For Quick Alerts
  ALLOW NOTIFICATIONS  
  For Daily Alerts

  Rap ಲೆಜೆಂಡ್ DMX ನಿಧನ; ಪ್ರಿಯಾಂಕಾ, ರಣ್ವೀರ್ ಸೇರಿದಂತೆ ಅನೇಕ ಗಣ್ಯರ ಸಂತಾಪ

  |

  ಅಮೆರಿಕದ ಖ್ಯಾತ ರ್ಯಾಪ್ ಗಾಯಕ, ಲೆಜೆಂಡ್ ಡಿಎಂಎಕ್ಸ್ ನಿಧನ ಹೊಂದಿದ್ದಾರೆ. 50 ವರ್ಷದ ಗಾಯಕ ಹೃದಯಾಘಾತದಿಂದ ನಿನ್ನೆ (ಏಪ್ರಿಲ್ 09) ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಡಿಎಂಎಕ್ಸ್ ವೆಂಟಿಲೇಟರ್ ಮೂಲಕ ಉಸಿರಾಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.

  ಈ ಬಗ್ಗೆ ಡಿಎಂಎಕ್ಸ್ ಪರ ವಕೀಲರು ಹೇಳಿಕೆ ಬಿಡುಗಡೆ ಮಾಡಿ, ಮಾಹಿತಿ ನೀಡಿದ್ದಾರೆ. 'ಅವರು ಕೊನೆಯವರೆಗೂ ಹೋರಾಡಿದ ಯೋಧ. ಅವರು ತಮ್ಮ ಕುಟುಂಬವನ್ನು ತುಂಬಾ ಪ್ರೀತಿಸುತ್ತಿದ್ದರು. ನಾವು ಅವರೊಂದಿಗೆ ಕಳೆದ ಸಮಯವನ್ನು ಪ್ರೀತಿಸುತ್ತೇವೆ'. ಎಂದು ಹೇಳಿದ್ದಾರೆ.

  'ಹ್ಯಾರಿ ಪಾಟರ್' ಖ್ಯಾತಿಯ ನಟ ಪೌಲ್ ರಿಟರ್ ಬ್ರೇನ್ ಟ್ಯೂಮರ್‌ನಿಂದ ನಿಧನ'ಹ್ಯಾರಿ ಪಾಟರ್' ಖ್ಯಾತಿಯ ನಟ ಪೌಲ್ ರಿಟರ್ ಬ್ರೇನ್ ಟ್ಯೂಮರ್‌ನಿಂದ ನಿಧನ

  1990ರ ದಶಕದಲ್ಲಿ ಖ್ಯಾತಿಗಳಿಸಿದ್ದ ಡಿಎಂಎಕ್ಸ್ 'ಎಕ್ಸ್ ಗಾನ್', ಗಿವ್ ಇಟ್ ಟು ಯಾ, ಪಾರ್ಟಿ ಅಪ್ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆದಿದ್ದರು. ಹಿಪ್ ಹಾಪ್ ಶೈಲಿಯ ಹಾಡುಗಳಿಗೆ ಹೆಚ್ಚು ಪ್ರಖ್ಯಾತಿ ಪಡೆದಿದ್ದರು. ಡಿಎಂಎಕ್ಸ್ ಮೂಲ ಹೆಸರು ಅರ್ಲ್ ಸಿಮ್ಮನ್ಸ್. ಆದರೆ ಡಾರ್ಕ್ ಮ್ಯಾನ್ ಎಕ್ಸ್ (ಡಿಎಂಎಕ್ಸ್) ಅಂತನೆ ವಿಶ್ವ ಪ್ರಸಿದ್ಧಿ ಗಳಿಸಿದ್ದಾರೆ.

  ನ್ಯೂಯಾರ್ಕ್ ನಲ್ಲಿ ಹುಟ್ಟಿ ಬೆಳೆದ ಡಿಎಂಎಕ್ಸ್ ಬಾಲ್ಯ ತುಂಬಾ ಕಠಿಣವಾಗಿತ್ತು. ತಾಯಿಯೊಂದಿಗೆ ಬೆಳೆದ ಡಿಎಂಎಕ್ಸ್ ತೀರ ನಿಂದನೆಗೆ ಒಳಗಾಗಿದ್ದರು. ಡಿಎಂಎಕ್ಸ್ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ನಟ ರಣ್ವೀರ್ ಸಿಂಗ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಅನೇಕರು ಕಂಬನಿ ಮಿಡಿಸಿದ್ದಾರೆ.

  ರಣ್ವೀರ್ ಸಿಂಗ್, ಈ ಸುದ್ದಿ ಕೇಳಿ ಹೃದಯ ಛಿದ್ರವಾಯಿತು ಎಂದು ಬರೆದುಕೊಂಡಿದ್ದಾರೆ. ನಟಿ ಪ್ರಿಯಾಂಕಾ ಚೋಪ್ರಾ, ಅವರ ಹಾಡುಗಳನ್ನು ಕೇಳುತ್ತಾ ಹೇಗೆ ಬೆಳೆದರು ಮತ್ತು ಅವರ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞಳಾಗಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

  English summary
  Famous Rapper DMX passes away at age of 50. Bollywood stars Priyanka Chopra, Ranveer singh are mourning his death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X