Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಇದು ಪಬ್ಲಿಕ್ ಮ್ಯೂಸಿಕ್ ವಾಹಿನಿಯ ತಡೆರಹಿತ ಅಂತ್ಯಾಕ್ಷರಿ
ಆರು ಗಾಯಕರು, ನಿರಂತರ ಸಂಗೀತ ಸುಧೆ, ತಬಲಾ ವಾದನ, ವೀಣಾ ವಾದನ, ಭಾವಗೀತೆ, ಭಕ್ತಿಗೀತೆ, ವಚನ, ದಾಸರ, ಪದ, ಚಿತ್ರ ಗೀತೆ, ಷರೀಫರ ಗೀತೆ ಅಬ್ಬಬ್ಬಾ... ಸಾಲು ಮುಂದುವರಿಯುತ್ತಲೇ ಇದೆ.
ಇದೆಲ್ಲವೂ ಸಿಕ್ಕಿದ್ದು ಒಂದೇ ವೇದಿಕೆಯಲ್ಲಿ, ಒಂದೇ ಕಾರ್ಯಕ್ರಮದಲ್ಲಿ ಅನ್ನುವುದು ವಿಶೇಷ. ಸೆಪ್ಟೆಂಬರ್ 28 ಪಬ್ಲಿಕ್ ಟಿವಿಯ ಪಬ್ಲಿಕ್ ಮ್ಯೂಸಿಕ್ ಗೆ ಒಂದನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಬೆಳಿಗ್ಗೆ ಪಬ್ಲಿಕ್ ಟಿವಿ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಸಂತಸ ಹಂಚಿಕೊಂಡರೆ ರಾತ್ರಿ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 'ನಾನ್ ಸ್ಟಾಪ್ ಮ್ಯೂಸಿಕ್ ದರ್ಬಾರ್' ಸಂಗೀತ ಪ್ರಿಯರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿತ್ತು.[ಕಾರ್ಯಕ್ರಮದ ಚಿತ್ರಗಳನ್ನು ಕಣ್ಣು ತುಂಬಿಕೊಳ್ಳಿ]
ಮ್ಯೂಸಿಕ್ ದರ್ಬಾರ್ ನ ನಾನ್ ಸ್ಟಾಪ್ ಅಂತ್ಯಾಕ್ಷರಿ ಗಣೇಶ ಸ್ತುತಿಯೊಂದಿಗೆ ಆರಂಭವಾಯಿತು. ಅಂತ್ಯಾಕ್ಷರಿಯ ಮಹಿಮೆಯೇ ಹಾಗೆ ಕೊನೆಯಲ್ಲಿ ಬರುವ ಅಕ್ಷರಗಳು, ಅವುಗಳಿಗೆ ತಕ್ಕುದಾದ ಗೀತೆ ಸಂಗೀತ ಪ್ರಿಯರನ್ನು ರಂಜಿಸಿತು. ಅರ್ಚನಾ ಉಡುಪ, ಅನುರಾಧಾ ಭಟ್, ಮಂಗಳಾ, ಬದರಿಪ್ರಸಾದ್, ಚಿನ್ಮಯ ಆತ್ರೇಯ, ಮತ್ತು ವ್ಯಾಸರಾಜ್ ಧ್ವನಿಯಲ್ಲಿ ಮೂಡಿಬಂದ ಕಾರ್ಯಕ್ರಮಕ್ಕೆ ಖ್ಯಾತ ತಬಲಾ ವಾದಕ ವೇಣುಗೋಪಾಲ್ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದ ಸಂಭ್ರಮದಲ್ಲಿ ನೀವು ಒಂದು ರೌಂಡ್ ಹಾಕಿಕೊಂಡು ಬನ್ನಿ..
ಆರೋಗ್ಯ ಸಚಿವ ಯುಟಿ ಖಾದರ್, ಮೇಯರ್ ಬಿಎನ್ ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಲಹರಿ ವೇಲು, ಮನೋಹರ್ ನಾಯ್ಡು, ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಣ್ವ ಮಾರ್ಟ್ ಎಂಡಿ ಎನ್ ನಂಜುಂಡಯ್ಯ, ಶಾಸಕ ಮುನಿರತ್ನ, ವಿಧಾನಪರಿಷತ್ ಸದಸ್ಯ ಸರವಣ, ರೈಟ್ ಮೆನ್ ಸಂಸ್ಥೆಯ ಸಿಇಒ ಅರುಣ್ ಕುಮಾರ್ ಹಾಜರಿದ್ದರು.

ಗಣ್ಯರಿಂದ ಉದ್ಘಾಟನೆ
ಆರೋಗ್ಯ ಸಚಿವ ಯುಟಿ ಖಾದರ್, ಮೇಯರ್ ಬಿಎನ್ ಮಂಜುನಾಥ ರೆಡ್ಡಿ, ಉಪಮೇಯರ್ ಹೇಮಲತಾ, ಲಹರಿ ವೇಲು ಸೇರಿದಂತೆ ಗಣ್ಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸರಿಯಾಗಿ ಸಂಜೆ 7.15ಕ್ಕೆ ಕಾರ್ಯಕ್ರಮ ಆರಂಭವಾಯಿತು.

ವಾತಾಪಿ ಗಣಪತಿಂ ಭಜೆ
ಬದರಿಪ್ರಸಾದ್ ಧ್ವನಿಯಿಂದ ಹೊರಟ 'ವಾತಾಪಿ ಗಣಪತಿಂ ಭಜೆ' ಅಂತ್ಯಾಕ್ಷರಿ ಕಾರ್ಯಕ್ರಮಕ್ಕೆ ಆರಂಭ ಒದಗಿಸಿತು. ಅಂತ್ಯಾಕ್ಷರಿ ನಿಯಮದಂತೆ ಕೊನೆಯ ಅಕ್ಷರದಿಂದ ಮುಂದಿನ ಹಾಡು ಆರಂಭವಾಗಬೇಕು.

ಜೀವ ವೀಣೆ ಭಾವ..
ಅನುರಾಧಾ ಭಟ್ ಮತ್ತು ವ್ಯಾಸರಾಜ್ ಕಂಠಸಿರಿಯಲ್ಲಿ ಮೂಡಿಬಂದ 'ಜೀವ ವೀಣೆ ಭಾವದೊಲುಮೆಯ ಸಂಗೀತ' ಹಾಡು ಮನಸೂರೆಗೊಂಡಿತು. ಪ್ರೇಕ್ಷಕರು ನಿಧಾನವಾಗಿ ನೃತ್ಯ ಮಾಡಲು ಆರಂಭಿಸಿದರು.

ನೀ ಇಲ್ಲದೇ ನನಗೇನಿದೆ?..
ಅರ್ಚನಾ ಉಡುಪ ಅವರ ಧ್ವನಿಯಲ್ಲಿ ಮೂಡಿಬಂದ 'ನೀ ಇಲ್ಲದೇ ನನಗೇನಿದೇ' ಹಾಡು ಪ್ರೇಕ್ಷಕರನ್ನು ಭಾವದೊಡಲಲ್ಲಿ ತೇಲಿಸಿತು.

ಯಾರೇ ನೀನು ಚೆಲುವೆ?
ಚಿನ್ಮಯ್ ಅವರ ಧ್ವನಿಯಲ್ಲಿ ಮೂಡಿಬಂದ ಯಾರೇ ನೀನು ಚೆಲುವೆ ಚಿತ್ರಗೀತೆ ಪ್ರೇಕ್ಷಕರ ಉತ್ಸಾಹ ಉನ್ಮಾದವನ್ನು ಇಮ್ಮಡಿಯಾಗಿಸಿತು.

ಕರೆಮಾಡುವವರಿಗೂ ಪ್ರಶಸ್ತಿ
ನೂರಾರು ಹಾಡುಗಳ ಗುಚ್ಛದ ನಡುವೆ ಪಬ್ಲಿಕ್ ಮ್ಯೂಸಿಕ್ ತಂಡದವರು, ಕಾಲರ್ ಕಿಂಗ್, ಲೆಟರ್ ಕಿಂಗ್ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು. ವಾಹಿನಿಯೊಂದು ತನ್ನ ಪ್ರೇಕ್ಷಕರನ್ನು, ಕಾಳರ್ ಗಳನ್ನು ಗುರುತಿಸಿ ಪ್ರಶಸ್ತಿ ನೀಡಿದ್ದು ಇದೇ ಮೊದಲು.

ಭವ್ಯ ರಂಗಸಜ್ಜಿಕೆ
ಸಂಗೀತ ಕಾರ್ಯಕ್ರಮಕ್ಕೆ ಅದ್ಭುತವಾದ ವೇದಿಕೆ ನಿರ್ಮಾಣ ಮಾಡಲಾಗಿತ್ತು. ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಕಾರ್ಯಕ್ರಮದ ಮತ್ತೊಂದು ಹೈಲೈಟ್ಸ್.