»   » ಅತುಲ್ಯಾ ಕೈಹಿಡಿದ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್

ಅತುಲ್ಯಾ ಕೈಹಿಡಿದ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್

Posted By:
Subscribe to Filmibeat Kannada
"ಏನೋ ಒಂಥರಾ ಈ ಪ್ರೀತಿಯು ಈ ರೀತಿಯು ಶುರುವಾದ ಆನಂತರ...ಮಂದಾಕಿನಿಯೇ... (ಹುಡುಗಾಟ).., ನಡೆದಾಡುವ ಕಾಮನಬಿಲ್ಲು (ಪರಿಚಯ),.. ಸಂಜು ಮತ್ತು ಗೀತಾದಂತಹ ಹಿಟ್ ಗೀತೆಗಳನ್ನು ಕೊಟ್ಟಂತಹ ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಅವರು ಅತುಲ್ಯಾ ಅವರನ್ನು ವರಿಸುವ ಮೂಲಕ ಗೃಹಸ್ಥಾಶ್ರಮ ಪ್ರವೇಶಿಸಿದ್ದಾರೆ.

ಜೆಸ್ಸಿ ಗಿಫ್ಟ್ ಅವರ ಬಾಳ ಸಂಗಾತಿಯಾಗಿರುವ ಅತುಲ್ಯಾ ಅವರು ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿನಿ. ಇವರಿಬ್ಬರ ಮದುವೆ ತಿರುವನಂತಪುರದಲ್ಲಿ ನೆರವೇರಿತು. ಜೆಸ್ಸಿ ಗಿಫ್ಟ್ ಅವರು ಕನ್ನಡದಲ್ಲೇಷ್ಟೇ ಅಲ್ಲದೆ ಮಲಯಾಳಂ ಹಾಗೂ ತಮಿಳು ಚಿತ್ರಗಳಿಗೂ ಸಂಗೀತ ನೀಡಿದ್ದಾರೆ. ಆದರೆ ಅವರು ಸಾಕಷ್ಟು ಯಶಸ್ಸು ಗಳಿಸಿದ್ದು ಮಾತ್ರ ಕನ್ನಡ ಚಿತ್ರಗಳಲ್ಲಿ.

ತಿರುವನಂತಪುರಂ ಮೂಲದವರಾದ ಜೆಸ್ಸಿ ಗಿಫ್ಟ್ 2011ರ ಬೆಂಗಳೂರು ಟೈಮ್ಸ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈಗ ಅವರು ಕೈಹಿಡಿದಿರುವ ಅತುಲ್ಯಾ ಅವರು ಭೌತಶಾಸ್ತ್ರದಲ್ಲಿ ಸಂಶೋಧನೆ ಮಾಡುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಅವರು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು.

ಜೆಸ್ಸಿ ಗಿಫ್ಟ್ ಕ್ರಿಶ್ಚಿಯನ್ ಧರ್ಮ ಪಾಲಿಸುತ್ತಿದ್ದರೂ ಅವರ ಮದುವೆ ಹಿಂದು ಸಂಪ್ರದಾಯದಂತೆ ನೆರವೇರಿತು. ಈ ಮದುವೆಗೆ ಕೇವಲ ಬೆರಳೆಣಿಕೆಯಷ್ಟು ಬಂಧುಮಿತ್ರರು ಮಾತ್ರ ಆಗಮಿಸಿದ್ದದ್ದು ವಿಶೇಷ.

ಕೇವಲ ಸಂಗೀತ ನಿರ್ದೇಶನವಷ್ಟೇ ಅಲ್ಲದೆ ಸುಮಧುರ ಹಾಡುಗಳೂ ಅವರ ಕಂಠಸಿರಿಯಿಂದ ಹೊರಹೊಮ್ಮಿವೆ. ಉದಾಹರಣೆಗೆ ಹೇಳಬೇಕು ಎಂದರೆ, ಮಂದಾಕಿನಿಯೆ ನೀ ಸಿಡಿಲಿನ ಕಿಡಿಯೇ...ಸ್ಟೈಲೋ ಸ್ಟೈಲೋ...ಕೊಡೆ ಕೊಡೆ ಕೊಬ್ರಿ ಮಿಠಾಯಿ (ಸುಂಟರಗಾಳಿ),..ಸೇರಿದಂತೆ ಹಲವಾರು ಚಿತ್ರಗೀತೆಗಳನ್ನು ಹಾಡಿದ್ದಾರೆ. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ. (ಒನ್ ಇಂಡಿಯಾ ಕನ್ನಡ)

English summary
Kannada, Malayalam and Tamil films noted music director and Kannada playback singer Jassie Gift tied the knot with Athulya, who hails from Thiruvananthapuram. He gives the mixture of melody and western beats in the Hudugaata (Kannada) film and three songs, "Eno Onthara", "Mandakiniye".
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada