For Quick Alerts
  ALLOW NOTIFICATIONS  
  For Daily Alerts

  ಗಣೇಶ ಪೆಂಡಲ್‌ಗಳ ಬಳಿ ಈ ವರ್ಷ ಸದ್ದು ಮಾಡುವ ಮಾಸ್‌ ಸಾಂಗ್ಸ್ ಇವೆ!

  |

  ಕೊರೊನಾ ವೈರಸ್ ಭೀತಿಯ ನಡುವೆಯೂ ಗೌರಿ-ಗಣೇಶ ಹಬ್ಬದ ಆಚರಣೆ ದೇಶಾದ್ಯಂತ ನಡೆಯುತ್ತಿದೆ. ಈ ಹಿಂದಿನ ವರ್ಷಗಳಂತೆ ಅದ್ಧೂರಿ, ಸಂಭ್ರಮ ಇಲ್ಲದಿದ್ದರೂ ಸಂಪ್ರದಾಯವಾಗಿ ಸರ್ಕಾರದ ನಿಯಮಗಳ ಜೊತೆ ವಿನಾಯಕನ ಉತ್ಸವ ಆಚರಿಸಲಾಗುತ್ತಿದೆ.

  ಗಣೇಶ ಹಬ್ಬ ಬಂತಂದ್ರೆ ಯುವ ಜನರಿಗೆ ಒಂದು ರೀತಿ ಸಂಭ್ರಮ. ಹಾಡುಗಳು, ಡ್ಯಾನ್ಸ್, ಪೂಜೆ, ಪ್ರಸಾದ ಹೀಗೆ ಹಲವು ಖುಷಿಗೆ ಸಾಕ್ಷಿಯಾಗುತ್ತದೆ. ಇನ್ನು ಗಣೇಶ ಕೂರಿಸುವ ಪೆಂಡಲ್‌ಗಳ ಬಳಿ ಹಾಡುಗಳ ಅಬ್ಬರ ಸ್ವಲ್ಪ ಜೋರಾಗಿಯೇ ಇರುತ್ತದೆ. ಭಕ್ತಿ ಗೀತೆಗಳ ಜೊತೆಗೆ ಟೈಂ ಪಾಸ್‌ಗೆ ಕೆಲವು ಸಿನಿಮಾ ಹಾಡುಗಳಿಗೂ ಇಲ್ಲಿ ಜಾಗ ಇರುತ್ತದೆ.

  ಗೌರಿ-ಗಣೇಶ ಹಬ್ಬಕ್ಕೆ ಶುಭಕೋರಿದ ಡಿ-ಬಾಸ್ ಮತ್ತು ರಾಕಿ ಭಾಯ್

  ಈ ವರ್ಷ ಗಣೇಶ ಪೆಂಡಲ್‌ಗಳ ಬಳಿ ಕನ್ನಡದ ಈ ಐದು ಮಾಸ್‌ ಹಾಡುಗಳ ಅಬ್ಬರ ಹೆಚ್ಚಾಗಿರುತ್ತದೆ. ಯಾವುದು ಆ ಹಾಡುಗಳು? ಮುಂದೆ ಓದಿ....

  ಕರಾಬು... ಬಾಸ್ ಕರಾಬು

  ಕರಾಬು... ಬಾಸ್ ಕರಾಬು

  ಕನ್ನಡ ಚಿತ್ರರಂಗದ ಪಾಲಿಗೆ ಯೂಟ್ಯೂಬ್‌ನಲ್ಲಿ ಅತಿ ಕಡಿಮೆ ಅವಧಿಗೆ ಅತಿ ಹೆಚ್ಚು ವೀಕ್ಷಣೆ ಕಂಡಿರುವ ಹಾಡು ಪೊಗರು ಸಿನಿಮಾದ ಕರಾಬು ಸಾಂಗ್. ಚಿಕ್ಕ ಮಕ್ಕಳಿಗೆ ಈ ಹಾಡು ಫೇವರಿಟ್ ಆಗಿದೆ. ಯುವಕರಿಗೂ ಬೆಸ್ಟ್. ಅದರಲ್ಲೂ ಮಾಸ್‌ ಪ್ರಿಯರಿಗೆ ಅಚ್ಚುಮೆಚ್ಚು. ಗಣೇಶ ಪೆಂಡಲ್‌ ಬಳಿ ಟೈಂ ಪಾಸ್ ಮಾಡಲು ಯುವಕರಿಗೆ ಹೇಳಿ ಮಾಡಿಸಿದ ಹಾಡು ಇದು.

  ಜೈ ಶ್ರೀರಾಮ್

  ಜೈ ಶ್ರೀರಾಮ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾದ ಎಲ್ಲ ಹಾಡುಗಳು ಹಿಟ್ ಆಗಿವೆ. ಅದರಲ್ಲೂ ಜೈ ಶ್ರೀರಾಮ್ ಹಾಡಂತೂ ಹೆಚ್ಚು ಲೈಕ್ಸ್ ಪಡೆದಿದೆ. 2020ನೇ ವರ್ಷದ ಹಿಟ್ ಹಾಡುಗಳ ಪೈಕಿ ಜೈ ಶ್ರೀರಾಮ್ ಸಹ ಒಂದು. ಶ್ರೀರಾಮ ಹಾಗೂ ಹನುಮ ಕುರಿತಾದ ಈ ಹಾಡು ಗಣೇಶ ಸನ್ನಿಧಿಯಲ್ಲಿ ಕೇಳುವುದು ಸಹಜ.

  ಶ್ರೀಮನ್ನಾರಾಯಣ ಹಾಡು

  ಶ್ರೀಮನ್ನಾರಾಯಣ ಹಾಡು

  ಕಳೆದ ವರ್ಷ ತೆರೆಕಂಡಿದ್ದ ಚಿತ್ರ ಅವನೇ ಶ್ರೀಮನ್ನಾರಾಯಣ. ಈ ಸಿನಿಮಾ ಹ್ಯಾಂಡ್ಸ್‌ಪ್ ಹಾಡು ದೊಡ್ಡ ಹಿಟ್ ಆಗಿತ್ತು. ಈ ಹಾಡು ಸಹ ಗಣೇಶ ಹಬ್ಬದ ವಿಶೇಷವಾಗಿ ಸದ್ದು ಮಾಡಲಿದೆ.

  ಸೂರಿ ಅಣ್ಣಾ....

  ಸೂರಿ ಅಣ್ಣಾ....

  ದುನಿಯಾ ವಿಜಯ್ ನಟಿಸಿ ನಿರ್ದೇಶನದ ಚಿತ್ರ ಸಲಗ. ಈ ಸಿನಿಮಾದ ಸೂರಿ ಅಣ್ಣಾ ಹಾಡು ಸಿಕ್ಕಾಪಟ್ಟೆ ಟ್ರೆಂಡ್ ಆಯ್ತು. ಸಾವಿನ ಸುತ್ತ ಈ ಹಾಡು ಮೂಡಿ ಬಂದಿದ್ದರೂ ಒಳ್ಳೆಯ ಎಂಟರ್‌ಟೈನಿಂಗ್ ಆಗಿದೆ. ಮಾಸ್ ಪ್ರೇಕ್ಷಕರ ಇಷ್ಟದ ಹಾಡುಗಳಲ್ಲಿ ಈ ಸಾಂಗ್ ಸಹ ಒಂದಾಗಿದೆ.

  ಚಾರ್ಲ್ಸ್ ಹೋಗ್ಬಿಟ್ಟ

  ಚಾರ್ಲ್ಸ್ ಹೋಗ್ಬಿಟ್ಟ

  ಇತ್ತೀಚಿಗಷ್ಟೆ ಆನ್‌ಲೈನ್‌ನಲ್ಲಿ ಬಿಡುಗಡೆಯಾದ ಸಿನಿಮಾ ಫ್ರೆಂಚ್ ಬಿರಿಯಾನಿ. ಈ ಚಿತ್ರದಲ್ಲಿ ಬರುವ ಚಾರ್ಲ್ಸ್ ಹೋಗ್ಬಿಟ್ಟ....ಸಖತ್ ಎಂಟರ್‌ಟೈನಿಂಗ್ ಆಗಿದೆ. ಬಹುಶಃ ಈ ಹಾಡು ಗಣೇಶ ಪೆಂಡಲ್‌ಗಳ ಬಳಿ ಕೇಳುವುದು ಸಹಜ.

  English summary
  Ganesh chaturthi 2020: kannada mass songs for youth to enjoy Ganesh festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X