»   » ಅಂತೂ ಇಂತೂ ನನ್ ಲೈಫ್ ಅಲ್ಲಿ ಚಿತ್ರಕ್ಕೆ ಬಿಡುಗಡೆ ಭಾಗ್ಯ

ಅಂತೂ ಇಂತೂ ನನ್ ಲೈಫ್ ಅಲ್ಲಿ ಚಿತ್ರಕ್ಕೆ ಬಿಡುಗಡೆ ಭಾಗ್ಯ

Posted By:
Subscribe to Filmibeat Kannada

ಹೊಸಹೊಸ ಕನಸುಗಳನ್ನು ಇಟ್ಟುಕೊಂಡು ಬರುವ ಹೊಸಬರ ಚಿತ್ರಗಳ ಬಗ್ಗೆ ಭಾರಿ ನಿರೀಕ್ಷೆಗಳಿರುತ್ತವೆ. ಆದರೆ ಹೊಸಬರ ಚಿತ್ರಗಳು ತೆರೆ ಕಾಣಬೇಕಾದರೆ ನಾನಾ ಕಷ್ಟಗಳನ್ನು ಪಡಬೇಕಾಗುತ್ತದೆ. ಇದಕ್ಕೆ ಥಿಯೇಟರ್ ಸಮಸ್ಯೆ, ಚಿತ್ರೋದ್ಯಮದ ಸಹಕಾರ ಕೊರತೆಯಂತಹ ಸಮಸ್ಯೆಗಳು ಹೊಸಬರ ಉತ್ಸಾಹಕ್ಕೆ ತಣ್ಣೀರೆರಚುತ್ತವೆ.

ಎಂದೋ ಬಿಡುಗಡೆಯಾಗಿ ಇಷ್ಟೊತ್ತಿಗೆ ಸೆಂಚುರಿ ಬಾರಿಸಬೇಕಾಗಿದ್ದ ಚಿತ್ರ 'ನನ್ ಲೈಫ್ ಅಲ್ಲಿ'. ಆದರೆ ಈ ಚಿತ್ರಕ್ಕೆ ಥಿಯೇಟರ್ ಸಮಸ್ಯೆಯಂತಹ ನಾನಾ ಸಂಕಷ್ಟಗಳು ಎದುರಾದವು. ಈಗ ಅವೆಲ್ಲ ವಿಘ್ನಗಳನ್ನೂ ಜಯಿಸಿ ಇದೇ ಫೆಬ್ರವರಿ 21ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. [ಯೂಟ್ಯೂಬ್ ನಲ್ಲಿ ಭಾರಿ ಸೌಂಡ್ ಮಾಡಿದ]


ನಾಗತಿಹಳ್ಳಿ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ನನ್ನ ಲೈಫ್ ಅಲ್ಲಿ' ಚಿತ್ರಕ್ಕೆ ರಾಮ್ ದೀಪ್ ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರಕ್ಕೆ ಮನೋಜ್ ಗಲಗಲಿ ಸಂಭಾಷಣೆ ಇದೆ. ಮನೋಹರ್ ಜೋಶಿ ಛಾಯಾಗ್ರಹಣ, ಅಜನೀಶ್ ಲೊಕನಾಥ್ ಸಂಗೀತ ನಿರ್ದೇಶನ, ಸಂತೋಷ್ ರಾಧಾಕೃಷ್ಣ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ನಿರ್ದೇಶನ, ವಿದ್ಯಾಸಾಗರ್ ನೃತ್ಯ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಕಲಾ ನಿರ್ದೇಶನವಿದೆ.

ಬಹುತೇಕ ತಂತ್ರಜ್ಞರೇ ತುಂಬಿರುವ ಚಿತ್ರ ಸೋಷಿಯಲ್ ಮಾಧ್ಯಮದಲ್ಲಿ ಸಾಕಷ್ಟು ಪ್ರಚಾರ ಪಡೆದಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ಬಲ ಬೆನ್ನಿಗಿದ್ದರೂ ಅದ್ಯಾಕೋ ಏನೋ ಚಿತ್ರಕ್ಕೆ ಬಿಡುಗಡೆ ಮುಹೂರ್ತ ಕೂಡಿಬಂದಿರಲಿಲ್ಲ.

ಇನ್ನು ಚಿತ್ರದ ಪಾತ್ರವರ್ಗದಲ್ಲಿ ಅನೀಶ್, ಸಿಂಧೂ ಲೋಕನಾಥ್, ದಿಲೀಪ್ ರಾಜ್, ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್ ಮುಂತಾದವರಿದ್ದಾರೆ. ನಾಯಕರಾದ ಶ್ರೀನಗರ ಕಿಟ್ಟಿ ಹಾಗೂ ರಮೇಶ್ ಅರವಿಂದ್ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
Kannada colorful youth entertainer with a message 'Nan Life alli' schedule to release on Feb 21st all over Karnataka. Anish Tejeshwar and Sindhu Loknath are in the lead, written & directed by Ramdeep.
Please Wait while comments are loading...