Don't Miss!
- Sports
ICC Men's ODI Cricketer Of 2022: ಸತತ 2ನೇ ಬಾರಿ ಐಸಿಸಿ ಪ್ರಶಸ್ತಿ ಗೆದ್ದ ಬಾಬರ್ ಅಜಂ
- News
74th Republic Day: ದೇಶಾದ್ಯಂತ ಗಣರಾಜ್ಯೋತ್ಸವ, ದೇಶಭಕ್ತಿ ಮೆರೆದ ರಾಜ್ಯಗಳು
- Finance
ಅಕ್ಕಿ, ಗೋಧಿ, ಹಿಟ್ಟು ಬೆಲೆ ಏರಿಕೆ: ಎಚ್ಚರಿಕೆಯ ಕರೆಗಂಟೆಯೇ?
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Automobiles
ಪ್ರತಿ ತಿಂಗಳಿಗೆ Just 7 ಸಾವಿರ ಪಾವತಿಸುವ ಮೂಲಕ ಹೊಸ ಕಾರು ಖರೀದಿಸಿ..
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಿವಾದಕ್ಕೆ ಕಾರಣವಾಗಿರುವ 'ಪಠಾಣ್' ಸಿನಿಮಾದ 'ಬೇಷರಮ್' ಹಾಡಿನ ಅರ್ಥವೇನು? ಇಲ್ಲಿದೆ ಭಾವಾನುವಾದ
ಶಾರುಖ್ ಖಾನ್ ನಟನೆಯ 'ಪಠಾಣ್' ಸಿನಿಮಾ ಈಗ ವಿವಾದಕ್ಕೆ ಕಾರಣವಾಗಿದೆ. ಸಿನಿಮಾವನ್ನು ಬ್ಯಾನ್ ಮಾಡಬೇಕೆಂಬ ಒತ್ತಾಯ ಕೇಳಿಬರುತ್ತಿದೆ. 'ಪಠಾಣ್' ಸಿನಿಮಾದ 'ಬೇಷರಮ್' ಹಾಡು ಈ ವಿವಾದಗಳಿಗೆ ಕಾರಣ.
'ಬೇಷರಮ್' ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿ ನರ್ತಿಸಿದ್ದಾರೆ. ಇದು ಹಿಂದುಪರ ಸಂಘಟನೆಗಳ ಕಣ್ಣು ಕೆಂಪಾಗುವಂತೆ ಮಾಡಲಾಗಿದೆ. ಅಲ್ಲದೆ ಈ ಹಾಡಿನ ಸಾಲುಗಳು ಸಹ ಕೇಸರಿ ಬಣ್ಣವನ್ನು ಅಣಕಿಸುವಂತಿವೆ ಎಂದು ಕೆಲವರು ವಾದ ಮುಂದಿಟ್ಟಿದ್ದಾರೆ.
'ಬೇಷರಮ್' ಹಾಡಿನಲ್ಲಿ ನಟಿ ದೀಪಿಕಾ ಹಳದಿ, ಚಿನ್ನದ ಬಣ್ಣ, ಕೇಸರಿ ಬಣ್ಣ ಸೇರಿದಂತೆ ಹಲವು ಬಣ್ಣದ ಬಿಕಿನಿಗಳನ್ನು ಧರಿಸಿದ್ದಾರೆ. ತುಸು ಹೆಚ್ಚೇ ಗ್ಲಾಮರಸ್ ಆಗಿದೆ ಆ ಹಾಡು. ಹಾಡಿನ ಅರ್ಥದ ಬಗ್ಗೆಯೂ ವಿವಾದ ಎದ್ದಿರುವ ಕಾರಣ. ಆ ಹಾಡಿನ ಅರ್ಥ ಕನ್ನಡದಲ್ಲಿ ಏನು ಎಂಬುದನ್ನು ಇಲ್ಲಿ ನೀಡಲಾಗಿದೆ. ಹಾಡಿನಲ್ಲಿ ಬಳಕೆಯಾಗಿರುವ ಹಿಂದಿ ಪದಗಳ ಯಥಾವತ್ ಅರ್ಥದ ಬದಲಿಗೆ ಹಾಡಿನಲ್ಲಿ ಆ ಪದಗಳು ಯಾವ ಅರ್ಥದಲ್ಲಿ ಬಳಕೆಯಾಗಿವೆಯೋ ಆ ಅರ್ಥವನ್ನು ಇಲ್ಲಿ ನೀಡಲಾಗಿದೆ.

ವಿವಾದಕ್ಕೀಡಾಗಿರುವ ಆ ಸಾಲಿನ ಅರ್ಥವೇನು?
(ಹಮೇ ತೋ ಲೂಟ್ ಲಿಯಾ ಮಿಲ್ಕೆ ಇಷ್ಕ್‌ವಾಲೋನೆ
ಬೊಹೊತ್ ಹೀ ತಂಗ್ ಕಿಯಾ ಅಬ್‌ತಕ್ ಇನ್ ಖಯಾಲೋನೆ
ನಶಾ ಚಡಾ ಜೋ ಶರೀಫಿಕಾ ಉತಾರ್ ಫೇಕಾ ಹೇ
ಬೇಷರಮ್ ರಂಗ್ ಕಹಾ ದೇಕಾ ದುನಿಯಾ ವಾಲೋನೆ)
ಪ್ರೀತಿಸುವವರೆಲ್ಲ ಸೇರಿ ನನ್ನನ್ನು ಲೂಟಿ ಮಾಡಿಬಿಟ್ಟರು
ಆ ರೀತಿಯ ಆಲೋಚನೆಗಳು ಈ ವರೆಗೆ ಬಹಳ ಕಾಟ ಕೊಟ್ಟಿವೆ
ಸಂಭಾವ್ಯಳಾಗಿರಬೇಕೆಂಬ ಭ್ರಮೆಯನ್ನು ಕಿತ್ತೊಗೆದು ಬಿಸಾಡಿದ್ದೇನೆ
ನನ್ನ ಈ ನಾಚಿಕೆಯಿಲ್ಲದೆ ವರ್ತಿಸುವ ವ್ಯಕ್ತಿತ್ವವನ್ನು (ನನ್ನ ನಿಜ ಬಣ್ಣವನ್ನು) ಯಾರೂ ನೋಡಿಯೇ ಇಲ್ಲ

ಎರಡನೇ ಪಂಕ್ತಿಯ ಅರ್ಥವೇನು
(ಮುಝ್ ಮೆ ನಯೀ ಬಾತ್ ಹೇ, ನಯಿ ಆದತೋಂಕಿ ಸಾಥ್ ಹೇ
ಹೇ ಜೊ ಸಹಿ ವೋ ಕರತಾ ನಹಿ, ಗಲತ್ ಹೋನೆಕಿ ಯಹೀತೊ ಶುರುವಾತ್ ಹೇ)
ನನ್ನಲ್ಲಿ ಏನೋ ಹೊಸ ಬದಲಾವಣೆಗಳಾಗಿವೆ, ಹೊಸ ಅಭ್ಯಾಸಗಳು ಶುರುವಾಗಿವೆ
ಸರಿಯಾದ ಹಾದಿಯಲ್ಲಿ ನಡೆಯುವ ಆಸೆಯಿಲ್ಲ, ತಪ್ಪಾದ ಹಾದಿಯ ಪಯಣ ಈಗಿಂದ ಶುರು

ಹಾಡಿನಲ್ಲಿರುವುದು ಆರೇ ಸಾಲು!
ವಿವಾದಕ್ಕೀಡಾಗಿರುವ 'ಬೇಷರಮ್' ಹಾಡಿನಲ್ಲಿ ಇರುವುದು ಆರೇ ಸಾಲು. ಮೊದಲ ನಾಲ್ಕು ಸಾಲುಗಳು ಮೂರು ಬಾರಿ ಪುನರಾವರ್ತನೆಯಾಗುತ್ತವೆ. ಇನ್ನುಳಿದ ಎರಡು ಸಾಲುಗಳು ಹಾಡಿನ ಮಧ್ಯದಲ್ಲೊಮ್ಮೆ ಮಾತ್ರವೇ ಬರುತ್ತವೆ. ಯೂಟ್ಯೂಬ್‌ನಲ್ಲಿ ಬಿಡುಗಡೆ ಆಗಿರುವ ಹಾಡು ಇಷ್ಟು ಮಾತ್ರವೇ ಇದ್ದು, ಚಿತ್ರಮಂದಿರದಲ್ಲಿ ಬಿಡುಗಡೆ ಆಗುವ ಹಾಡು ಇನ್ನೂ ಕೆಲವು ಸಾಲುಗಳು ಹೆಚ್ಚಿಗೆ ಇರುವ ಸಾಧ್ಯತೆಯೂ ಇದೆ.

ಹಾಡಿಗೆ ಸಾಹಿತ್ಯ ಕುಮಾರ್, ಸಂಗೀತ ವಿಶಾಲ್-ಶೇಖರ್
ವಿವಾದಕ್ಕೆ ಕಾರಣವಾಗಿರುವ ಈ ಹಾಡಿಗೆ ಸಾಹಿತ್ಯ ಒದಗಿಸಿರುವುದು ಕುಮಾರ್ ಎಂಬುವರು, ಸಂಗೀತ ನೀಡಿರುವುದು ವಿಶಾಲ್-ಶೇಖರ್, ಹಾಡಿನ ನೃತ್ಯ ಸಂಯೋಜನೆ ಮಾಡಿರುವುದು ವೈಭವೀ ಮರ್ಚೆಂಟ್, ಹಾಡನ್ನು ವಿದೇಶಿ ಲೊಕೇಶನ್‌ನಲ್ಲಿ ತುಸು ಹೆಚ್ಚೇ ಗ್ಲಾಮರಸ್ ಆಗಿ ಚಿತ್ರೀಕರಣ ಮಾಡಲಾಗಿದೆ. 'ಪಠಾಣ್' ಸ್ಪೈ ಸಿನಿಮಾ ಆಗಿದ್ದು, ಸಿನಿಮಾದಲ್ಲಿ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಜೊತೆಗೆ ಜಾನ್ ಅಬ್ರಹಾಂ ಸಹ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಸಿದ್ಧಾರ್ಥ್ ಆನಂದ್, ನಿರ್ಮಾಣ ಆದಿತ್ಯ ಚೋಪ್ರಾ ಅವರದ್ದು.