»   » ಎ ಆರ್ ರೆಹಮಾನ್ - ಗಾಡ್ ಫಾದರ್ ಆಡಿಯೋ ವಿಮರ್ಶೆ

ಎ ಆರ್ ರೆಹಮಾನ್ - ಗಾಡ್ ಫಾದರ್ ಆಡಿಯೋ ವಿಮರ್ಶೆ

By: *ಬಾಲರಾಜ್ ತಂತ್ರಿ
Subscribe to Filmibeat Kannada
1. ಆಲಾಪನೆ ಮೆಲ್ಲನೆ ಶುರುವಾಯಿತು..ಸಾಹಿತ್ಯ; ಕಲ್ಯಾಣ್ ಹಾಡಿರುವವರು: ಅಭಯ್ ಜೋದ್ಪುರ್ಕರ್, ಮರಿಯಾ ರೋಶಿನಿ ವಿನ್ಸೆಂಟ್, ಬ್ಲೇಜ್

ವೆಸ್ಟರ್ನ್ ಶೈಲಿಯಲ್ಲಿ ಸಾಗುವ ಹಾಡು ರಿಫ್ರೆಷ್ ಆಗಿದ್ದು, ಸ್ಯಾಂಡಲ್ ವುಡ್ ಗೆ ಹೊಸ ಪರಿಚಯವಾಗಿರುವ ಅಭಯ್ ಕನ್ನಡ ಸ್ವರ ಉಚ್ಚಾರಣೆ ಸ್ಪಷ್ಟವಾಗಿರುವುದು ವಿಶೇಷ. ಹಾಡಿನ ಮಧ್ಯೆ ಹಿಂದಿ ಮತ್ತು ಇಂಗ್ಲಿಶ್ ಪದಗಳನ್ನು ಬಳಸಿಕೊಳ್ಳಲಾಗಿದೆ. ಕೋರಸ್ ಉಚ್ಚಾರಣೆ ಅಷ್ಪಷ್ಟ ಮತ್ತು ಅಬ್ಬರವಾಗಿದೆ.

2. ಮಾ..ಮಾಮ.. ಸಂಚಾರಿ ಮನಸು
ಸಾಹಿತ್ಯ; ಕಲ್ಯಾಣ್
ಹಾಡಿರುವವರು: ನಿವಾಸ್, ಶ್ವೇತಾ ಮೋಹನ್

ಮೊದಲ ಹಾಡಿಗೆ ವಿರುದ್ದವಾಗಿ ಜಾನಪದ ಶೈಲಿಯಲ್ಲಿ ಸಾಗುವ ಹಾಡು. ಹಾಡಿಗೆ ಕೆಲವೊಂದು ವಿಶಿಷ್ಟವಾದ ಸಂಗೀತ ಪರಿಕಗಳನ್ನು ಬಳಸಿಕೊಂಡಂತೆ ಅನುಭವ ನೀಡುವ ಟ್ಯೂನ್. ಹಾಡಿಗೆ ಕಲ್ಯಾಣ್ ಸಾಹಿತ್ಯ ರೊಮ್ಯಾಂಟಿಕ್ ಆಗಿದೆ.

3. ಲಾಲಿ ಲಾಲಿ ಅಮ್ಮ ತೂಗದ ಜೋಕಾಲಿಯಮ್ಮ..
ಸಾಹಿತ್ಯ; ಕಲ್ಯಾಣ್
ಹಾಡಿರುವವರು: ನರೇಶ್ ಅಯ್ಯರ್

ಸ್ಲೋ ಪಿಚ್ ನಲ್ಲಿ ತಾಯಿಯ ಮಮತೆಯನ್ನು ಸಾರುವ ಮೆಲೋಡಿಯಸ್ ಟ್ಯಾಕ್. ನಾನು ಒಬ್ಬ ಹುಚ್ಚ, ಅಮ್ಮನ ಹುಚ್ಚು ಹಿಡಿದ ಹುಚ್ಚ, ಅಮ್ಮನೆದೆರು ಯಾರೇ ಇರಲಿ ಅವರಿಗಿಂತ ಹೆಚ್ಚಾ..ಹೀಗೆ ಸಾಗುವ ಉತ್ತಮ ಸಾಹಿತ್ಯವಿರುವ ಹಾಡು.

4. ಸರಿಗಮ ಸಂಗಮವೇ
ಸಾಹಿತ್ಯ; ಕಲ್ಯಾಣ್
ಹಾಡಿರುವವರು: ಶ್ವೇತಾ ಮೋಹನ್, ಮೇಘ

ಆಲ್ಬಮ್ ನಲ್ಲಿ ಕ್ಲಾಸಿಕಲ್ ಟಚ್ ನಲ್ಲಿ ಸಾಗುವ ಹಾಡು. ಸಂಪೂರ್ಣ ಶಾಸ್ತ್ರೀಯ ಸಂಗೀತ ಶೈಲಿಯ ಹಾಡು ಇದಾಗಿದ್ದು, ಸಾಹಿತ್ಯ, ಹಾಡಿನ ಟ್ಯೂನ್ ಇಂಪಾಗಿದ್ದು ಮತ್ತೆ ಮತ್ತೆ ಕೇಳುವಂತಿದೆ.

5. ತೋತಾಪುರಿ, ಕಡಲೆಪುರಿ, ಪ್ರತಿದಿನ ದೀಪಾವಳಿ.
ಸಾಹಿತ್ಯ; ಕಲ್ಯಾಣ್
ಹಾಡಿರುವವರು: ಸೋನು ಸಕ್ಕರ್, ಅಪೂರ್ವ , ಶ್ವೇತಾ ಮಜೆತಿಯಾ, ಅಭಯ್ ಜೋದ್ಪುರ್ಕರ್, ಅರುಣ್ ಹರಿದಾಸ್ ಕಾಮತ್

ವಿಭಿನ್ನವಾದ ಸಾಹಿತ್ಯ ಮತ್ತು ಕಂಪೋಸ್ ಮಾಡಿರುವ ಹಾಡು. ಅತ್ತೆ ಮನೆಗೆ ಎಂಟ್ರಿ ಕೊಟ್ಟ ಕೂಡ್ಲೇ ಅಪ್ಪಿಕೊಳ್ಳ ಪ್ರೋಗ್ರಾಮ್ ಗ್ಯಾರಂಟಿ. ಇದು ಮಾಯಾ ಬಜಾರು ಅಲ್ಲಾ ಪ್ರಾಯ ಬಜಾರು.. ಹೀಗೆ ಐದು ಜನ ಗಾಯಕರನ್ನು ಬಳಸಿಕೊಂಡು ಹಾಡಿಸಿರುವ ಹಾಡು.

6. ನನ್ನೆದೆ ಶ್ರುತಿಯಲಿ
ಸಾಹಿತ್ಯ; ದೇವಪ್ಪ ಹಾಸನ್
ಹಾಡಿರುವವರು: ವಿಜಯ್ ಪ್ರಕಾಶ್, ಚಿನ್ಮಯಿ

ಆಲ್ಬಮ್ ನಲ್ಲಿರುವ ನಾಲ್ಕನೇ ಹಾಡಿಗೆ ಬಳಸಿಕೊಂಡಿರುವ ಟ್ಯೂನ್ ಅನ್ನು ಇಲ್ಲಿ ಹೆಚ್ಚು ಕಮ್ಮಿ ಪಲ್ಲವಿ ಮತ್ತು ಚರಣದಲ್ಲಿ ಬಳಸಿಕೊಳ್ಳಲಾಗಿದೆ.

7.ನೀನೆ ಈ ಕಣ್ಣ
ಸಾಹಿತ್ಯ; ಕವಿರಾಜ್
ಹಾಡಿರುವವರು: ಅಭಯ್ ಜೋದ್ಪುರ್ಕರ್, ಚಿನ್ಮಯಿ

ಚಿತ್ರದ ಡುಯೆಟ್ ಹಾಡು. ಉತ್ತಮವಾಗಿ ಕಂಪೋಸ್ ಮಾಡಿರುವ ಹಾಡು. ನೀನೆ ಕಣ್ಣ ಮೊದಲ ಹೊಂಗನಸು, ದೊರೆಯ ನಾ ಬದುಕುವಿನು, ನಿನ್ನೊಲವಿನ ಲೋಕದಲಿ ಹೀಗೆ ಕವಿರಾಜ್ ರಚಿಸಿರುವ ಹಾಡಿನಲ್ಲಿ ಗಾಯಕ ಮತ್ತು ಗಾಯಕಿಯರಿಗೆ ಕನ್ನಡ ಉಚ್ಚಾರಣೆ ಸುಧಾರಿಸಬೇಕಿದೆ.

ರೆಹಮಾನ್ ಕನ್ನಡಕ್ಕೆ ಬರುತ್ತಿರುವುದು ಎಷ್ಟು ಸತ್ಯವೋ, ಅದೇ ರೀತಿ ಈ ಚಿತ್ರಕ್ಕಾಗಿಯೇ ಅವರು ತಾಜಾ ಟ್ಯೂನ್ ಗಳನ್ನು ಕಂಪೋಸ್ ಮಾಡುತ್ತಿರುವುದು ಅಷ್ಟೇ ನಿಜ. ಅದರಲ್ಲಿ ಯಾವುದೇ ಸಂಶಯ ಬೇಡ ಎಂದಿದ್ದರು ಚಿತ್ರದ ನಿರ್ಮಾಪಕ ಕೆ ಮಂಜು.

ಆದರೆ ವಾರಲಾರು ತಮಿಳು ಚಿತ್ರದ ರಿಮೇಕ್ ಆಗಿರುವ ಗಾಡ್ ಫಾದರ್ ಚಿತ್ರಕ್ಕೆ ಐದು ಹಾಡುಗಳನ್ನು ತಮಿಳಿನಿಂದ ಭಟ್ಟಿ ಇಳಿಸಲಾಗಿದೆ. ಹಾಗಾಗಿ ಗಾಡ್ ಫಾದರ್ ಚಿತ್ರಕ್ಕಾಗಿ ರೆಹಮಾನ್ ಸಂಯೋಜಿಸಿರುವ ಹಾಡು ಎರಡೇ. ಯಾವುದೇ ಚಿತ್ರದ ರಿಮೇಕ್ ಆದರೆ ನಮಗೇನು, ಹಾಡು ಚೆನ್ನಾಗಿದೆಯಾ ಎಂದು ಕೇಳುವವರಿಗೆ ಈ ಆಡಿಯೋ ಐವತ್ತು ರೂಪಾಯಿ ಕೊಟ್ಟು ಖರೀದಿಸುವುದಕ್ಕೆ ಅಡ್ಡಿಯಿಲ್ಲ.

English summary
Music review of Kannada movie God Father. For the first time A R Rahman composed the music in Kannada. Upendra in the lead role and K Manju has produced this movie.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada