»   » ಪ್ರೇಮ್ 'ಡಿಕೆ' ಆಡಿಯೋಗಳಿಗೆ ಡಿಮಾಂಡಪ್ಪೋ ಡಿಮಾಂಡು

ಪ್ರೇಮ್ 'ಡಿಕೆ' ಆಡಿಯೋಗಳಿಗೆ ಡಿಮಾಂಡಪ್ಪೋ ಡಿಮಾಂಡು

Posted By:
Subscribe to Filmibeat Kannada

'ರೂರಲ್ ಸ್ಟಾರ್', 'ರಿಯಲ್ ಶೋ ಮ್ಯಾನ್' ಅಂತ ಇತ್ತೀಚೆಗಷ್ಟೇ ಬಿರುದಾಂಕಿತರಾಗಿದ್ದಾರೆ ನಟ ಕಮ್ ನಿರ್ದೇಶಕ ಜೋಗಿ ಪ್ರೇಮ್. ಏನೇ ಮಾಡಿದ್ರೂ, ಇಡೀ ಗಾಂಧಿನಗರ ಒಮ್ಮೆ ತಮ್ಮತ್ತ ತಿರುಗಿನೋಡುವಂತೆ ಮಾಡುವ ಚಾಣಕ್ಷ ಈ ಪ್ರೇಮ್! ಅದಕ್ಕೆ ತಮ್ಮ ಲೇಟೆಸ್ಟ್ ಸಿನಿಮಾ 'ಡಿ.ಕೆ' ಕೂಡ ಹೊರತಾಗಿಲ್ಲ.

'ಡಿ.ಕೆ' ಟೈಟಲ್, ಅದರ ಕೆಳಗೆ 'ರಾ' ಲವ್ ಸ್ಟೋರಿ' ಅನ್ನುವ ಕ್ಯಾಪ್ಷನ್ ಕೊಟ್ಟು ಇಲ್ಲ ಸಲ್ಲದ ಗದ್ದಲ ಉಂಟು ಮಾಡಿದ್ದ ಪ್ರೇಮ್ ಸಾಹೇಬ್ರು ಈಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಅದು ತಮ್ಮ 'ಡಿ.ಕೆ' ಚಿತ್ರದ ಹಾಡುಗಳಿಂದ ಅನ್ನುವುದು ವಿಶೇಷ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

Jogi Prem starrer D.K. audio record breaking sales1

ಇದೇ ತಿಂಗಳ ಆರಂಭದಲ್ಲಿ ಅದ್ದೂರಿಯಾಗಿ ರಿಲೀಸ್ ಆದ 'ಡಿ.ಕೆ' ಹಾಡುಗಳು ಬರೀ ಗಾಂಧಿನಗರದಲ್ಲಿ ಮಾತ್ರ ಅಲ್ಲ, ಕರ್ನಾಟಕದ ಮೂಲೆ ಮೂಲೆಯಲ್ಲೂ 'ಬಿಸಿ ದೋಸೆ'ಯಂತೆ ಸೇಲ್ ಆಗ್ತಿದೆ. ಅದು ಯಾವ ಪರಿ ಅಂದ್ರೆ, ಎಲ್ಲಾ ಅಂಗಡಿಗಳಲ್ಲೂ 'ಡಿ.ಕೆ' ಆಡಿಯೋ ಸಿ.ಡಿಗಳು ಖಾಲಿಯಾಗಿವೆ. [ತುಮಕೂರು, ಮೈಸೂರಲ್ಲಿ 'ಡಿಕೆ' ಆಡಿಯೋ ಸಂಭ್ರಮ]

''ಹೊಸ ಸಿ.ಡಿಗಳು ಕಳುಹಿಸಿ ಸಾರ್'' ಅಂತ ಅಂಗಡಿ ಮಾಲೀಕರು, ಆಡಿಯೋ ಕಂಪನಿಗಳಿಗೆ ರಿಪೀಟ್ ಆರ್ಡರ್ ಕೊಡುತ್ತಿದ್ದಾರಂತೆ. ಎಲ್ಲಾ ಕಡೆಯಿಂದ ಆಡಿಯೋ ಸಿ.ಡಿ ಬೇಡಿಕೆ ಹೆಚ್ಚಾಗಿರುವುದರಿಂದ ಆಡಿಯೋ ಕಂಪನಿ, ಮರಳಿ ಆಡಿಯೋ ಸಿ.ಡಿಗಳ ಪ್ರಿಂಟ್ ಹಾಕಿಸುವುದರಲ್ಲಿ ಬಿಜಿಯಾಗಿದೆ. ['ಡಿ.ಕೆ' ಅಡ್ಡಾದಲ್ಲಿ ಜಯಾ, ಕರುಣಾನಿಧಿ ಟಪಾಂಗುಚಿ]

Jogi Prem starrer D.K. audio record breaking sales2

''ಆಡಿಯೋ ಸಿ.ಡಿಗಳೇ ಖರ್ಚಾಗದ ಈಗಿನ ಕಾಲದಲ್ಲಿ ದಿನವೊಂದಕ್ಕೆ 10 ಸಾವಿರ 'ಡಿ.ಕೆ' ಆಡಿಯೋ ಸಿ.ಡಿ ಗಳು ಸೇಲ್ ಆಗುತ್ತಿವೆ. ನಾನು ಎಷ್ಟೋ ಅಂಗಡಿಗಳನ್ನು ವಿಚಾರಿಸಿದ್ದೀನಿ. 'ಡಿ.ಕೆ' ಲೀಡಿಂಗ್ ಇದೆ ಸಾರ್ ಅಂತಾರೆ. ತುಂಬಾ ಖುಷಿಯಾಗ್ತಿದೆ. ಪ್ರೇಕ್ಷಕರು ಡಿ.ಕೆ ಹಾಡುಗಳನ್ನು ಇಷ್ಟ ಪಟ್ಟಿದ್ದಾರೆ. ಆಡಿಯೋ ಸೂಪರ್ ಹಿಟ್ ಆಗಿದೆ'' ಅಂತ 'ಫಿಲ್ಮಿಬೀಟ್ ಕನ್ನಡ' ಜೊತೆ ನಿರ್ದೇಶಕ ವಿಜಯ್ ಹಂಪಾಳಿ ಸಂತಸ ಹಂಚಿಕೊಂಡಿದ್ದಾರೆ.

Jogi Prem starrer D.K. audio record breaking sales3

''ಇದೇ ತಿಂಗಳು 20 ಕ್ಕೂ ಹೆಚ್ಚು ಸಿನಿಮಾಗಳ ಆಡಿಯೋ ರಿಲೀಸ್ ಆಗಿದೆ. ಅದರಲ್ಲಿ 'ಡಿ.ಕೆ'ಗೆ ವ್ಯಾಪಕ ಪ್ರತಿಕ್ರಿಯೆ ಲಭ್ಯವಾಗಿದೆ. ಸದ್ಯದಲ್ಲೇ ಪ್ಲಾಟಿನಂ ಡಿಸ್ಕ್ ಹೊರಗೆ ತರುವ ಆಲೋಚನೆಯಲ್ಲಿದ್ದೀವಿ'' ಅಂತಾರೆ ನಿರ್ದೇಶಕ ವಿಜಯ್ ಹಂಪಾಳಿ. [ಮಗ ಸೂರ್ಯ, ಪತ್ನಿ ರಕ್ಷಿತಾ ಜತೆ ಪ್ರೇಮ್ ಸ್ಟೆಪ್]

ಅರ್ಜುನ್ ಜನ್ಯ ಮ್ಯೂಸಿಕ್ ಮಾಡಿರುವ ''ಬಂದ ಬಂದ ಡಿ.ಕೆ. ಸಾಹೇಬ...'', ಸನ್ನಿ ಲಿಯೋನ್ ಹೆಜ್ಜೆ ಹಾಕಿರುವ ''ಸೇಸಮ್ಮ...'' ಹಾಡುಗಳು ಜನಪ್ರಿಯವಾಗಿವೆ. ಸ್ಯಾಟೆಲೈಟ್ ರೈಟ್ಸ್, ಡಿಸ್ಟ್ರಿಬ್ಯೂಷನ್ ರೈಟ್ಸ್ ನಲ್ಲಿ ದಾಖಲೆ ಬರೆಯುತ್ತಿರುವ ಚಿತ್ರಗಳ ಮಧ್ಯೆ 'ಡಿ.ಕೆ' ಸಿನಿಮಾ, ಆಡಿಯೋ ಸಿ.ಡಿ ಲೆಕ್ಕದಲ್ಲಿ ದಾಖಲೆ ಬರೆದು ಐಸಿಯು ನಲ್ಲಿರುವ ಆಡಿಯೋ ಕಂಪನಿಗಳಿಗೆ ಸಕ್ಸಸ್ ಇಂಜೆಕ್ಷನ್ ನೀಡುತ್ತಿದೆ. (ಫಿಲ್ಮಿಬೀಟ್ ಕನ್ನಡ)

English summary
Director Prem acted D.K movie is in news for various reasons. Now, D.K has creating records in the Audio Industry by Highest Number of Audio C.D Sales.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada