For Quick Alerts
  ALLOW NOTIFICATIONS  
  For Daily Alerts

  ಮತ್ತೆ ರೊಮ್ಯಾಂಟಿಕ್ ಗಾಳಿಪಟ ಹಾರಿದ ಯೋಗರಾಜ್ ಭಟ್ಟರು

  |

  ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಸಿನಿಮಾ ಕುತೂಹಲ ಕೆರಳಿಸುತ್ತವೆ. ಸಿನಿಮಾದಲ್ಲಿ ಇವರಿಬ್ಬರ ರೊಮ್ಯಾಂಟಿಕ್ ಸ್ಟೋರಿ ಪರಿ ಪ್ರೇಕ್ಷಕರಿಗೆ ಕಚಗುಳಿ ಇಡುತ್ತವೆ. ಈಗ ಮತ್ತೆ ಈ ಜೋಡಿ ಒಂದಾಗಿದೆ. ಇವರೊಂದಿಗೆ ದಿಗಂತ್ ಹಾಗೂ ಪವನ್ ಕುಮಾರ್ ಕೂಡ ಜೊತೆಯಾಗಿದ್ದಾರೆ.

  ಯೋಗರಾಜ್‌ ಭಟ್, ಗಣೇಶ್, ದಿಗಂತ್ ಹಾಗೂ ಪವನ್ ಕುಮಾರ್ ಈ ಮೂವರು ಒಟ್ಟಿಗೆ ಸೇರಿದರೆ ಅದೊಂದು ಗಾಳಿಪಟವನ್ನು ನೆನಪಿಸದೆ ಇರುವುದಿಲ್ಲ. ಈಗ ಮತ್ತೆ ಗಾಳಿಪಟ ಜೋಡಿ ಒಂದಾಗಿದೆ. ಈ ಬಾರಿ ರಾಜೇಶ್ ಕೃಷ್ಣನ್ ಒಬ್ಬರು ಮಿಸ್ಸಿಂಗ್ ಅಷ್ಟೇ. ಇಲ್ಲೂ ಕೂಡ ಇವರ ಹಾಡುಗಳ ಜರ್ನಿ ಮುಂದುವರೆದಿದೆ. ಭಟ್ಟರು ಮತ್ತೊಂದು ರೊಮ್ಯಾಂಟಿಕ್ ಸಾಂಗ್ ಅನ್ನು ರಿಲೀಸ್ ಮಾಡಿದ್ದಾರೆ.

  'ನೀನು ಬಗೆಹರಿಯದ ಹಾಡು' ರೊಮ್ಯಾಂಟಿಕ್ ಜರ್ನಿ ಆರಂಭ

  ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಒಂದೆಡೆಯಾದರೆ, ಇನ್ನೊಂದು ಕಡೆ ಜಯಂತ್ ಕಾಯ್ಕಿಣಿ ಹಾಗೂ ಭಟ್ಟರ ಜೋಡಿನೂ ಮೋಡಿ ಮಾಡುತ್ತಲೇ ಇದೆ. ಈಗ ಬಿಡುಗಡೆಯಾಗಿರುವ 'ಗಾಳಿಪಟ 2' ಚಿತ್ರದ ರೊಮ್ಯಾಂಟಿಕ್ ಸಾಂಗ್ ಕೂಡ ಸಂಗೀತ ಪ್ರಿಯರಿಗೆ ಇಷ್ಟ ಆಗುತ್ತಿದೆ. ಅದುವೇ "ನೀನು ಬಗೆ ಹರಿಯದ ಹಾಡು.."

  ಅರ್ಜುನ್ ಸಂಗೀತ ನೀಡಿರುವ ಈ ಸಿನಿಮಾದ ಹಾಡುಗಳು ಸಿನಿಪ್ರಿಯರಿಗೆ ಇಷ್ಟ ಆಗುತ್ತಿದೆ. ಮೂವರು ದಿಗ್ಗಜರ ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರೋ ಈ ಹಾಡು ಸಖತ್ ಕಿಕ್ ಕೊಡುತ್ತಿದೆ. ಇನ್ನು ಈ ಹಾಡನ್ನು ಇಂಡಿಯನ್ ಐಡಲ್‌ನಲ್ಲಿ ಭಾಗವಹಿಸಿ ಜನಮನಗೆದ್ದಿರೋ ಗಾಯಕ ನಿಹಾಲ್ ಟೌರೊ ಧ್ವನಿ ನೀಡಿದ್ದಾರೆ. ಮೂಲತ: ಮೂಡುಬಿದಿರೆಯವರಾದ ನಿಹಾಲ್ ಧ್ವನಿ ಸಖತ್ ಆಗಿಯೇ ಸೂಟ್ ಆಗಿದೆ.

  ರೊಮ್ಯಾಂಟಿಕ್ ಮೂಡಿಗೆ ಜಾರಿದ ಪವನ್ ಕುಮಾರ್

  ವಿಶೇಷ ಅಂದರೆ, ನಿರ್ದೇಶಕ ಪವನ್ ಕುಮಾರ್ ಈ ಸಿನಿಮಾದ ಮೂಲಕ ರೊಮ್ಯಾಂಟಿಕ್ ಹೀರೊ ಆಗುವ ಎಲ್ಲಾ ಸಾಧ್ಯಗಳು ಇವೆ. ಸ್ಲಿಮ್ ಆಗಿ, ಮೀಸೆ ತೆಗೆದು ನಟಿ ಶರ್ಮಿಳಾ ಮಾಂಡ್ರೆಯೊಂದಿಗೆ ಡ್ಯುಯೆಟ್ ಹಾಡಿದ್ದಾರೆ. ಈ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಗಳಿಸುತ್ತಿದೆ.

  ಪವನ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಕಾಂಬಿನೇಷನ್‌ನಲ್ಲಿ ಬಂದಿರೊ ಈ ಹಾಡನ್ನು ಕುದುರೆಮುಖದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಧನು ನೃತ್ಯ ಸಂಯೋಜನೆ ಮಾಡಿದ್ದು, ಪರಿಸರದ ಸೌಂದರ್ಯವನ್ನು ಸವಿಯಬಹುದಾಗಿದೆ.

  Ganesh Diganth Pawan Kumar Starrer Gaalipata 2 second Song Released

  ಇನ್ನೂ ಟ್ರೈಲರ್ ರಿಲೀಸ್ ಆಗಿಲ್ಲ

  ಸ್ಯಾಂಡಲ್‌ವುಡ್‌ನ 'ಗಾಳಿಪಟ' ಸಖತ್ ಕ್ರೇಜ್ ಹುಟ್ಟಾಕಿತ್ತು. ಈಗ ಅದೇ ಸಿನಿಮಾದ ಎರಡನೇ ಭಾಗ ಬಿಡುಗಡೆಗೆ ಸಜ್ಜಾಗಿದೆ. ಇದೇ ಆಗಸ್ಟ್ 12ರಂದು ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರೇಕ್ಷಕರಿಗೆ ಸಿನಿಮಾ ನೋಡಲು ಕಾದು ಕೂತಿದ್ದಾರೆ.

  "ನೀನು ಬಗೆಹರಿಯದ ಹಾಡು" ಹಾಡಿನ ಬಳಿಕ ಇದೇ ಸಿನಿಮಾದ ಟೀಸರ್ ಹಾಗೂ ಟ್ರೈಲರ್ ಎರಡೂ ಬಿಡುಗಡೆಯಾಗಲಿದೆ. ಅಲ್ಲದೆ ಇನ್ನೂ ಎರಡು ಹಾಡುಗಳನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ದಿಗಂತ್, ಪವನ್ ಕುಮಾರ್, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತನಾಗ್, ಸುಧಾ ಬೆಳವಾಡಿ, ಬುಲೆಟ್ ಪ್ರಕಾಶ್, ಪದ್ಮಜಾರಾವ್ ಸೇರಿದಂತೆ ಹಲವು ಕಲಾವಿದರಿದ್ದಾರೆ.

  English summary
  Ganesh Diganth Pawan Kumar Starrer Gaalipata 2 second Song Released. Know More.
  Monday, July 25, 2022, 0:18
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X