Don't Miss!
- Automobiles
ಹ್ಯುಂಡೈ ಐ10 ನಿಯೋಸ್, ಟಾಟಾ ಟಿಯಾಗೊ, ಸ್ವಿಫ್ಟ್.. ಅಗ್ಗದ ಕಾರುಗಳು: ಖರೀದಿಗೆ ಯಾವುದು ಬೆಸ್ಟ್?
- News
ಎಚ್.ಡಿ ಕೋಟೆಯಲ್ಲಿ ಹುಲಿ ದಾಳಿಗೆ ಯುವಕ ಸಾವು: ಹೆಚ್ಚಿದ ಆತಂಕ
- Finance
ಹೊಸ ಕುಟುಂಬ ಸದಸ್ಯರ ಹೆಸರು ರೇಷನ್ ಕಾರ್ಡ್ಗೆ ಹೀಗೆ ಅಪ್ಡೇಟ್ ಮಾಡಿ
- Sports
ILT20: 38 ಎಸೆತಗಳಲ್ಲಿ ಸ್ಫೋಟಕ 86 ರನ್ ಗಳಿಸಿ ಮಿಂಚಿದ ಕೀರನ್ ಪೊಲಾರ್ಡ್
- Technology
ಸ್ಯಾಮ್ಸಂಗ್ನ ಈ ದೈತ್ಯ 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಮತ್ತೆ ಭಾರೀ ಇಳಿಕೆ!
- Lifestyle
Horoscope Today 23 Jan 2023: ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ರಾಜ್ಯೋತ್ಸವದ ವಿಶೇಷ: ಕೇಳಲೇಬೇಕಾದ ಎವರ್‌ಗ್ರೀನ್ 6 ಹಾಡುಗಳು
ಕನ್ನಡ ಭಾಷೆ, ನೆಲ-ಜಲ, ನಾಡು-ನುಡಿ ಕುರಿತು ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹಲವು ಹಾಡುಗಳು ಬಂದಿದೆ. ಆದರೆ ಕೆಲವು ಹಾಡುಗಳನ್ನ ಮಾತ್ರ ಪದೇ ಪದೇ ಕೇಳಬೇಕು ಎನಿಸುತ್ತೆ. ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಂತೂ ಒಂದೊಂದು ಹಾಡುಗಳನ್ನ ಎಷ್ಟೆಷ್ಟು ಬಾರಿ ಕೇಳ್ತಿವಿ ಎನ್ನುವುದರ ಬಗ್ಗೆ ಲೆಕ್ಕವೇ ಇರಲ್ಲ.
ಕನ್ನಡದ ಮೇಲೆ ಇರುವ ಕೆಲವು ಹಾಡುಗಳನ್ನು ಕೇಳುತ್ತಿದ್ದರೆ ಮೈ ರೋಮಾಂಚನವಾಗುತ್ತದೆ. ಈ ಹಾಡುಗಳಿಗೆ ನಮ್ಮ ಕನ್ನಡ ಅಭಿಮಾನವನ್ನು ಮತ್ತಷ್ಟು ಜಾಸ್ತಿ ಮಾಡುವ ಶಕ್ತಿ ಇದೆ. ಕನ್ನಡ ರಾಜ್ಯೋತ್ಸವ ಸೀಸನ್ ಬಂತಂದ್ರೆ, ಕರ್ನಾಟಕದ ಯಾವುದೇ ಮೂಲೆಯಲ್ಲೂ ಕೇಳಿದ್ರೆ ಈ ಹಾಡುಗಳಂತೂ ಸದ್ದು ಮಾಡ್ತಾನೆ ಇರುತ್ತೆ. ಮುಂದೆ ಓದಿ...

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು
'ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು' ಈ ಹಾಡು ಕನ್ನಡಿಗರ ಮನಸ್ಸಿನಲ್ಲಿ ಬೆರೆತು ಹೋಗಿದೆ. 'ಆಕಸ್ಮಿಕ' ಸಿನಿಮಾದ ಈ ಹಾಡಿಗೆ ಹಂಸಲೇಖ ಸಾಹಿತ್ಯ ಮತ್ತು ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಡಾ.ರಾಜ್ ಕನ್ನಡ ಬಾವುಟ ಹಿಡಿದು ಕುಣಿದಿದ್ದಾರೆ.
ಕನ್ನಡ
ರಾಜ್ಯೋತ್ಸವಕ್ಕೆ
ಶುಭಕೋರಿದ
ಸ್ಯಾಂಡಲ್
ವುಡ್
ತಾರೆಯರು

ಕನ್ನಡವೇ ನಮ್ಮಮ್ಮ.....
ಕನ್ನಡ ಅಂದಾಕ್ಷಣ ಫಟ್ ನೆನಪಾಗುವ ಎರಡನೇ ಹಾಡು ಡಾ ವಿಷ್ಣುವರ್ಧನ್ ನಟನೆಯ 'ಕನ್ನಡವೇ ನಮ್ಮಮ್ಮ'. ಮೋಜುಗಾರ ಸೊಗಸುಗಾರ ಚಿತ್ರದ ಈ ಹಾಡಿನಲ್ಲಿ ಕನ್ನಡವನ್ನು ತಾಯಿಗೆ ಹೋಲಿಸಲಾಗಿದೆ.

ಕರುನಾಡ ತಾಯಿ ಸದಾ ಚಿನ್ಮಯಿ
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನಾನು ನನ್ನ ಹೆಂಡ್ತಿ ಚಿತ್ರದಲ್ಲಿರುವ 'ಕರುನಾಡ ತಾಯಿ ಸದಾ ಚಿನ್ಮಯಿ' ಹಾಡನ್ನು ಮರೆಯುವಂತಿಲ್ಲ. ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಹಾಡು ಕೇಳಿದ ರೋಮಾಂಚನ ಆಗುತ್ತದೆ.
ಕನ್ನಡ
ಹಬ್ಬಕ್ಕೆ
ಶುಭಕೋರಿದ
ದರ್ಶನ್-ಯಶ್-ಧ್ರುವ
ಸರ್ಜಾ

ಕರ್ನಾಟಕದ ಇತಿಹಾಸದಲ್ಲಿ.....
ಕರ್ನಾಟಕದ ಇತಿಹಾಸ ಹಾಗೂ ವಿಜಯನಗರ ಸಾಮ್ರಾಜ್ಯದ ಕಥೆ ಹೇಳುವ ಹಾಡು ಕೃಷ್ಣ-ರುಕ್ಮಿಣಿ ಚಿತ್ರದ 'ಕರ್ನಾಟಕದ ಇತಿಹಾಸದಲ್ಲಿ.....'. ಎಸ್‌ಬಿ ಬಾಲಸುಬ್ರಹ್ಮಣ್ಯಂ ಅವರು ದನಿಯಲ್ಲಿ ಮೂಡಿಬಂದಿರುವ ಹಾಡನ್ನು ಕೇಳಲು ಮರೆಯದಿರಿ.

ಕನ್ನಡ ಮಣ್ಣನ್ನು ಮರಿಬೇಡ
'ಸೋಲಿಲ್ಲದ ಸರದಾರ' ಚಿತ್ರದ ಈ ಹಾಡಿನಲ್ಲಿ 'ಕನ್ನಡ ಮಣ್ಣನ್ನು ಮರಿಬೇಡ.. ಈ ಮಣ್ಣಿನ ಹೆಣ್ಣನ್ನು ಜರಿಬೇಡ..' ಎಂಬ ಅದ್ಭುತ ಮಾತುಗಳನ್ನು ಹೇಳಲಾಗಿದೆ.
Recommended Video

ಕನ್ನಡ ಹೊನ್ನುಡಿ ದೇವಿಯನ್ನು....
'ಒಂದು ಸಿನಿಮಾ ಕಥೆ' ಚಿತ್ರದ 'ಕನ್ನಡ ಹೊನ್ನುಡಿ ದೇವಿಯನ್ನು ನಾ ಪೂಜಿಸುವೆ ಅರಾಧಿಸುವೆ' ಹಾಡಿನಲ್ಲಿ ನಟ ಅನಂತ್ ನಾಗ್ ಕನ್ನಡದ ಮಹಾನ್ ಕವಿಗಳನ್ನು ನೆನೆದಿದ್ದಾರೆ.