Don't Miss!
- Sports
IND vs NZ 3rd T20: ಅಹಮದಾಬಾದ್ ಪಿಚ್ ಬಗ್ಗೆ ಆಸಕ್ತಿಕರ ಮಾಹಿತಿ ನೀಡಿದ ಕ್ಯುರೇಟರ್: ಹೇಗಿರಲಿದೆ ಪಿಚ್?
- News
7th Pay Commission; ವೇತನ ಶ್ರೇಣಿ, ಹೊಸ ವೇತನ ರಚನೆ ಮಾನದಂಡಗಳು
- Lifestyle
Horoscope Today 1 Feb 2023: ಬುಧವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Technology
ದೇಶಿಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ವಿವೋ Y100; ಖರೀದಿಗೆ ಕ್ಯೂ ಖಚಿತ!
- Automobiles
ಭಾರತದಲ್ಲಿ ಹ್ಯುಂಡೈ i20 ಕಾರುಗಳ ಬೆಲೆ ಏರಿಕೆ
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಜಾಮ್ ವಿತ್ ಜೋಶ್': ಸಂಗೀತ ಪ್ರೇಮಿಗಳ ರಂಜಿಸಲಿರುವ ಜೋಶ್ ಸಂಗೀತಗಾರರು
ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ಕಿರು ವಿಡಿಯೋ ಅಪ್ಲಿಕೇಶನ್ ಜೋಶ್, ತನ್ನ ಹೊಸ ರೀತಿಯ, ಬೋಲ್ಡ್, ಫ್ರೆಶ್ ಹಾಗೂ ವಿವಿಧ ಪ್ರಾಕಾರಗಳ ವಿಡಿಯೋಗಳಿಂದ ಮನೆ ಮಾತಾಗಿದೆ. ಅತ್ಯಂತ ಕಡಿಮೆ ಸಮಯದಲ್ಲಿ ವಿವಿಧ ಭಾಷೆಗಳಲ್ಲಿ ಈ ಅಪ್ಲಿಕೇಶನ್ ಜನಪ್ರಿಯವಾಗಿದ್ದು, ಈ ಅಪ್ಲಿಕೇಶನ್‌ನ ವಿಡಿಯೋಗಳು ಒಂದರ ಹಿಂದೊಂದು ವೈರಲ್ ಆಗುತ್ತಿವೆ.
ವಿಡಿಯೋ ಮಾಡುವವರಿಗೆ, ಕಂಟೆಂಟ್ ಕ್ರಿಯೇಟರ್‌ಗಳಿಗೆ ಉತ್ತಮ ವೇದಿಕೆ ಒದಗಿಸುವುದು ಮಾತ್ರವಲ್ಲದೆ, ತರಬೇತಿ, ಇವೆಂಟ್ ಆಯೋಜನೆ, ಫ್ಯಾನ್ಸ್ ಮೀಟ್, ಸೆಲೆಬ್ರಿಟಿ ಮೀಟ್‌ಗಳನ್ನು ಆಯೋಜಿಸುವುದರಿಂದ ಹಿಡಿದು ಪ್ರೇಕ್ಷಕರಿಗಾಗಿ ಕಾನ್ಸರ್ಟ್‌ಗಳನ್ನು ಆಯೋಜಿಸುವವರೆಗೆ ಜೋಶ್ ಅಪ್ಲಿಕೇಶನ್ ಭಿನ್ನತೆಯನ್ನು ಮೆರೆಯುತ್ತಲೇ ಇದೆ. ತನ್ನ ವೀಕ್ಷಕರಿಗೆ ಅತ್ಯುತ್ತಮವಾದುದನ್ನು ಕಾಲದಿಂದ ಕಾಲಕ್ಕೆ ನೀಡುತ್ತಲೇ ಬರುತ್ತಿದೆ.
ಇದೀಗ ಜೋಶ್ ಅಪ್ಲಿಕೇಶನ್ ಹೊಸದೊಂದು ಮನೊರಂಜನಾತ್ಮಕ ಇವೆಂಟ್ ಅನ್ನು ಹೊತ್ತು ತಂದಿದೆ. ಇದೇ ಮೊದಲ ಬಾರಿಗೆ ಜೋಶ್‌ನ ಮ್ಯೂಸಿಕ್ ಕಂಟೆಂಟ್ ಕ್ರಿಯೇಟರ್‌ಗಳು ಆಧುನಿಕ ತಂತ್ರಜ್ಞಾನ ಬಳಸಿಕೊಂಡು ವರ್ಚ್ಯುಲ್ ವ್ಯವಸ್ಥೆ ಮೂಲಕ ಮ್ಯೂಸಿಕ್ ಕಾನ್ಸರ್ಟ್ ನೀಡಲಿದ್ದಾರೆ. ಇದಕ್ಕೆ 'ಜಾಮ್ ವಿತ್ ಜೋಶ್' ಎಂದು ಹೆಸರಿಡಲಾಗಿದೆ. ಅಪರೂಪದ ಈ ಕಾರ್ಯಕ್ರಮವು ಜುಲೈ 29 ರಂದು ಸಂಜೆ 5 ಗಂಟೆಗೆ ಆರಂಭವಾಗಲಿದೆ. ಒಂದು ಗಂಟೆಗಳ ಕಾಲ ನಡೆಯಲಿರುವ ಈ ಮ್ಯೂಸಿಕ್ ಶೋ ನಲ್ಲಿ ಜೋಶ್ ಕುಟುಂಬದ ಹೊಸ ಸಂಗೀತ ಪ್ರತಿಭೆಗಳು ಹಾಡು ಹಾಡಲಿದ್ದಾರೆ. ಹೊಸದಾಗಿ ಜೋಶ್ ಅಪ್ಲಿಕೇಶನ್ ಸೇರಿದ ಸಂಗೀತ ಸಂಬಂಧಿ ಕಂಟೆಂಟ್ ಕ್ರಿಯೇಟರ್‌ಗಳು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಜೋಶ್ ಅಪ್ಲಿಕೇಶನ್‌ನಲ್ಲಿ ಸಂಗೀತ ಕುರಿತ ಕಂಟೆಂಟ್ ಅನ್ನು ಹೆಚ್ಚು ಮಾಡುವ ಕಾರಣಕ್ಕೆ ಹಾಗೂ ಜೋಶ್ ಅಪ್ಲಿಕೇಶನ್‌ನಲ್ಲಿ ಒರಿಜಿನಲ್ ಸಂಗೀತ ಸೃಷ್ಟಿಸುವ ಕಾರಣಕ್ಕೆ ಈ ಇವೆಂಟ್ ಅನ್ನು ಅರೇಂಜ್ ಮಾಡಲಾಗಿದೆ. ಗಾಯನದ ಹೊರತಾಗಿ ಜೋಶ್ ಕಂಟೆಂಟ್ ಕ್ರಿಯೇಟರ್‌ಗಳು ಜೋಶ್ ಅಪ್ಲಿಕೇಶನ್‌ನಲ್ಲಿ ತಮಗಾದ ಅನುಭವವನ್ನು ಸಹ ಪ್ರೇಕ್ಷಕರೊಟ್ಟಿಗೆ ಹಂಚಿಕೊಳ್ಳಲಿದ್ದಾರೆ. ಅಲ್ಲದೆ, ಜೋಶ್ ಈ ಹಿಂದೆ ಆಯೋಜಿಸಿದ್ದ ಇವೆಂಟ್‌ಗಳು ಹಾಗೂ ಇನ್ನು ಮುಂದೆ ಆಯೋಜಿಸಲಿರುವ ಇವೆಂಟ್‌ಗಳ ಬಗ್ಗೆಯೂ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ.
'ಜಾಮ್ ವಿತ್ ಜೋಶ್'ನಲ್ಲಿ ಪ್ರದರ್ಶನ ನೀಡಲಿರುವ ಜೋಶ್ ಕಂಟೆಂಟ್‌ಗಳ ಪಟ್ಟಿ ಇಲ್ಲಿದೆ.

https://share.myjosh.in/profile/42ef3b55-7258-44ad-ae2a-4d9e1737ae99
ಹನಿ ಬ್ಲೇಜ್
ಗಾಯಕ, ಬಹುವಾದ್ಯ ವಾದಕ, ಸಂಗೀತ ನಿರ್ದೇಶಕನೂ ಆಗಿರುವ ಹನಿ ಬ್ಲೇಜ್ ತಮ್ಮ ಮೂರನೇ ವಯಸ್ಸಿನಿಂದಲೇ ಸಂಗೀತ ಕಲಿಯಲು ಆರಂಭಿಸಿದವರು. ವೈಯೊಲಿನ್, ಪಿಯಾನೊ, ಗಿಟಾರ್, ಡ್ರಮ್ಸ್ ಮತ್ತು ತಬಲಾ ವಾದ್ಯಗಳನ್ನು ನುಡಿಸುತ್ತಾರೆ. ಬ್ಲೇಜ್ ಹಲವು ಸಂಗೀತ ನಿರ್ದೇಶಕರು ಹಾಗೂ ಆಲ್ಬಂ ಸಂಗೀತಗಾರರೊಟ್ಟಿಗೆ ಕೆಲಸ ಮಾಡಿದ್ದಾರೆ. ಹನಿ ಬ್ಲೇಜ್‌ರದ್ದು ಅವರದ್ದೇ ಆದ ಯೂಟ್ಯೂಬ್ ಚಾನೆಲ್ ಸಹ ಇದೆ. ಯೂಟ್ಯೂಬ್ ಚಾನೆಲ್‌ನಲ್ಲಿ ಹನಿ ಬ್ಲೇಜ್ ತಮ್ಮ ಒರಿಜಿನಲ್ ಸಂಗೀತವನ್ನು ಪ್ರದರ್ಶಿಸುತ್ತಾರೆ. ಅವರ ಮೊದಲ ಆಲ್ಬಂ ಹಾಡು ಶೀಘ್ರವೇ ಬಿಡುಗಡೆ ಆಗಲಿದೆ.
https://share.myjosh.in/profile/2752eb9c-e673-45fa-9c45-d2d1122a7a04?u=0x09f35c3d0d9c35db
ಸ್ನಿಗ್ದಜೀತ್ ಭೌಮಿಕ್
ಪಶ್ಚಿಮ ಬಂಗಾಳದ ರಾನ್‌ಗಂಜ್‌ನವರಾದ 31 ವರ್ಷದ ಸ್ನಿಗ್ದಜೀತ್ ಭೌಮಿಕ್ ಗಾಯಕರಾಗಿದ್ದು, ಜನಪದ, ಶಾಸ್ತ್ರೀಯ ಸಂಗೀತ, ಕವ್ವಾಲಿ, ಜಾಜ್, ಫ್ಯೂಷನ್ ಸಂಗೀತದಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. 2015 ರಲ್ಲಿ ಸಂಗೀತ ರಿಯಾಲಿಟಿ ಶೋ ಒಂದರಿಂದ ಹಾಡುಗಾರಿಕೆ ಪ್ರಾರಂಭಿಸಿದ ಭೌಮಿಕ್ 2018 ರಲ್ಲಿ ಬೆಂಗಾಲಿಯ ವಾಯ್ಸ್ ಆಫ್ ಇಂಡಿಯಾ ಶೋನಲ್ಲಿ ರನ್ನರ್ ಅಪ್ ಆದಾಗ ಹೆಚ್ಚು ಜನಪ್ರಿಯತೆ ಗಳಿಸಿದರು.
https://share.myjosh.in/profile/8d3ec3ee-5c54-4156-a1b6-547c2dac83d6?u=0x1e744697afdcc714
ಕೀರ್ತನಾ ಸ್ಮಿತಾ ಶಾಜಿ
ಎಂಜಿನಿಯರ್ ಆಗಿ ಬಳಿಕ ಉದ್ಯಮಿ ಆಗಿರುವ ಕೀರ್ತನಾ ಸ್ಮಿತಾ ಶಾಜಿ ಕಲಾವಿದೆಯೂ ಆಗಿದ್ದಾರೆ. ಸೂಪರ್ 4 ಸೀಸನ್ 2ರ ಸ್ಪರ್ಧಿಯಾಗಿದ್ದರು ಸ್ಮಿತಾ. ಈ ಕಾರ್ಯಕ್ರಮ ಮಳವಿಲ್ ಮನೋರಮಾನಲ್ಲಿ ಪ್ರಸಾರವಾಗುತ್ತಿತ್ತು. ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ಫಯಾಜ್ ಖಾನ್‌ರ ಶಿಷ್ಯೆಯಾಗಿದ್ದಾರೆ ಸ್ಮಿತಾ ಶಾಜಿ.
https://share.myjosh.in/profile/1c7656cd-9949-48e6-991b-29dfacba308c
ವಿಜಯ್ ಕನ್ನಡಿಗ
ವಿಜಯ್ ಕನ್ನಡಿಗ ಸ್ವತಂತ್ರ್ಯ ಸಂಗೀತಗಾರನಾಗಿದ್ದು, ಸಾಹಿತ್ಯ ರಚನೆ, ಗಾಯಕ, ಸಂಗೀತ ನಿರ್ದೇಶನಗಳನ್ನು ಮಾಡುತ್ತಾರೆ. ಇವರ 'ಜ್ಯೂಸ್ ಕುಡೀತೀಯ', 'ಫುಲ್ ಫೀಲಿಂಗ್ಸು', 'ಲೋಕಲ್ ಬಾಯ್ಸ್ ಪಾರ್ಟಿ', 'ಫುಲ್ ಫೀಲಿಂಗ್ಸು' ಹಾಡುಗಳು ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗಿವೆ. ಕನ್ನಡದ 'ಫ್ಯಾಮಿಲಿ ಪ್ಯಾಕ್', 'ಆಮ್ಲೆಟ್' ಸಿನಿಮಾಗಳಿಗೆ ಸಂಗೀತ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದಾರೆ.
https://share.myjosh.in/profile/49ec7838-eed2-4852-851b-56fa1e5a8c94?u=0x35ca0d2e79c34cb2
ದೀಪ್ ಸಂದಲ್
ಪಂಜಾಬಿನ ಜಲಂಧರ್‌ನವರಾಗಿರುವ ದೀಪ್ ಸಂದಲ್ ಗೀತ ಸಾಹಿತ್ಯ ರಚನೆಕಾರ ಹಾಗೂ ಗಾಯಕರಾಗಿದ್ದಾರೆ. ಸಂಗೀತದ ವಿಷಯದಲ್ಲಿ ಎಂ.ಎ, ಎಂಫಿಲ್ ಸಹ ಪಡೆದಿರುವ ದೀಪ್ ಸಂದಲ್ ಯೂಟ್ಯೂಬ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣ ವೇದಕೆಗಳಲ್ಲಿ ಜನಪ್ರಿಯರಾಗಿದ್ದಾರೆ. ಅವರ ಹಲವು ಹಾಡುಗಳು ಸೂಪರ್ ವೈರಲ್ ಆಗಿವೆ. ಈ ಅದ್ಭುತ ಯುವ ಸಂಗೀತಗಾರರ ಪ್ರತಿಭೆಗೆ ಸಾಕ್ಷಿಯಾಗಬೇಕೆ ಹಾಗಿದ್ದರೆ ಕೂಡಲೇ ಜೋಶ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ.