»   » ಮೈಕ್ ಹಿಡಿದು ಹಾಡಲು ಶುರು ಮಾಡಿದ ಹರೀಶ್ ರಾಜ್!

ಮೈಕ್ ಹಿಡಿದು ಹಾಡಲು ಶುರು ಮಾಡಿದ ಹರೀಶ್ ರಾಜ್!

Posted By:
Subscribe to Filmibeat Kannada

ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಜಂಪಿಂಗ್ ಸ್ಟಾರ್ ಅಂತಲೇ ಖ್ಯಾತಿ ಗಳಿಸಿರುವ ನಟ ಹರೀಶ್ ರಾಜ್ ಪರಿಚಯ ನಿಮಗೆ ಇದೇ ತಾನೆ? ಇಲ್ಲಾಂದ್ರೆ, ಒಮ್ಮೆ ಈ ಲೇಖನ ಓದಿ...[ಗನ್ ಎತ್ತಂಗಡಿ, ಹರೀಶ್ ಆತ್ಮಹತ್ಯೆ ಬೆದರಿಕ]

'ಗನ್' ಹಿಡಿದು ಸ್ಯಾಂಡಲ್ ವುಡ್ ನಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ನಟ ಹರೀಶ್ ರಾಜ್ ಇದೀಗ ಹಳೆಯದ್ದನ್ನೆಲ್ಲಾ ಮರೆತು ಹೊಸ ಸಿನಿಮಾ ಶುರು ಮಾಡಿದ್ದಾರೆ. ಅದೇ 'ಶ್ರೀ ಸತ್ಯನಾರಾಯಣ'.

Kannada Actor Harish Raj turns Singer for 'Shree Sathyanarayana'

'ಶ್ರೀ ಸತ್ಯನಾರಾಯಣ' ಚಿತ್ರದಲ್ಲಿ ನಟನೆ ಜೊತೆಗೆ ನಿರ್ದೇಶನದ ಹೊಣೆಯನ್ನೂ ಹೊತ್ತಿರುವ ನಟ ಹರೀಶ್ ರಾಜ್ ಗಾನ ಸುಧೆಯನ್ನೂ ಹರಿಸಿರುವುದು ವಿಶೇಷ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಯಶ್, ಶರಣ್ ಸೇರಿದಂತೆ ಸ್ಯಾಂಡಲ್ ವುಡ್ ನ ಅನೇಕ ಸ್ಟಾರ್ ಹೀರೋಗಳು ಗಾಯಕರಾಗಿರುವುದು ನಿಮಗೆಲ್ಲಾ ಗೊತ್ತು. ಈಗ ಅದೇ ಲಿಸ್ಟ್ ಗೆ ನಟ ಹರೀಶ್ ರಾಜ್ ಲೇಟೆಸ್ಟ್ ಎಂಟ್ರಿ.

'ಶ್ರೀ ಸತ್ಯನಾರಾಯಣ' ಚಿತ್ರದಲ್ಲಿ ''ದಿನವೂ ನನಗೆ ಸಂಡೆ..'' ಎಂಬ ಹಾಡಿಗೆ ಹರೀಶ್ ರಾಜ್ ದನಿಗೂಡಿಸಿದ್ದಾರೆ. ಹಾಡನ್ನ ನೀವು ಕೇಳ್ಬೇಕು ಅಂದ್ರೆ ಇನ್ನೂ ಸ್ವಲ್ಪ ದಿನ ಕಾಯ್ಬೇಕು.

English summary
Kannada Actor Harish Raj, of 'Gun' fame has turned Singer for his upcoming film 'Shree Sathyanarayana'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada