»   » ಕಾಲೇಜು ಹುಡುಗರ ನೆಚ್ಚಿನ ಹಾಡು ಯಾವುದು ಅಂತೀರಾ?

ಕಾಲೇಜು ಹುಡುಗರ ನೆಚ್ಚಿನ ಹಾಡು ಯಾವುದು ಅಂತೀರಾ?

Posted By:
Subscribe to Filmibeat Kannada

''ಕಾಲೇಜು ಒಂದು ಜೈಲು...ಲೆಕ್ಚರರ್ ಬಿಡೋದು ರೈಲು...ಪ್ರಿನ್ಸಿ ಸ್ವಲ್ಪ ಪುಕ್ಲು...ಹೈಕ್ಳು ಫುಲ್ಲು ತಿಕ್ಲು...ಅಟೆಂಡೆನ್ಸ್ ಶಾರ್ಟೇಜ್ ಆದ್ರೆ ಅಟೆಂಡರ್ ನೇ ಅಡ್ಜೆಸ್ಟ್ ಮಾಡ್ಕೋ...''

ಇಂತಹ 'ರಿಯಲ್' ಲಿರಿಕ್ಸ್ ಬರೆದು ವಿದ್ಯಾರ್ಥಿಗಳ ಮನಗೆದ್ದಿರುವ ಈ ಹಾಡು 'ವಾಸ್ಕೊಡಿಗಾಮ' ಚಿತ್ರದ್ದು. ಕಾಲೇಜು ವಿದ್ಯಾರ್ಥಿಗಳ ಆಟ-ಹುಡುಗಾಟ-ಗೋಳಾಟ...ಎಲ್ಲಾ ಮಿಕ್ಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ಪಾಪ್ಯುಲರ್ ಆಗಿದೆ. [ಈ ತಿಂಗಳಾಂತ್ಯಕ್ಕೆ 'ವಾಸ್ಕೊಡಿಗಾಮ' ನಿಮ್ಮ ಮುಂದೆ]

vascodigama

ಆನ್ ಲೈನ್ ನಲ್ಲಿ ಡೌನ್ ಲೋಡ್ ಆಗುತ್ತಿರುವ ಕನ್ನಡ ಹಾಡುಗಳ ಪೈಕಿ, 'ವಾಸ್ಕೊಡಿಗಾಮ' ಚಿತ್ರದ ''ಸಾರಿಗಮಾಮ...'' ಹಾಡು ಮೂರನೇ ಸ್ಥಾನ ಪಡೆದಿದೆ. ಕಾಲರ್ ಟೋನ್ ಮತ್ತು ರಿಂಗ್ ಟೋನ್ ಪೈಕಿ ವಿಜಯ್ ಪ್ರಕಾಶ್ ಹಾಡಿರುವ, ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡು ವಿದ್ಯಾರ್ಥಿಗಳ ಹಾಟ್ ಫೇವರಿಟ್ ಆಗಿದೆ. ['ವಾಸ್ಕೋಡಿಗಾಮ' ಕಿಶೋರ್ ಜೊತೆ ಚಿಟ್ ಚಾಟ್]

ವಿದ್ಯಾರ್ಥಿಗಳ ಕಾಲೇಜ್ ಲೈಫ್ ಕುರಿತು ಹೆಣೆದಿರುವ ಕಥೆ 'ವಾಸ್ಕೊಡಿಗಾಮ'. ಲೆಕ್ಚರರ್ ಪಾತ್ರದಲ್ಲಿ ಕಿಶೋರ್ ಕಾಣಿಸಿಕೊಂಡಿರುವ ಚಿತ್ರ ಇದು. ಕಿಶೋರ್ ಜೊತೆ ಪಾರ್ವತಿ ನಾಯರ್ ನಾಯಕಿಯಾಗಿ ಮಿಂಚಿದ್ದಾರೆ. ಮಧುಚಂದ್ರ ಆಕ್ಷನ್ ಕಟ್ ಹೇಳಿದ್ದಾರೆ. ಈ ತಿಂಗಳಾಂತ್ಯದಲ್ಲಿ 'ವಾಸ್ಕೊಡಿಗಾಮ' ತೆರೆಗೆ ಬರಲಿದೆ.

English summary
Kannada Actor Kishore starrer 'Vascodigama' songs are popular among college students. Title song of the movie, ''Sa..re..ga..ma..ma..'' is the third highest downloaded kannada song so far. The movie is directed by Madhuchandra.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada