ಬಣ್ಣಗೇಡು
ಈ ನಮ್ ಲೀಡರ್ಸ್-ಗೆ... ಸೆಕ್ಯುರಿಟಿ ಬೇರೆ ಕೇಡು
ಕೇ...ಡು...
ಒಂದು ವರ್ಷ ಕಳೆಯಲಿ... ಮತ್ತೆ ವೋಟು
ವೋ...ಟಲ್ಲಿ ಇಡುಗಂಟು... ಕಳೆ-ದೀತು

ಸರಿಯಾಗ್ ಒದ್ದು ಅಟ್ಟೋಕೆ... ಜನ ತೊಡೆ ತಟ್ಟಿ ಕಾಯ್ತಾವ್ರೆ
ದುಡ್ಡು ತಿಂದ ಮೋಸಕ್ಕೆ ... ಸೋಲು ಕಟ್ಟಿ ಇಟ್ಟವ್ರೇ

ಅನ್ನಾ ತಿನ್ವಾ ಅಂದ್ರೆ... ಬೆಲೆ ಏರೈತೆ
ಮುಂದೇನೂ ನೀವು ಬಂದ್ರೆ... ತ್ರಾಸು ಆಯ್ತದೆ

ಅನ್ನಾ ತಿನ್ವಾ ಅಂದ್ರೆ... ಬೆಲೆ ಏರೈತೆ
ಮುಂದೇನೂ ನೀವು ಬಂದ್ರೆ... ತ್ರಾಸು ಆಯ್ತದೆ

ಭಂಡ್ ಈ-ಕಳ್ಳ್ ಸರಕಾರ
ಸ್ಕ್ಯಾಮ್ ಹೊತ್ತ ಸರ್ದಾರಾ
ಒಬ್ಬ ಪಿಎಂ ಮೌನೇಶಾ... ಸೋನ್ಯಾ ಕಞ್ ಆದೇಸಾ

ಮೌನೇ....ಸಾಆಆಅ..... ಆದೇಸಾ ಆಅಆ
ಮೌನೇಸ ಆದೇಸಾಆಅಆ
ಮೌನೇ....ಸಾಆಆಅ... ಆದೇಸಾ...

ದುಡ್ಡಿಗೆ ಮಾರುತಾರೆ... ದೇಶವನ್ನು
ಹುರ್ಕ್ಕೊಂಡು ಮುಕ್ಕುತಾವ್ರೆ... ಜನ್ಗೋಳನ್ನು
ಜನಗೋ...ಳನ್ನು...ಉಉ

ಬೇಕಿಲ್ಲಾ... ದಬ್ಬಾಳಿಕೆ ನಮಗಿನ್ನು
ಬಡ್ಡೀ ಮಕ್ಳು...ಕಬಳಿಸ್ತಾವ್ರೆ ನಾಡನ್ನು

ಟೂಜಿ-ತ್ರೀಜಿ ತರಂಗ... ಬಯಲು-ಆಯ್ತ್ರಿ ವೃತ್ತಾಂತ
ಕೋಲು ಡೀಲು ಆದಾಗ... ಕಂಡಿದ್ವಲ್ಲಾ ಏನಂತ

ಪ್ರತೀ ಸ್ಕೀಮಿನಲ್ಲೂ ... ಸ್ಕ್ಯಾಮು ಇರ್ತಾವೆ..
ದುರಾತ್ಮರು ಮಾಡೋ ಹಲ್ಕಾ... ಎಲ್ಲಾ..ದಿಂಥಾವೇ

ಪ್ರತೀ ಸ್ಕೀಮಿನಲ್ಲೂ ... ಸ್ಕ್ಯಾಮು ಇರ್ತಾವೆ..
ದುರಾತ್ಮರು ಮಾಡೋ ಹಲ್ಕಾ... ಎಲ್ಲಾ..ದಿಂಥಾವೇ

ಭಂಡ್ ಈ-ಕಳ್ಳ್ ಸರಕಾರ
ಸ್ಕ್ಯಾಮ್ ಹೊತ್ತ ಸರ್ದಾರಾ
ಸಾ... ಸಾ... ಸಾ...
ಒಬ್ಬ ಪಿಎಂ ಮೌನೇಶಾ... ಸೋನ್ಯಾ ಕೈಲೇ ಆದೇಸಾ
ಸಾ... ಸಾ... ಸಾ...
ಕುಂಞ್...

ಮೂಲ: 'ಡ್ರಾಮಾ' ಚಿತ್ರದ 'ತುಂಡ್ ಹೈಕ್ಳ ಸಾವಾಸ...ಮೂರ್ ಹೊತ್ತೂ ಉಪ್ವಾಸಾ'
_________________________________________________________
ತುಂಡ್ ಹೈಕ್ಳ ಸಾವಾಸಾ
ಮೂರ್ ಹೊತ್ತೂ ಉಪ್ವಾಸಾ
ಒಬ್ಬ ಟೀಕೆ ಎಂಕ್ಟೇಸಾ... ಒಬ್ಬ ಕ್ವಾಟ್ಲೆ ಸತೀಸಾ

ಎಂಗೋ... ಮೊನ್ನೆ ತಾನೇ... ಪೀಯೂ...ಸಿ ಮುಗ್ಸವ್ರೆ
ಊರ್ ಹಾಳು ಮಾಡೋದಕ್ಕೆ... ರೀ...ಸರ್ಚು ನಡ್ಸವ್ರೆ

ಹೆಂಗೇ ಹಾಡಿದರೂ... ಬಾಯ್ ನೋಯ್ತವೆ
ಇನ್ನೂ ಕೇಳಿದರೆ... ಕಿವಿ ಹೋಯ್ತವೆ

ಹೆಂಗೇ ಹಾಡಿದರೂ... ಬಾಯ್ ನೋಯ್ತವೆ
ಇನ್ನೂ ಕೇಳಿದರೆ... ಕಿವಿ ಹೋಯ್ತವೆ

ತುಂಡ್ ಹೈಕ್ಳ ಸಾವಾಸ
ಮೂರ್ ಹೊತ್ತೂ ಉಪ್ವಾಸ
ಒಬ್ಬ ಟೀಕೆ ಎಂಕ್ಟೇಸಾ... ಒಬ್ಬ ಕ್ವಾಟ್ಲೆ ಸತೀಸಾ

ಇವ್ರು ಕಾಲು ಇಟ್ರು ಅಂದ್ರೆ... ಅದೇ ರೋಡು
ಈ ನನ್ ಮಕ್ಳಿಗೆ... ಬಯೋಡಾಟಾ ಬ್ಯಾರೆ ಕೇಡು
ಕೇ...ಡು...

ಯವ್ವನದ ಹೊಳೆಯಲ್ಲಿ... ಹಳೇ ಬೋಟು
ಬೋಟ....ಲ್ಲಿ ನೂರಾ ಎಂಟು... ಹಳೇ ತೂತು
ಬೆಳಗಾಗ್ ಎದ್ದು ಬೆಟ್ಟಕ್ಕೇ... ಅರೆ ದಾರಾ ಕಟ್ಟಿ ಎಳ್ದವ್ರೇ
ಓಡುತ್ತಿದ್ದ ಕಾಲಕ್ಕೆ... ಕಾಲು ಅಡ್ಡ ಇಟ್ಟವ್ರೇ

ಅನಾಸಿನ್ನು ತಿಂದ್ರೂ... ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ... ಗ್ಯಾಸು ಆಯ್ತದೆ

ಅನಾಸಿನ್ನು ತಿಂದ್ರೂ... ತಲೆ ನೋಯ್ತಾವೆ
ಚಿಂತೇಲಿ ಊಟ ಬಿಟ್ರೆ... ಗ್ಯಾಸು ಆಯ್ತದೆ

ತುಂಡ್ ಹೈಕ್ಳ ಸಹವಾಸಾ
ಮೂರ್ ಹೊತ್ತೂ ಉಪ್ವಾ..ಸಾ
ಒಬ್ಬ ಟೀಕೆ ಎಂಕ್ಟೇಸ... ಒಬ್ಬ ಆಞ್ ಸತೀಸಾ

ವೆಂಕ್ಟೇ....ಸಾಆಆಅ..... ಸತೀಸಾಆಅಆ
ವೆಂಕ್ಟೇಆಆಅ... ಸತೀಸಾಆಅಆ
ವೆಂಕ್ಟೇ....ಸಾಆಆಅ... ಸತೀಸಾ

ದೊಡ್ಡೋರು ಕೊಡೋದಿಲ್ಲಾ... ಪರ್ಮಿಸನ್ನು
ಕಾಂಪೌಂಡು ಹಾರುತಿದೆ... ಜನ್ರೇಸನ್ನು
ಜನರೇ...ಶನ್ನು...ಉಉ

ಬೇಕಿಲ್ಲಾ... ಪ್ರಳಯಕೆ ಕಾಯೋದಿನ್ನು
ತುಂಡ್ ಹೈಕ್ಳು... ಮುಳುಗಿಸ್ತಾರೆ ಊರನ್ನು

ಮೀಸೆ-ಗೀಸೆ ಬಂದಾಗ... ಹಗಲು-ರಾತ್ರಿ ರಾದ್ಧಾಂತ
ಬಿಳೀ ಗಡ್ದ ಬಂದಾಗ... ಹೇಳಿದ್ದೆಲ್ಲಾ ವೇದಾಂತ

ಪ್ರತೀ ಎಂಡಿನಲ್ಲೂ... ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ... ಎಲ್ಲಾ..ದಿಂಥಾವೇ

ಪ್ರತೀ ಎಂಡಿನಲ್ಲೂ... ಸ್ಟಾರ್ಟು ಇರ್ತಾವೇ
ಪರಮಾತ್ಮ ಮಾಡೋ ಕೆಲ್ಸಾ... ಎಲ್ಲಾ..ದಿಂಥಾವೇ

ತುಂಡ್ ಹೈಕ್ಳ ಸಹವಾಸಾ
ಮೂರ್ ಹೊತ್ತೂ ಉಪ್ವಾಸಾ
ಸಾ... ಸಾ... ಸಾ...
ಒಬ್ಬ ಟೀಕೆ ಎಂಕ್ಟೇಸ... ಒಬ್ಬ ಕ್ವಾಟ್ಲೆ ಸತೀಸಾ
ಸಾ... ಸಾ... ಸಾ...
ಆಞ್...

English summary
Drama movie Thund haiklu sahavasa song lyrics is re written in satire style by Vijayraj Kannatha. This is purely entertaining stuff not hurting sentiment of any party or person in particular. Original lyrics by Yogaraj Bhat
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada