»   » ಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ

ಮೇ 10 ಕ್ಕೆ ಭಾರತದಲ್ಲಿ ಪಾಪ್ ಗಾಯಕ ಜಸ್ಟಿನ್ ಬೀಬರ್ ಸಂಗೀತ ಮೇಳ

Posted By:
Subscribe to Filmibeat Kannada

ವಿಶ್ವ ವಿಖ್ಯಾತ ಪಾಪ್ ಗಾಯಕ ಜಸ್ಟಿನ್ ಬೀಬರ್ ಇದೇ ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಜಸ್ಟಿನ್ ಬೀಬರ್ 'ಜಿಯೋ ಜಸ್ಟಿನ್ ಬೀಬರ್' ಕಾರ್ಯಕ್ರಮದ ಉದ್ದೇಶದಿಂದ ಭಾರತಕ್ಕೆ ಆಗಮಿಸುತ್ತಿದ್ದು, ಮೇ 10 ರಂದು ಮುಂಬೈನ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ.['ಕಾಫಿ ವಿತ್ ಕರಣ್' ಶೋದಲ್ಲಿ ಗಾಯಕ ಜಸ್ಟಿನ್ ಬೀಬರ್ ಮಾತುಕತೆ?]

ಜಸ್ಟಿನ್ ಬೀಬರ್ ಇಂದು(ಮೇ 8) ಮುಂಬೈ ಗೆ ಬಂದಿಳಿಯಲಿದ್ದು, ಮೇ 10 ರಂದು ನಡೆಯಲಿರುವ ಅವರ ಸಂಗೀತ ಕಾರ್ಯಕ್ರಮಕ್ಕೆ ಸಂಪೂರ್ಣ ಭದ್ರತಾ ವ್ಯವಸ್ಥೆ ಕೈಗೊಳ್ಳಲಿರುವ ಬಗ್ಗೆ 'ನವಿ ಮುಂಬೈ ಪೊಲೀಸ್' ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂದೆ ಓದಿರಿ..

ಜಸ್ಟಿನ್ ಬೀಬರ್ ಸಂಗೀತ ಮೇಳ

ಕೆನೆಡಿಯನ್ ಗಾಯಕ ಜಸ್ಟಿನ್ ಬೀಬರ್ ಮೇ 10 ರಂದು ಮುಂಬೈನ ಡಿ ವೈ ಪಾಟೀಲ್ ಸ್ಟೇಡಿಯಂ ನಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಈ ಸಂಗೀತ ಮೇಳ ಕಾರ್ಯಕ್ರಮಕ್ಕೆ 50000 ಕ್ಕೂ ಹೆಚ್ಚು ಜಸ್ಟಿನ್ ಬೀಬರ್ ಅಭಿಮಾನಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿದೆ.

ಜಸ್ಟಿನ್ ಬೀಬರ್ ಸೆಕ್ಯೂರಿಟಿಗಾಗಿ 500 ಪೊಲೀಸರಿಂದ ಬಂದೋಬಸ್ತ್

ಜಸ್ಟಿನ್ ಬೀಬರ್ ಭಾರತಕ್ಕೆ ಮೊದಲ ಬಾರಿಗೆ ಆಗಮಿಸುತ್ತಿರುವ ಸುದ್ದಿ ಎಲ್ಲೆಡೆ ಹರಡಿದೆ. ಮುಂಬೈಗೆ ಬಂದಿಳಿಯಲಿರುವ ಜಸ್ಟಿನ್ ಬೀಬರ್ ಸೆಕ್ಯೂರಿಟಿಗಾಗಿ ಈಗಾಗಲೇ 500 ಪೊಲೀಸರನ್ನು ನಿಯೋಜಿಸಿದ್ದು, ಸಲ್ಮಾನ್ ಖಾನ್ ರವರ ಬಾಡಿಗಾರ್ಡ್ ಶೆರಾ ರವರು ಭದ್ರತಾ ವ್ಯವಸ್ಥೆ ನಿರ್ವಹಣೆ ಹೊಣೆ ಹೊತ್ತಿದ್ದಾರೆ ಎಂದು ತಿಳಿದಿದೆ.

ಭಾರತದಲ್ಲಿ ಮೊದಲ ಬಾರಿಗೆ ಇಂಟರ್ ನ್ಯಾಷನಲ್ ಸೆಲೆಬ್ರಿಟಿಯ ಸಂಗೀತ ಮೇಳ

ದೆಹಲಿ ಮೂಲದ 'ವೈಟ್ ಫಾಕ್ಸ್ ' ಎಂಬ ಕಂಪನಿ ಮುಂಬೈ ನಲ್ಲಿ ನಡೆಯಲಿರುವ ಸಂಗೀತ ಮೇಳದ ನಿರ್ವಹಣೆ ಹೊತ್ತಿದೆ. ಅಂತರಾಷ್ಟ್ರೀಯ ಸೆಲೆಬ್ರಿಟಿ ಜಸ್ಟಿನ್ ಬೀಬರ್ ಇದೇ ಮೊದಲ ಬಾರಿಗೆ ಭಾರತದಲ್ಲಿ ತಮ್ಮ ಸಂಗೀತ ಪ್ರದರ್ಶನ ನೀಡುತ್ತಿದ್ದಾರೆ.

ಜಸ್ಟಿನ್ ಬೀಬರ್ ಪ್ರವಾಸ

ಜಸ್ಟಿನ್ ಬೀಬರ್ ಮುಂಬೈನಲ್ಲಿನ ಸಂಗೀತ ಪ್ರದರ್ಶನದ ನಂತರ ದೆಹಲಿ, ಜೈಪುರ್ ಮತ್ತು ಆಗ್ರಾ ಪ್ರವಾಸಿ ತಾಣಗಳಿಗೂ ಭೇಟಿ ನೀಡಲಿದ್ದಾರೆ.

English summary
Justin Bieber to land in Mumbai today for his May 10 concert. A Delhi-based company, White Fox, is managing the concert, which is part of the Asia leg of Bieber’s Purpose World Tour. It is the first time the international star will perform in India.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada