»   » ಅಂತೂ ಶಾರುಖ್, ಸಲ್ಮಾನ್, ಸನ್ನಿ ಲಿಯೋನ್ ''ಕನ್ನಡ''ಕ್ಕೆ ಬಂದ್ರು.!

ಅಂತೂ ಶಾರುಖ್, ಸಲ್ಮಾನ್, ಸನ್ನಿ ಲಿಯೋನ್ ''ಕನ್ನಡ''ಕ್ಕೆ ಬಂದ್ರು.!

Posted By:
Subscribe to Filmibeat Kannada

ಟೈಟಲ್ ನೋಡಿ ಬೆರಗಾಗಬೇಡಿ.! ನಾವು ಹೇಳೋಕೆ ಹೊರಟಿರುವುದು ಸಲ್ಮಾನ್ ಖಾನ್, ಶಾರುಖ್ ಖಾನ್, ಸನ್ನಿ ಲಿಯೋನ್ ಅಭಿನಯದ ಹಾಡುಗಳ ಕನ್ನಡ ಡಬ್ಬಿಂಗ್ ಬಗ್ಗೆ.

''ಕನ್ನಡ ಚಿತ್ರರಂಗದಲ್ಲಿ ಇನ್ನು ಡಬ್ಬಿಂಗ್ ನ ತಡಿಯೋಕೆ ಯಾರ ಕೈಯಿಂದಲೂ ಸಾಧ್ಯ ಇಲ್ಲ''. ಇದು ನಾವು ಹೇಳುತ್ತಿರುವ ಮಾತು ಅಲ್ಲ ಸ್ವಾಮಿ. ಗಾಂಧಿನಗರದಲ್ಲೇ ಕೇಳಿ ಬರುತ್ತಿರುವ ಉದ್ಗಾರ.

ಅದಕ್ಕೆ ಕಾರಣವೂ ಇದೆ. ಈಗಾಗಲೇ ಕಂಡರೂ ಕಾಣದಂತೆ ಅನೇಕ ಚಿತ್ರಗಳು ಕನ್ನಡಕ್ಕೆ ಡಬ್ ಆಗಿ ಡಬ್ಬಾದಲ್ಲಿ ಕುಳಿತಿವೆ. ''ಗಂಡಸುತನ ಇದ್ದರೆ ಡಬ್ಬಿಂಗ್ ಚಿತ್ರಗಳನ್ನ ರಿಲೀಸ್ ಮಾಡಲಿ, ನೋಡೋಣ'' ಅಂತ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ವಾರ್ನಿಂಗ್ ಕೊಟ್ಟಿದ್ದರು. [ಗಂಡಸುತನವಿದ್ದರೆ ಡಬ್ಬಿಂಗ್ ಮಾಡಲಿ : ವಾಟಾಳ್ ವಾರ್ನಿಂಗ್!]

ಡಬ್ಬಿಂಗ್ ಸಿನಿಮಾಗಳನ್ನ ಥಿಯೇಟರ್ ನಲ್ಲಿ ರಿಲೀಸ್ ಮಾಡೋದು ಇರಲಿ, ಕನ್ನಡಕ್ಕೆ ಡಬ್ ಆಗಿರುವ ಹಿಂದಿಯ ಅನೇಕ ಸೂಪರ್ ಹಿಟ್ ಹಾಡುಗಳು ಯೂಟ್ಯೂಬ್ ನಲ್ಲಿ ತಮಟೆ ಬಾರಿಸುತ್ತಿವೆ.

ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಸನ್ನಿ ಲಿಯೋನ್ ಮಾತುಗಳಿಗೆ ಕಡೆಗೂ ಕನ್ನಡ ಲೇಪನ ಮಾಡಿದ್ದು ಆಗಿದೆ. ಆ ಮೂಲಕ ಅವರೆಲ್ಲಾ ಕನ್ನಡಕ್ಕೆ ಬಂದ ಹಾಗಾಗಿದೆ. ನಿಮ್ಮ ಕಿವಿಗಳಿಗೆ ಇಂಪು ಮತ್ತು ಕಣ್ಣುಗಳಿಗೆ ತಂಪು ನೀಡುತ್ತೆ ಅನ್ನುವ ಭರವಸೆ ಇದ್ದರೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ, ಕನ್ನಡಕ್ಕೆ ಡಬ್ ಆಗಿರುವ ಹಾಡುಗಳನ್ನ ಕೇಳಿ........

ಡಬ್ ಹಾಡುಗಳನ್ನ ಕೇಳೋಕೆ ರೆಡಿನಾ?

ಕನ್ನಡ ಸಿನಿ ಪ್ರಿಯರಿಗೆ ಆಯ್ಕೆ ಸ್ವಾತಂತ್ರ ಮುಖ್ಯ ಅಂತ ಕೆಲವರು ಹೋರಾಟ ಮಾಡಿ ಸಿಸಿಐ ಮೆಟ್ಟಿಲೇರಿದ್ದರು. ಕನ್ನಡಿಗರಿಗೆ ಕೊನೆಗೂ ಆಯ್ಕೆ ಸ್ವಾತಂತ್ರ ಸಿಕ್ಕಿದೆ. ಕನ್ನಡಕ್ಕೆ ಬಾಲಿವುಡ್ ನ ಕೆಲ ಸೂಪರ್ ಹಿಟ್ ಹಾಡುಗಳು ಡಬ್ ಆಗಿವೆ. ಅವನ್ನೆಲ್ಲಾ ಒಂದೊಂದಾಗಿ ನಿಮಗೆ ತೋರಿಸ್ತೀವಿ, ಮುಂದಿನ ಸ್ಲೈಡ್ ಕ್ಲಿಕ್ ಮಾಡಿ....

(Image Courtesy: Dubbing is needed in Kannada Facebook page)

ಸನ್ನಿ ಲಿಯೋನ್ 'ಪಿಂಕ್ ಲಿಪ್ಸ್'

ಪೋರ್ನ್ ಸ್ಟಾರ್ ಸನ್ನಿ ಲಿಯೋನ್ ಸೊಂಟ ಬಳುಕಿಸಿರುವ 'ಹೇಟ್ ಸ್ಟೋರಿ-2' ಚಿತ್ರದ ಪಿಂಕ್ ಲಿಪ್ಸ್ ಹಾಡು ಕನ್ನಡದಲ್ಲಿ ಇದೀಗ ನಿಮ್ಮ ಮುಂದೆ.....

ಶಾರುಖ್ ಖಾನ್ 'ಲುಂಗಿ ಡ್ಯಾನ್ಸ್'

'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದ ಸೂಪರ್ ಡ್ಯೂಪ್ ಹಿಟ್ ಸಾಂಗ್ 'ಲುಂಗಿ ಡ್ಯಾನ್ಸ್' ಕನ್ನಡದಲ್ಲಿ ಹೇಗಿದೆ ಅಂತ ಕೇಳಿ...

ಸಲ್ಮಾನ್ ಖಾನ್ 'ಜೂಮೇ ಕಿ ರಾತ್'

ಸಲ್ಮಾನ್ ಖಾನ್ ಅಭಿನಯದ 'ಕಿಕ್' ಚಿತ್ರದ 'ಜೂಮೇ ಕಿ ರಾತ್' ಹಾಡು ಕನ್ನಡದಲ್ಲಿ ರೆಡಿಯಾಗಿರುವ ಪರಿ ಇದು.

ಆಶಿಕಿ-2 'ಸುನ್ ರಹಾ ಹೈ'

ಮ್ಯೂಸಿಕಲ್ ಬ್ಲಾಕ್ ಬಸ್ಟರ್ ಸಿನಿಮಾ 'ಆಶಿಕಿ-2' ಚಿತ್ರದ ಸುನ್ ರಹಾ ಹೈ ಹಾಡು ಕೂಡ ಕನ್ನಡಕ್ಕೆ ಡಬ್ ಆಗಿದೆ.

'ತುಮ್ ಹಿ ಹೋ'

ಯುವ ಪ್ರೇಮಿಗಳ ಮನ ಗೆದ್ದಿದ್ದ 'ತುಮ್ ಹಿ ಹೋ' ಹಾಡು ಕನ್ನಡದಲ್ಲಿ ಹೇಗೆ ತಯಾರಾಗಿದೆ ಅಂತ ನೋಡಿ..

ಸನ್ನಿ ಲಿಯೋನ್ 'ಬೇಬಿ ಡಾಲ್'

ಬೇಬಿ ಡಾಲ್ ಆಗಿದ್ದ ಸನ್ನಿ ಲಿಯೋನ್ ಕನ್ನಡದಲ್ಲಿ ಚಿನ್ನದ ಗೊಂಬೆ ಆಗಿರುವ ರೀತಿ ಇದು.

'ತೇರಿ ಮೇರಿ ಪ್ರೇಮ್ ಕಹಾನಿ'

ಸಲ್ಮಾನ್ ಖಾನ್-ಕರೀನಾ ಕಪೂರ್ 'ನನ್ನ-ನಿನ್ನ-ನಿನ್ನ-ನನ್ನ' ಅಂತ ಕನ್ನಡದಲ್ಲಿ ಡ್ಯುಯೆಟ್ ಹಾಡಿದ್ದಾರೆ. ಅದನ್ನೂ ಕಣ್ತುಂಬಿಕೊಳ್ಳಿ...

ಏಕ್ ವಿಲನ್ 'ತೇರಿ ಗಲಿಯಾ'

ಶ್ರದ್ಧಾ ಕಪೂರ್ ಅಭಿನಯಿಸಿರುವ 'ಏಕ್ ವಿಲನ್' ಚಿತ್ರದ 'ತೇರಿ ಗಲಿಯಾ' ಹಾಡು ಕನ್ನಡಕ್ಕೆ ಡಬ್ ಆಗಿರುವುದು ಹೀಗೆ...

ಅಕ್ಷಯ್ ಕುಮಾರ್ 'ಭೂಲ್ ಭುಲಯ್ಯ'

ಅಕ್ಷಯ್ ಕುಮಾರ್ 'ಭೂಲ್ ಭುಲಯ್ಯ' ಅಂತ ಹಾಡಿದರೆ ಹೇಗಿರುತ್ತೆ ಅಂತ ನಾವು ಹೇಳೋಕಿಂತ ನೀವೇ ನೋಡಿಬಿಡಿ...

'ಹೇ ಬೇಬಿ'

ಒಂದ್ಕಾಲದ ಹಿಟ್ ನಂಬರ್ 'ಹೇ ಬೇಬಿ' ಹಾಡು ಕನ್ನಡದಲ್ಲಿ ಸದ್ದು ಮಾಡುತ್ತಿರುವುದು ಹೀಗೆ...

ಯೂಟ್ಯೂಬ್ ನಲ್ಲಿ ಡಬ್ ಹಾಡುಗಳ ಕಲರವ

'T Series - Regional' ಅನ್ನುವ ಯೂಟ್ಯೂಬ್ ಚಾನೆಲ್ ನಲ್ಲಿ ಕನ್ನಡಕ್ಕೆ ಡಬ್ ಆಗಿರುವ ಎಲ್ಲಾ ಹಾಡುಗಳು ಅಪ್ ಲೋಡ್ ಆಗಿವೆ. ನಾವು ನಿಮ್ಮ ಮುಂದೆ ಇಟ್ಟ ಹಾಡುಗಳು ಬರೀ ಸ್ಯಾಂಪಲ್ ಮಾತ್ರ. ಯೂಟ್ಯೂಬ್ ನಲ್ಲಿ ಇಂತಹ ಸಾಕಷ್ಟು ಹಾಡುಗಳು ಹರಿದಾಡುತ್ತಿವೆ.

ವಾಟಾಳ್ ನಾಗರಾಜ್ ಅವರಿಗೆ ಇದೆಲ್ಲಾ ಕಾಣ್ತಿಲ್ವಾ?

ಥಿಯೇಟರ್ ಗಳಲ್ಲಿ ಡಬ್ಬಿಂಗ್ ಸಿನಿಮಾ ರಿಲೀಸ್ ಆದರೆ, ಚಿತ್ರಮಂದಿರಕ್ಕೆ ಬೆಂಕಿ ಇಡ್ತೀವಿ ಅಂತ ವಾಟಾಳ್ ನಾಗರಾಜ್ ಹೇಳಿಕೆ ನೀಡಿದ್ದರು. ಈಗ ಯೂಟ್ಯೂಬ್ ನಲ್ಲಿ ಸೇಲ್ ಆಗುತ್ತಿರುವ ಈ ಹಾಡುಗಳ ಬಗ್ಗೆ ವಾಟಾಳ್ ಏನು ಹೇಳುತ್ತಾರೋ..??!

English summary
Dubbing has entered into Kannada Film Industry. Many Hindi super hit songs Dubbed into Kannada are uploaded in YouTube and are going viral. Watch the dubbed songs here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada