For Quick Alerts
  ALLOW NOTIFICATIONS  
  For Daily Alerts

  ರಿಯಾಲಿಟಿ ಶೋ ವಿಜೇತರಿಗೆ ಚಿನ್ನದೊಡವೆ ನೀಡಿದ ಹೃತಿಕ್ ಪೋಷಕರು

  |

  ರಿಯಾಲಿಟಿ ಶೋ ವಿಜೇತರಿಗೆ ಚಿನ್ನದ ಒಡವೆಯನ್ನು ಉಡುಗೊರೆಯಾಗಿ ನೀಡಿದ್ದಾರೆ ಹೃತಿಕ್ ರೋಷನ್ ಪೋಷಕರು.

  ಕೆಲವು ದಿನಗಳ ಹಿಂದಷ್ಟೆ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ಮುಕ್ತಾಯವಾಗಿದ್ದು ಪವನ್ ದೀಪ್ ರಾಜನ್ ವಿಜೇತರಾಗಿದ್ದಾರೆ. ಅರುಣಿತಾ ಹಾಗೂ ಷಣ್ಮುಖಪ್ರಿಯ ಅವರುಗಳು ರನ್ನರ್‌ ಅಪ್ ಆಗಿದ್ದರು.

  ಪವನ್ ದೀಪ್ ಸಿಂಗ್ ಹಾಗೂ ಅರುಣಿತಾ ಅವರುಗಳನ್ನು ಮನೆಗೆ ಆಹ್ವಾನಿಸಿದ್ದ ಹೃತಿಕ್ ರೋಷನ್ ಪೋಷಕರು ಇಬ್ಬರನ್ನು ಭೇಟಿಯಾಗಿ ಸಾಕಷ್ಟು ಸಮಯ ಅವರೊಟ್ಟಿಗೆ ಕಳೆದು ಇಬ್ಬರಿಗೂ ಚಿನ್ನದ ಒಡವೆಗಳನ್ನು ಉಡುಗೊರೆಯನ್ನಾಗಿ ನೀಡಿದ್ದಾರೆ.

  ಪವನ್ ದೀಪ್‌ ಹಾಗೂ ಅರುಣಿತಾ ಅವರುಗಳು ಸುಮಾರು ಮೂರು ಗಂಟೆ ಕಾಲ ಹೃತಿಕ್ ರೋಷನ್ ಪೋಷಕರಾದ ರಾಕೇಶ್ ರೋಷನ್ ಹಾಗೂ ಪಿಂಕಿ ಅವರೊಟ್ಟಿಗೆ ಕಾಲ ಕಳೆದಿದ್ದಾರೆ. ಈ ಸಮಯದಲ್ಲಿ ಪಿಂಕಿ ಅವರು ಪವನ್‌ ದೀಪ್ ಹಾಗೂ ಅರುಣಿತಾಗೆ ಚಿನ್ನದ ಸರ, ಚಿನ್ನದ ಲಕ್ಷ್ಮಿ ನಾಣ್ಯಗಳನ್ನು ನೀಡಿದ್ದಾರೆ.

  ಈ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿರುವ ಪವನ್ ದೀಪ್‌, ರಾಕೇಶ್ ಹಾಗೂ ಪಿಂಕಿ ಅವರು ಅವರು ಬಹಳ ಭಾವುಕರಾದರು, ನಮ್ಮಿಬ್ಬರನ್ನು ತಬ್ಬಿಕೊಂಡು ಸ್ವಾಗತ ಮಾಡಿದರು. ಬಹಳ ಸಮಯ ಅವರೊಟ್ಟಿಗೆ ಇದ್ದೆವು, ಅಲ್ಲಿ ಕೆಲವು ಹಾಡುಗಳನ್ನು ಸಹ ಹಾಡಿದೆವು. ಅವರೂ ಸಹ ಇಂಥಹಾ ಹಾಡುಗಳನ್ನು ಹಾಡಿರಿ ಎಂದು ನಮ್ಮ ಕೇಳಿದರು'' ಎಂದರು.

  ರುದ್ರಾಕ್ಷಿ ಇರುವ ಚಿನ್ನದ ಸರವನ್ನು ಪಿಂಕಿ ಅವರು ನೀಡಿದರು. ಆ ಸರವನ್ನು ಅವರಿಗೆ ಅವರ ತಂದೆಯವರು ನೀಡಿದ್ದರಂತೆ. ಲಕ್ಷ್ಮಿ ಚಿತ್ರವುಳ್ಳ ಚಿನ್ನದ ನಾಣ್ಯಗಳನ್ನು ಸಹ ನೀಡಿದರು. ಯಶಸ್ಸು ಸಿಗಲೆಂದು ಹರಸಿದರು ಎಂದು ಪವನ್ ದೀಪ್‌ ಹೇಳಿದ್ದಾರೆ.

  ಮನೆಯಲ್ಲಿದ್ದ ಸಮಯ ಹೃತಿಕ್ ರೋಷನ್ ಅವರನ್ನು ಭೇಟಿಯಾದಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಪವನ್‌ ದೀಪ್, ಹೃತಿಕ್ ರೋಷನ್ ಬ್ಯುಸಿಯಾಗಿದ್ದರು ಕೆಲ ನಿಮಿಷವಷ್ಟೆ ಅವರನ್ನು ಭೇಟಿಯಾಗಲು ಸಾಧ್ಯವಾಯಿತು. ಅವರಿಗೆ ನಾವು ವಿಶ್ ಮಾಡಿದೆವು, ಚೆನ್ನಾಗಿ ಕಷ್ಟಪಟ್ಟು ಕೆಲಸ ಮಾಡುವಂತೆ ನಮಗೆ ಹೃತಿಕ್ ಸಲಹೆ ನೀಡಿದರು'' ಎಂದಿದ್ದಾರೆ ಪವನ್ ದೀಪ್.

  ಪವನ್‌ದೀಪ್ ರಾಜನ್ ಹಾಗೂ ಅರುಣಿತಾ ಸೇರಿಕೊಂಡು ಮ್ಯೂಸಿಕ್ ವಿಡಿಯೋ ಹೊರ ತರುವ ಉಮೇದಿನಲ್ಲಿದ್ದಾರೆ. ಆ ಬಗ್ಗೆ ತಯಾರಿ ಆರಂಭಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿದ್ದಾರೆ.

  ಮತ್ತೊಬ್ಬ ರನ್ನರ್‌ಅಪ್ ಷಣ್ಮುಖಪ್ರಿಯಗೆ ಸಿನಿಮಾದಲ್ಲಿ ಹಾಡುವ ಅವಕಾಶವನ್ನು ನಟ ವಿಜಯ್ ದೇವರಕೊಂಡ ನೀಡಿದ್ದಾರೆ. ಷಣ್ಮುಖಪ್ರಿಯ ಹೈದರಾಬಾದ್‌ನವರಾಗಿದ್ದು, ಆಕೆಯ ಗಾಯನಕ್ಕೆ ವಿಜಯ್ ದೇವರಕೊಂಡ ಮಾರುಹೋಗಿದ್ದಾರೆ.

  ಫೈನಲ್‌ ನಡೆಯುವ ಮುನ್ನವೇ ವಿಡಿಯೋ ಪ್ರಕಟಿಸಿದ್ದ ವಿಜಯ್ ದೇವರಕೊಂಡ, ಷಣ್ಮುಖಪ್ರಿಯ ಗೆಲ್ಲಲಿ, ಸೋಲಲಿ ನನ್ನ ಸಿನಿಮಾದಲ್ಲಿ ಒಂದು ಹಾಡು ಹಾಡುವ ಅವಕಾಶ ಕೊಡಿಸುತ್ತೇನೆ ಎಂದು ಹೇಳಿದ್ದರು. ಅಂತೆಯೇ ತಮ್ಮ 'ಲೈಗರ್' ಸಿನಿಮಾದಲ್ಲಿ ಷಣ್ಮುಖಪ್ರಿಯಗೆ ಹಾಡುವ ಅವಕಾಶ ಮಾಡಿಕೊಟ್ಟರು. ಹಾಡು ಈಗಾಗಲೇ ರೆಕಾರ್ಡ್ ಆಗಿದ್ದು ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ.

  ಹಾಡು ರೆಕಾರ್ಡ್ ಮಾಡಿದ ಬಳಿಕ ಷಣ್ಮುಖಪ್ರಿಯ ಮತ್ತು ಅವರ ತಾಯಿ ನಟ ವಿಜಯ್ ದೇವರಕೊಂಡ ಅವರ ಮನೆಗೆ ತೆರಳಿ ಭೇಟಿಯಾಗಿದ್ದಾರೆ. ಷಣ್ಮುಖಪ್ರಿಯಗೆ ಅಭಿನಂದನೆ ಸಲ್ಲಿಸಿರುವ ವಿಜಯ್ ದೇವರಕೊಂಡ ಇಬ್ಬರಿಗೂ ಉಡುಗೊರೆ ನೀಡಿ ಹಾರೈಸಿದ್ದಾರೆ.

  English summary
  Hritik Roshan parents Rakesh Roshan and Pinki Roshan gifted gold chains to Indian Idol winner Pawandeep Rajan and Arunitha.
  Thursday, September 9, 2021, 19:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X