For Quick Alerts
  ALLOW NOTIFICATIONS  
  For Daily Alerts

  ಹಿಟ್ ಆದ 'ಬಟರ್ ಫ್ಲೈ' ಸಾಂಗ್: ಮದುವೆ ಹಾಡಿಗೆ ಭರ್ಜರಿ ಪ್ರಶಂಸೆ

  |

  ಬಹು ಕೋಟಿ ವೆಚ್ಚದ ರಮೇಶ್ ಅರವಿಂದ್ ನಿರ್ದೇಶನದ ಪಾರುಲ್ ಯಾದವ್ ಮುಖ್ಯ ಭೂಮಿಕೆಯ 'ಬಟರ್ ಫ್ಲೈ' ಸಿನಿಮಾದಲ್ಲಿ ''ನಾಳೆ ನಮ್ಮ ಮನೆಲೊಂದು....'' ಹಾಡು ಜನಪ್ರಿಯವಾಗಿದ್ದು, ದೇಶಕ್ಕೆ ಒಂದು ರಾಷ್ಟ್ರ ಗೀತೆ ಹೇಗೋ ಹಾಗೇ ಮದುವೆಗೆ ಈ ಗೀತೆ ಎಂದು ಬಣ್ಣಿಸಲಾಗುತ್ತಿದೆ. ಈ ಗೀತೆಯನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಲಾಗಿದ್ದು, ಗೋಕರ್ಣದ ಹಿನ್ನಲೆಯುಳ್ಳ ನಾಯಕಿ ವಧುವಾಗಿ ಈ ಹಾಡಿನಲ್ಲಿ ಮಿಂಚಿದ್ದಾರೆ.

  ಈ ಹಾಡಿನೊಂದಿಗೆ ಮುಂಬೈ ಮೂಲದ ಹೆಸರಾಂತ ನೃತ್ಯ ನಿರ್ದೇಶಕ ಬಾಸ್ಕೋ-ಸೀಸರ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅಮಿತ್ ತ್ರಿವೇದಿ ಈ ಹಾಡಿಗೆ ರಾಗ ಸಂಯೋಜನೆ ಮಾಡಿದ್ದಾರೆ. ದೇಸಿ ಉಪಕರಣಗಳನ್ನು ಬಳಸಿ ಈ ಹಾಡಿನ ರಾಗ ಸಂಯೋಜನೆ ಅಮಿತ್ ತ್ರಿವೇದಿ ಮಾಡಿದ್ದಾರೆ.

  ಇಂದು ನಡೆಯಲಿದೆ ಪಾರೂಲ್ ಯಾದವ್ ಕಲ್ಯಾಣ ಇಂದು ನಡೆಯಲಿದೆ ಪಾರೂಲ್ ಯಾದವ್ ಕಲ್ಯಾಣ

  ''ನಾಳೆ ನಮ್ಮ ಮನೆಲೊಂದು...'' ಹಾಡನ್ನು ಜಸ್ಸಿ ಗಿಫ್ಟ್ ಹಾಗೂ ಅನನ್ಯ ಭಟ್ ಹಾಡಿದ್ದಾರೆ, ಇದಕ್ಕೆ ಸಾಹಿತ್ಯ ಒದಗಿಸಿರುವವರು ಯೋಗರಾಜ್ ಭಟ್.

  ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ 'ಬಟರ್ ಫ್ಲೈ' ಟೀಸರ್ ಸಖತ್ ಹಾಟ್ ಅಂಡ್ ಕ್ಯೂಟ್ ಆಗಿದೆ 'ಬಟರ್ ಫ್ಲೈ' ಟೀಸರ್

  ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಮನು ಕುಮಾರನ್ ನಿರ್ಮಾಣದಲ್ಲಿ, ಪಾರುಲ್ ಯಾದವ್ ಸಹ ನಿರ್ಮಾಣದಲ್ಲಿ ಸಿದ್ಧಗೊಂಡಿದೆ, ಟೈಜೂನ್ ಖೋರಕಿವಾಲಾ ಅರ್ಪಿಸುವ 'ಬಟರ್ ಫ್ಲೈ' ಮೆಡಿಎಂಟೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗಿದೆ. 'ಬಟರ್ ಫ್ಲೈ' ಸಿನಿಮಾಕ್ಕೆ ಮಮತ ಸಾಗರ್ ಹಾಗೂ ರಮೇಶ್ ಅರವಿಂದ್ ಸಂಭಾಷಣೆ ರಚಿಸಿದ್ದಾರೆ.

  English summary
  Kannada Actress Parul Yadav starrer Ramesh Aravind directorial Kannada Movie Butterfly marriage song becomes hit.
  Tuesday, January 22, 2019, 13:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X