»   » 'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

'ಕಾಫಿತೋಟ'ದಿಂದ ಬಂತು ಹೊಸ ಹಾಡು ನೋಡು ಗುರು....

Posted By:
Subscribe to Filmibeat Kannada

ಟಿ.ಎನ್ ಸೀತಾರಾಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಕಾಫಿತೋಟ' ಹಂತ ಹಂತವಾಗಿ ಕುತೂಹಲ ಮೂಡಿಸುತ್ತಿದೆ. ಫಸ್ಟ್ ಲುಕ್ ಪೋಸ್ಟರ್ ಮತ್ತು ಹಾಡುಗಳ ಮೂಲಕ ಮೋಡಿ ಮಾಡುತ್ತಿದೆ.

'ಕಾಫಿತೋಟ' ಚಿತ್ರದಲ್ಲಿ ಎರಡು ಹಾಡುಗಳಿವೆ. ಒಂದು ಹಾಡಿಗೆ ಅನೂಪ್‌ ಸೀಳಿನ್ ಹಾಗೂ ಮತ್ತೊಂದು ಹಾಡಿಗೆ ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಈಗ ಅನೂಪ್‌ ಸೀಳಿನ್ ಸಂಗೀತ ನಿರ್ದೇಶನದ 'ಹಾಡಾಡ್ಕೊಂಡಿರು ಓಡಾಡ್ಕೊಂಡಿರು...' ಹಾಡಿನ ವಿಡಿಯೋ ವರ್ಷನ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಒಳ್ಳೆ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

cricketKafi thota Movie Haadadkandiru Video Song Released

ಈ ಹಾಡಿಗೆ ಪತ್ರಕರ್ತ ಜೋಗಿ ಅವರು ಸಾಹಿತ್ಯ ಬರೆದಿದ್ದು, ಅನೂಪ್ ಸೀಳಿನ್, ರಾಜ್ ಗುರು ಹೊಸಕೋಟೆ, ಅನನ್ಯ ಭಗತ್ ಧ್ವನಿಯಾಗಿದ್ದಾರೆ. ಹಾಗೆ, ಕಾಫಿತೋಟದ ಇನ್ನೊಂದು ಹಾಡಿಗೆ ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದು, 'ಇಂದು ನಿನ್ನ ಎದುರಲಿ ಮಾತೇ ಬೇಡ ಅನಿಸಿದೆ' ಹಾಡಿಗೆ ಜಯಂತ್‌ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಟಿ.ಎನ್.ಎಸ್ 'ಕಾಫಿ ತೋಟ'ದಲ್ಲಿ ಪವರ್ ಸ್ಟಾರ್ ಹಾಡು-ಹರಟೆ

ಅಂದ್ಹಾಗೆ, ಟಿ.ಎನ್.ಸೀತಾರಾಮ್ ಅವರು 'ಮೀರಾ ಮಾಧವ ರಾಘವ' ಚಿತ್ರದ ನಂತರ 'ಕಾಫಿತೋಟ'ಕ್ಕೆ ಆಕ್ಷನ್ ಕಟ್ ಹೇಳಿದ್ದು, 'ಮನ್ವಂತರ ಚಿತ್ರ' ಸಂಸ್ಥೆ ನಿರ್ಮಾಣ ಮಾಡಿದೆ. ರಘು ಮುಖರ್ಜಿ, ರಾಧಿಕಾ ಚೇತನ್, ಸಂಯುಕ್ತ ಹೊರನಾಡು, ಅಪೇಕ್ಷ ಪುರೋಹಿತ್, ಅಚ್ಯುತ್ ಕುಮಾರ್, ರಾಹುಲ್ ಮಾಧವ ಸೇರಿದಂತೆ ಇನ್ನು ಹಲವು ಕಲಾವಿದರು ಅಭಿನಯಿಸಿದ್ದಾರೆ.

'ಕಾಫಿತೋಟ'ದ 'ಹಾಡಾಡ್ಕೊಂಡಿರು ಓಡಾಡ್ಕೊಂಡಿರು...' ಹಾಡು ಮುಂದಿದೆ ನೋಡಿ ಎಂಜಾಯ್ ಮಾಡಿ

English summary
Kaafi thota Movie Haadadkandiru Video Song Released. The Movie Directed by T N Seetharam. Music composed by J Anoop Seelin & Lyrics by Jogi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada