»   » 2015ರ ಟಾಪ್ 15 ಹಾಡುಗಳು: ಇದರಲ್ಲಿ ನಿಮ್ಮ ಆಯ್ಕೆಯಾವುದು?

2015ರ ಟಾಪ್ 15 ಹಾಡುಗಳು: ಇದರಲ್ಲಿ ನಿಮ್ಮ ಆಯ್ಕೆಯಾವುದು?

Posted By:
Subscribe to Filmibeat Kannada

'ಒಲವಿನ ಪೂಜೆಗೆ ಒಲವೇ ಮಂದಾರ ಒಲವೇ ಬದುಕಿನ ಬಂಗಾರ' ಅನ್ನೋ ಮೇರು ಸಾಹಿತ್ಯ, ಇಂಪಾದ ಸಂಗೀತವಿರುವ ಹಾಡನ್ನೂ ಕೇಳಿದ್ದೇವೆ. 'ಅಪ್ಪಾ ಲೂಸಾ.. ಅಮ್ಮಾ ಲೂಸಾ' ಎನ್ನುವ ಹಾಡುಗಳೂ ಸ್ಯಾಂಡಲ್ ವುಡ್ ನಲ್ಲಿ ಹಿಟ್ ಆಗಿವೆ.

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರಗಳ ಮಾರುಕಟ್ಟೆ ವಿಸ್ತಾರಗೊಂಡಂತೇ, ಆಡಿಯೋ ಮಾರುಕಟ್ಟೆಯಲ್ಲೂ ಗಣನೀಯ ಸುಧಾರಣೆ ಕಂಡಿದೆ. ಹಾಗಂತ, ಅತ್ಯುತ್ತಮ ಸಾಹಿತ್ಯವಿರುವ, ಸಂಗೀತವಿರುವ ಹಾಡುಗಳು ಕನ್ನಡದಲ್ಲಿ ಹೆಚ್ಚು ಹೆಚ್ಚು ಬರುತ್ತಿವೆ ಎಂದರ್ಥವಲ್ಲ. (ಗಾಂಧಿನಗರದಲ್ಲಿ ಈ ವರ್ಷ ಸಿನಿಮಾ ಬೋರು, ಕಿರಿಕ್ ಜೋರು)

70-80ರ ದಶಕಗಳಲ್ಲಿ ಬಿಡುಗಡೆಗೊಂಡ ಚಿತ್ರಗಳ ಹಾಡುಗಳು ಈಗಲೂ ತಮ್ಮ ತಾಕತ್ತನ್ನು ಉಳಿಸಿಕೊಂಡಂತೆ, ಈಗಿನ ಚಿತ್ರಗಳಲ್ಲಿನ ಹಾಡುಗಳು ಅಂಥಾ ಪ್ರಭಾವವನ್ನು ಬೀರುವಲ್ಲಿ ವಿಫಲವಾಗಿದೆ. ಅಲ್ಲೊಮ್ಮೆ, ಇಲ್ಲೊಮ್ಮೆ ಒಳ್ಳೆ ಹಾಡುಗಳೂ ಬಂದಿವೆ.

2015ರ ಜನವರಿಯಿಂದ ಜೂನ್ ವರೆಗೆ 29, ಜುಲೈನಿಂದ ಡಿಸೆಂಬರ್ ವರೆಗೆ 80ಕ್ಕೂ ಹೆಚ್ಚು ಚಿತ್ರಗಳು ಈ ವರ್ಷ ಬಿಡುಗಡೆಗೊಂಡಿವೆ. ಒಟ್ಟಾರೆ ಈ ವರ್ಷದಲ್ಲಿ ಬಿಡುಗಡೆಗೊಂಡ ಶತಕಕ್ಕೂ ಹೆಚ್ಚು ಚಿತ್ರಗಳ ಪೈಕಿ, ಪ್ರೇಕ್ಷಕರ ಬಾಯಲ್ಲಿ ಗುನುಗುತ್ತಿರುವಂತಹ ಆಯ್ದ 15 ಹಾಡನ್ನು ಸ್ಲೈಡಿನಲ್ಲಿ ಮುಂದುವರಿಸಿದ್ದೇವೆ.

ಜೊತೆಗೆ ಈ ವರ್ಷ ರಾಜ್ ಅಭಿನಯದ 1974ರಲ್ಲಿ ಮೂಲ ಬಿಡುಗಡೆಗೊಂಡಿದ್ದ 'ಎರಡು ಕನಸು' ಚಿತ್ರ ಫೆಬ್ರವರಿ ಆರರಂದು ರಿರಿಲೀಸ್ ಆಗಿತ್ತು. ಆ ಚಿತ್ರದ ಹಾಡುಗಳು ಲೇಖನದ ಸ್ಲೈಡಿನಲ್ಲಿ ಇಲ್ಲ, ಆ ಚಿತ್ರದ ಹಾಡುಗಳಿಗೆ ಸರಿಸಾಟಿಯೂ ಇಲ್ಲ ಬಿಡಿ.. (ಈ ವರ್ಷ ಹಸೆಮಣೆ ಏರಿ ಚತುರ್ಭಜರಾದ ತಾರೆಯರು)

ಈ ಟಾಪ್ 15 ಹಾಡುಗಳ ಪೈಕಿ ನಿಮ್ಮ ಆಯ್ಕೆಯಾವುದು, ಪಟ್ಟಿಯಲ್ಲಿ ಇಲ್ಲದ 2015ರ ನಿಮ್ಮ ಆಯ್ಕೆಯ ಹಾಡುಗಳು ಬೇರೆಯದ್ದೇ ಆಗಿದ್ದರೆ ಕಾಮೆಂಟ್ ಬಾಕ್ಸಿನಲ್ಲಿ ತಿಳಿಸಿ. (ಸ್ಲೈಡಿನಲ್ಲಿರುವ ಹಾಡುಗಳು ಜನಪ್ರಿಯತೆ ಪಡೆದ ಕ್ರಮಾಂಕದಲ್ಲಿಲ್ಲ, ಚಿತ್ರ ಬಿಡುಗಡೆಯಾದ ದಿನಾಂಕದ ಆಧಾರದಲ್ಲಿದೆ)

ಚಿತ್ರ: ಬೆಂಕಿಪಟ್ಣ

ಸಂಗೀತ: ಸ್ಟೀವ್ ಕೌಶಿಕ್
ಸಾಹಿತ್ಯ : ಜಯಂತ್ ಕಾಯ್ಕಿಣಿ
ಹಾಡು: ಬೊಗಸೆಯಲ್ಲಿ ಮಳೆ ಬಂದಂತೆ
ಹಾಡಿರುವವರು: ರಾಜೇಶ್ ಕೃಷ್ಣನ್, ಅನುರಾಧ ಭಟ್

ಚಿತ್ರ: ಕೃಷ್ಣಲೀಲಾ

ಸಂಗೀತ: ವಿ ಶ್ರೀಧರ್
ಸಾಹಿತ್ಯ: ಶಿವ ತೇಜಶ್ವಿ
ಹಾಡು: ಮಾತಾಡ್ರೋ.. ಮಾತಾಡಿ
ಹಾಡಿರುವವರು: ಶಶಾಂಕ್ ಶೇಷಗಿರಿ

ಚಿತ್ರ: ರಾಟೆ

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಎ ಪಿ ಅರ್ಜುನ್
ಹಾಡು: ಜೋಡಕ್ಕಿ ಗೂಡ್ ಕಟ್ ಕೊಂಡ್ತಾವೆ..
ಹಾಡಿರುವವರು: ಸುದೀಪ್

ಚಿತ್ರ: ರಣವಿಕ್ರಮ

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಕವಿರಾಜ್
ಹಾಡು: ನೀನೇ..ನೀನೆ..
ಹಾಡಿರುವವರು: ಪುನೀತ್ ರಾಜಕುಮಾರ್, ಪಾಲಕ್ ಮುಚ್ಚಲ್

ಚಿತ್ರ: ರನ್ನ

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಯೋಗರಾಜ್ ಭಟ್
ಹಾಡು: ಸೀರೇಲಿ..
ಹಾಡಿರುವವರು: ವಿಜಯ್ ಪ್ರಕಾಶ್

ಚಿತ್ರ: ವಜ್ರಕಾಯ

ಸಂಗೀತ: ಅರ್ಜುನ್ ಜನ್ಯ
ಸಾಹಿತ್ಯ: ಮೋಹನ್
ಹಾಡು: ನೋ ಪ್ರಾಬ್ಲಂ..
ಹಾಡಿರುವವರು: ಧನುಶ್

ಚಿತ್ರ: ರಂಗಿತರಂಗ

ಸಂಗೀತ: ಅನೂಪ್ ಭಂಡಾರಿ
ಸಾಹಿತ್ಯ: ಅನೂಪ್ ಭಂಡಾರಿ
ಹಾಡು: ಕರೆಯೋಲೆ..
ಹಾಡಿರುವವರು: ಇಂಚರ ರಾವ್

ಚಿತ್ರ: ಉಪ್ಪಿ 2

ಸಂಗೀತ: ಗುರುಕಿರಣ್
ಸಾಹಿತ್ಯ: ಉಪೇಂದ್ರ
ಹಾಡು: ಎಕ್ಸೂಸ್ ಮಿ, ಎಲ್ರಾ ಕಾಲ್ ಏಳೀತದೇ ಕಾಲ
ಹಾಡಿರುವವರು: ಉಪೇಂದ್ರ

ಚಿತ್ರ: ಆಟಗಾರ

ಸಂಗೀತ: ಅನೂಪ್ ಸೀಳನ್
ಸಾಹಿತ್ಯ: ರೋಹಿತ್ ಪಡ್ಕಿ
ಹಾಡು: ತಾರಮ್ಮಯ್ಯಾ..
ಹಾಡಿರುವವರು: ಸಂತೋಶ್ ವೆಂಕಿ, ಸುಪ್ರಿಯಾ ಲೋಹಿತ್

ಚಿತ್ರ: ಮುದ್ದು ಮನಸೇ

ಸಂಗೀತ: ವಿನೀತ್ ರಾಜ್ ಮೆನನ್
ಸಾಹಿತ್ಯ: ವಿ ನಾಗೇಂದ್ರ ಪ್ರಸಾದ್
ಹಾಡು: ಎದೆಯಲ್ ಯಾರೋ ಘಜಲ್..
ಹಾಡಿರುವವರು: ರಾಜೇಶ್ ಕೃಷ್ಣನ್, ಅರ್ಚನಾ ರವಿ

ಚಿತ್ರ: ಕೆಂಡಸಂಪಿಗೆ

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡು: ಕನಸಲಿ ನಡೆಸು
ಹಾಡಿರುವವರು: ಶ್ವೇತಾ ಮೆನನ್

ಚಿತ್ರ: ನಾನು ಅವನಲ್ಲ, ಅವಳು

ಸಂಗೀತ: ಅನೂಪ್ ಸೀಳಿನ್
ಸಾಹಿತ್ಯ: ಅರಸು ಅಂತರೆ
ಹಾಡು: ವಾರೇ ವಾರೇ ಸುವ್ವಾರಿ ನಾನು
ಹಾಡಿರುವವರು: ಅನೂಪ್ ಸೀಳಿನ್

ಚಿತ್ರ: ಮಿ. ಐರಾವತ

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಯೋಗರಾಜ್ ಭಟ್
ಹಾಡು: ಕಾಕಗುಣಿಸಿ.. ಡಾರ್ಲಿಂಗ್
ಹಾಡಿರುವವರು: ಇಂದು ನಾಗರಾಜ್

ಚಿತ್ರ: ಫಸ್ಟ್ ರ್ಯಾಂಕ್ ರಾಜು

ಸಂಗೀತ: ಕಿರಣ್ ರವೀಂದ್ರನಾಥ್
ಸಾಹಿತ್ಯ: ಹೃದಯ ಶಿವ
ಹಾಡು: ಶುರುಶುರು ಈ ಪ್ರೀತಿಯು..
ಹಾಡಿರುವವರು: ಶ್ರೇಯಾ ಘೋಷಾಲ್

ಚಿತ್ರ: ಮಾಸ್ಟರ್ ಪೀಸ್

ಸಂಗೀತ: ವಿ ಹರಿಕೃಷ್ಣ
ಸಾಹಿತ್ಯ: ಮಂಜು ಮಾಂಡವ್ಯ
ಹಾಡು: ಅಣ್ಣಾಂಗೇ ಲವ್ ಆಗಿದೆ..
ಹಾಡಿರುವವರು: ಯಶ್, ಚಿಕ್ಕಣ್ಣ

English summary
Fifteen best songs of the year 2015. Fifteen songs selected out of 100+ movies released during the year 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada