»   » ಪ್ರತಿಭಾವಂತ ಗಾಯಕ ಸಂದೀಪ್ ಆಚಾರ್ಯ ಇನ್ನಿಲ್ಲ

ಪ್ರತಿಭಾವಂತ ಗಾಯಕ ಸಂದೀಪ್ ಆಚಾರ್ಯ ಇನ್ನಿಲ್ಲ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಇಂಡಿಯನ್ ಐಡಲ್ ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿದ್ದ ಗಾಯಕ ಸಂದೀಪ್ ಆಚಾರ್ಯ ಜಾಂಡೀಸ್ ಕಾಯಿಲೆಗೆ ಬಲಿಯಾಗಿದ್ದಾರೆ. ಗುರ್ ಗಾಂವ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪ್ ಆಚಾರ್ಯ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಪತ್ನಿ ಹಾಗೂ ಒಂದು ತಿಂಗಳ ಮಗು ಹಾಗೂ ಅಪಾರ ಅಭಿಮಾನಿ ವರ್ಗವನ್ನು ಸಂದೀಪ್ ಅಗಲಿದ್ದಾರೆ.

ಇಂಡಿಯನ್ ಐಡಲ್ ಸೀಸನ್ 2 ರ ವಿಜೇತರಾಗಿದ್ದ ಸಂದೀಪ್ ಅವರು ಕಳೆದ 15 ದಿನಗಳಿಂದ ಕಾಮಾಲೆ ರೋಗಕ್ಕೆ ತುತ್ತಾಗಿದ್ದರು. ಆದರೆ, ಕಳೆದ ಎರಡು ದಿನಗಳ ತನಕ ಯಾವುದೇ ಚಿಕಿತ್ಸೆ ಪಡೆಯದೆ ನಿರ್ಲಕ್ಷಿಸಿದ್ದರು. ರೋಗ ಉಲ್ಬಣಗೊಂಡು ಬಿಕಾನೇರ್ ನ ಆಸ್ಪತ್ರೆಗೆ ದಾಖಲಿಸಲಾಯಿತು.

ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಗುರ್ ಗಾಂವ್ ಗೆ ಕರೆದುಕೊಂಡು ಬರಲಾಗಿತ್ತು. ಆದರೆ, ಸಂದೀಪ್ ರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಗುರ್ ಗಾಂವ್ ಆಸ್ಪತ್ರೆಯಲ್ಲಿ ಜೀವನದ ಅಂತಿಮ ರಾಗ ಹಾಡಿದ್ದಾರೆ. ಸಂದೀಪ್ ಅವರ ಅಂತ್ಯಕ್ರಿಯೆಯನ್ನು ಅವರ ಸ್ವಂತ ಊರು ಬಿಕಾನೇರ್ ನಲ್ಲಿ ನೆರವೇರಿಸಲಾಗಿದೆ.

ಆದರೆ, ಚಿಕಿತ್ಸೆಗೆ ಸಂದೀಪ್ ದೇಹ ಸ್ಪಂದಿಸದಷ್ಟು ಹದಗೆಟ್ಟಿತ್ತು ಎಂದು ತಿಳಿದು ಬಂದಿದೆ. ಮೊದಲೇ ಚಿಕಿತ್ಸೆ ಪಡೆದಿದ್ದರೆ ಸಂದೀಪ್ ಬದುಕುಳಿಯುವ ಸಾಧ್ಯತೆಯಿತ್ತು ಎನ್ನಲಾಗಿದೆ. ಸಂದೀಪ್ ಅವರ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಕುಟುಂಬ ವರ್ಗ, ಅಭಿಮಾನಿಗಳು ಆಸ್ಪತ್ರೆಯತ್ತ ಬಂದು ರೋದಿಸಿದ್ದಾರೆ. ಗಾಯಕ ಸೋನು ನಿಗಮ್, ಶ್ರೇಯಾ ಘೋಷಾಲ್ ಸೇರಿದಂತೆ ಹಲವಾರು ಗಣ್ಯರು, ಅಭಿಮಾನಿಗಳು ಟ್ವೀಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

1984ರ ಫೆಬ್ರವರಿ 4 ರಂದು ಜನಿಸಿದ ಸಂದೀಪ್ ಆಚಾರ್ಯ ಅವರು ವಿಜ್ಞಾನ ವಿಷಯದಲ್ಲಿ ಪದವಿ ಪಡೆದವರಾಗಿದ್ದರು. ಇಬ್ಬರು ಸೋದರಿಯರು ಒಬ್ಬ ಸೋದರನನ್ನು ಹೊಂದಿದ್ದರು. ಇಂಡಿಯನ್ ಐಡಲ್ ನಂತರ ಜಲ್ವಾ ಫೋರ್ 2 ಕಾ 1 ನಲ್ಲಿ ಭಾಗವಹಿಸಿದ್ದರು. ಅಮೆರಿಕದಲ್ಲಿ ನಡೆದ ಸ್ಪರ್ಧೆಯಲ್ಲಿ ಬಾಲಿವುಡ್ ಪ್ರತಿಭಾವಂತ ಪ್ರಶಸ್ತಿ ಕೂಡಾ ಗಳಿಸಿದ್ದರು.

ಧಾರವಾಡದಿಂದ ಶ್ರೇಯಾ

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅವರು ಕರ್ನಾಟಕದ ಧಾರವಾಡಕ್ಕೆ ಸಂಗೀತ ಸಂಜೆಗಾಗಿ ಬರುವಾಗ ಸಂದೀಪ್ ಸಾವಿನ ಸುದ್ದಿ ತಿಳಿದು ತೀವ್ರಸಂತಾಪ ವ್ಯಕ್ತಪಡಿಸಿದ್ದಾರೆ.

ಸೋನು ನಿಗಂ ಕಂಗಾಲು

ರಾಂಚಿಗೆ ಹೊರಟ್ಟಿದ್ದ ಸೋನು ನಿಗಮ್ ಅವರಿಗೆ ಸುದ್ದಿ ತಿಳಿಯುತ್ತಿದ್ದಂತೆ ಕಂಗಾಲಾಗಿ ಸಂದೀಪ್ ಸಾವಿನ ವಿಷಯ ಕನ್ ಫರ್ಮ್ ಮಾಡಿಕೊಳ್ಳಲು ವಿಕಿಪೀಡಿಯ ಪುಟವನ್ನು ತಡಕಾಡಿದ್ದಾರೆ. ಜಾಂಡೀಸ್ ನಿಂದ ಸಾವು ಎಂದು ತಿಳಿದು ದುಃಖಪಟ್ಟಿದ್ದಾರೆ.

ಸೋನಿ ಟಿವಿ ಸಂತಾಪ

ಸೋನಿ ಟಿವಿಯ ಇಂಡಿಯನ್ ಐಡಲ್ ರಿಯಾಲಿಟಿ ಶೋ ಸೀಸನ್ 2 ವಿಜೇತರಾಗಿದ್ದ ಸಂದೀಪ್ ನಿಧನಕ್ಕೆ ಸೋನಿ ಟಿವಿ ಸಂತಾಪ

ಅಭಿಮಾನಿಗಳ ಕಂಬನಿ

ಗಾಯಕ ಸಂದೀಪ್ ಆಚಾರ್ಯ ಅಕಾಲಿಕ ಮರಣಕ್ಕೆ ಅಭಿಮಾನಿಗಳ ಕಂಬನಿ

ಕಮಲ್ ಖಾನ್ ಕಲಾವಿದ,

ನಿರ್ಮಾಪಕ, ವಿಮರ್ಶಕ ಕಮಲ್ ಖಾನ್ ಸಂತಾಪ

ಫರ್ಹಾ ಖಾನ್ ಕಂಬನಿ

ನನ್ನ ಫೇವರೀಟ್ ಗಾಯಕನಾಗಿದ್ದ ಸಂದೀಪ್ ಸಾವು ದುಃಖ ತರಿಸುತ್ತಿದೆ ಎಂದಿರುವ ನೃತ್ಯ ನಿರ್ದೇಶಕಿ, ನಿರ್ಮಾಪಕಿ ಫರ್ಹಾ ಖಾನ್

ಸಂದೀಪ್ ಆಚಾರ್ಯ ಅವರ ಹಾಡಿನ ಝಲಕ್

ಸಂದೀಪ್ ಆಚಾರ್ಯ ಅವರ ಹಾಡಿನ ಝಲಕ್ ಇಲ್ಲಿದೆ ನೋಡಿ...

English summary
Sandeep Acharya, 29, second season Indian Idol winner, passes away due to jaundice on Sunday at a Gurgaon hospital. He is survived by his wife and a one-month-old daughter.
Please Wait while comments are loading...