For Quick Alerts
  ALLOW NOTIFICATIONS  
  For Daily Alerts

  ಹೊಸ ವರ್ಷದ ಹೊಸ್ತಿಲಲ್ಲಿ ಈ 'ಸೂತ್ರಧಾರಿ'ಯನ್ನು ಡ್ಯಾಶ್ ಅಂದ್ಕೊಳ್ಳಿ: ಇದನ್ನು ಹೇಳಿದ್ದು ಚಂದನ್ ಶೆಟ್ಟಿನೇ!

  |

  ಚಂದನ್ ಶೆಟ್ಟಿ ಸಾಂಗ್ ಅಂದ್ರೆ ಯುವಕರಿಗೆ ಎಲ್ಲಿಲ್ಲದ ಕ್ರೇಜ್. ಅದರಲ್ಲೂ ವರ್ಷದ ಕೊನೆಯಲ್ಲಿ ರಿಲೀಸ್ ಮಾಡುವ ಪಾರ್ಟಿ ಸಾಂಗ್ ಮಸ್ತ್ ಆಗಿರುತ್ತೆ. ಡಿಸೆಂಬರ್ 31ರ ರಾತ್ರಿ ಎಲ್ಲಾ ಪಾರ್ಟಿಗಳಲ್ಲಿ ಇವರದ್ದೇ ಹಾಡು ಸದ್ದು ಮಾಡುತ್ತಿರುತ್ತೆ.

  ಚಂದನ್ ಶೆಟ್ಟಿ ಮಸ್ತ್ ಗೆಟಪ್‌ನಲ್ಲಿ ಸಖತ್ತಾಗಿ ಹೆಜ್ಜೆ ಹಾಕೋ ಹಾಡು ಯೂಟ್ಯೂಬ್‌ನಲ್ಲಿ ಸಿಕ್ಕಾಪಟ್ಟೆ ಹಿಟ್ ಆಗುತ್ತೆ. ಸಂಗೀತನೂ ಇವರದ್ದೇ ಹಾಡು ಕೂಡ ಇವರದ್ದೇ. ಪಕ್ಕಾ ವೆಸ್ಟರ್ನ್ ಗಾಯನನ ಲುಕ್‌ನಲ್ಲಿ ಚಂದನ್ ಶೆಟ್ಟಿ ಮಿಂಚಿದ್ರೆ, ಆ ಸಾಂಗ್ ಹಿಟ್ ಅಂತಾನೇ.

  'ಸಲಗ'ನ ಅರಗಿಣಿ ಸಂಜನಾ ಆನಂದ್‌ಗೆ 'ಸೂತ್ರಧಾರಿ'ಯಾದ ಚಂದನ್ ಶೆಟ್ಟಿ !'ಸಲಗ'ನ ಅರಗಿಣಿ ಸಂಜನಾ ಆನಂದ್‌ಗೆ 'ಸೂತ್ರಧಾರಿ'ಯಾದ ಚಂದನ್ ಶೆಟ್ಟಿ !

  ಈ ವರ್ಷ ಚಂದನ್ ಶೆಟ್ಟಿ 'ಸೂತ್ರಧಾರಿ'ಯಾಗಿ ಅಖಾಡಕ್ಕೆ ಇಳಿದಿದ್ದಾರೆ. ಪಾರ್ಟಿ ಸಾಂಗ್ ಇಲ್ಲ ಅಂತ ನಿರಾಸೆ ಮಾಡಿಕೊಂಡಿವರಿಗೆ ಒಂದು ಸಾಂಗ್ ರೆಡಿಯಾಗಿದೆ. ಅದರಲ್ಲೂ ಹೊಸ ವರ್ಷದ ಹೊಸ್ತಿಲಲ್ಲಿ ನನ್ನನ್ನು ಡ್ಯಾಶ್ ಅಂದ್ಕೊಳ್ಳಿ ಅಂತ ಹೇಳಿ ಕಿಚ್ಚು ಹಚ್ಚಿದ್ದಾರೆ.

  ಹೊಸ ವರ್ಷಕ್ಕೆ ಕಿಕ್ ಕೊಟ್ಟ 'ಸೂತ್ರಧಾರ'

  ಹೊಸ ವರ್ಷಕ್ಕೆ ಕಿಕ್ ಕೊಟ್ಟ 'ಸೂತ್ರಧಾರ'

  ಚಂದನ್ ಶೆಟ್ಟಿ ಹಾಡುಗಳನ್ನು ಕೇಳದ ಯುವಕರಿಲ್ಲವೇನೋ? ಚಂದನ್ ಶೆಟ್ಟಿಯ ಸಾಂಗ್ಸ್ ಯುವಕರು ಹಾಗೂ ಯುವತಿಯರ ಮನಗೆದ್ದಿದೆ. ಇವರೊಂದಿಗೆ ಕನ್ನಡದ ಸ್ಟಾರ್ ನಟಿಯರೇ ಹೆಜ್ಜೆ ಹಾಕಿದ್ದಾರೆ. ಇಷ್ಟು ಹೊಸ ವರ್ಷಕ್ಕೆ ಪಾರ್ಟಿ ಸಾಂಗ್ ನೀಡುತ್ತಿದ್ದ ಚಂದನ್ ಶೆಟ್ಟಿ ಈ ವರ್ಷವೂ ಹೊಸ ಹಾಡನ್ನು ಕೊಟ್ಟಿದ್ದಾರೆ. ಆದರೆ, ಅದು ಅಲ್ಬಮ್ ಸಾಂಗ್ ಅಲ್ಲ. ತಮ್ಮದೇ ಸಿನಿಮಾದ ಹೊಸ ಹಾಡು. ಇದೇ ಮೊದಲ ಬಾರಿಗೆ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದು, 'ಸೂತ್ರಧಾರಿ' ಅನ್ನೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದ ಡ್ಯಾಶ್ ಸಾಂಗ್‌ ಈಗ ಕಿಕ್ ಕೊಡುತ್ತಿದೆ.

  ಕಿಕ್ ಕೊಡುತ್ತಿದೆ ಚಂದನ್ ಶೆಟ್ಟಿ ಡ್ಯಾಶ್ ಸಾಂಗ್

  ಕಿಕ್ ಕೊಡುತ್ತಿದೆ ಚಂದನ್ ಶೆಟ್ಟಿ ಡ್ಯಾಶ್ ಸಾಂಗ್

  ಕ್ಯಾಚಿ ಲಿರಿಕ್ಸ್.. ಹೆಜ್ಜೆ ಹಾಕ್ಬೇಕು ಅನ್ನೋ ಟ್ಯೂನ್ಸ್.. ಕಲರ್‌ಫುಲ್ ಸೆಟ್.. ಮಸ್ತ್ ಬ್ಯಾಕ್‌ಗ್ರೌಂಡ್. ಇವೆಲ್ಲವೂ ಚಂದನ್ ಶೆಟ್ಟಿ ಸಿನಿಮಾ ಹೈಲೈಟ್. ಈಗ ರಿಲೀಸ್ ಆಗಿರೋ 'ಸೂತ್ರಧಾರಿ' ಸಿನಿಮಾದ ಡ್ಯಾಶ್ ಸಾಂಗ್ ಕೂಡ ಸಾಹಿತ್ಯದಿಂದಲ್ಲೇ ಯುವಕರಿಗೆ ಕಿಕ್ ಕೊಡುತ್ತಿದೆ. "ನನ್ನ ಡ್ಯಾಶ್ ಮಾಡ್ಕೊಳ್ಳೆ.. ನನ್ನ ಡ್ಯಾಶ್ ಅಂದ್ಕೊಳ್ಳೆ" ಅನ್ನೋ ಸಾಲು ಸಂಗೀತ ಪ್ರಿಯರಿಗೆ ಸಖತ್ ಕಿಕ್ ಕೊಡುತ್ತಿದೆ. ಈ ಬಾರಿ ಚಂದನ್ ಶೆಟ್ಟಿ ಸಾಂಗ್‌ನಲ್ಲಿ ನಟಿ ಸಂಜನಾ ಆನಂದ್ ಗ್ಲಾಮರ್‌ ಗರ್ಲ್ ಆಗಿ ಕಾಣಿಸಿಕೊಂಡಿದ್ದಾರೆ.

  'ಸೂತ್ರಧಾರಿ' ಚಂದನ್ ಶೆಟ್ಟಿ

  'ಸೂತ್ರಧಾರಿ' ಚಂದನ್ ಶೆಟ್ಟಿ

  ಹೊಸ ವರ್ಷಕ್ಕೆ ಈ ಡ್ಯಾಶ್ ಸಾಂಗ್ ರಿಲೀಸ್ ಮಾಡಲೇಬೇಕು ಅಂತ ಚಂದನ್ ಅಂಡ್ ಟೀಮ್ ಮುಂದಾಗಿದ್ದರು. ಹೀಗಾಗಿ ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ 'ಸೂತ್ರಧಾರಿ'ಯ ಗ್ಲಾಮರ್ ಸಾಂಗ್ ಅನ್ನು ಕೆಲವು ದಿನಗಳಿಂದ ಶೂಟ್ ಮಾಡಲಾಗುತ್ತಿತ್ತು. ಅಂದ್ಕೊಂಡಂತೆ ಈ ಸಾಂಗ್‌ ಅನ್ನು ಗ್ರ್ಯಾಂಡ್ ಆಗಿ ರಿಲೀಸ್ ಮಾಡಿದ್ದಾರೆ. ಅಂದ್ಹಾಗೆ ಈ ಡ್ಯಾನ್ ಸಾಂಗ್, 'ಸೂತ್ರಧಾರಿ' ಸಿನಿಮಾದ ಇಂಟ್ರುಡಕ್ಷನ್ ಸಾಂಗ್. ಈ ಹಾಡನ್ನು ಸ್ವತ: ಚಂದನ್ ಶೆಟ್ಟಿ ಕಂಪೋಸ್ ಮಾಡಿ ಹಾಡಿದ್ದಾರೆ.

  ಸಂಜನಾ ಆನಂದ್ ಮಸ್ತ್ ಸ್ಟೆಪ್ಸ್!

  ಸಂಜನಾ ಆನಂದ್ ಮಸ್ತ್ ಸ್ಟೆಪ್ಸ್!

  ಚಂದನ್ ಶೆಟ್ಟಿ ಹೀರೊ ಆಗಿ ನಟಿಸುತ್ತಿರುವ ಮೊದಲ ಸಿನಿಮಾಗೆ ಸಂಜನಾ ಆನಂದ್ ಹೀರೊಯಿನ್. ಈ ಕಾರಣಕ್ಕೆ ಡ್ಯಾಶ್ ಸಾಂಗ್‌ನಲ್ಲಿ ಸಂಜನಾ ಆನಂದ್ ಗ್ಲಾಮರ್ ಗೊಂಬೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಹಾಡು ಕಿಕ್ ಕೊಡುತ್ತಿದ್ದು, ಹೊಸ ವರ್ಷದ ವೇಳೆಗೆ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಸಿನಿಮಾ ಚಿತ್ರೀಕರಣ ಶೇ.90ರಷ್ಟು ಮುಗಿದಿದ್ದು, ಶೀಘ್ರದಲ್ಲಿಯೇ ರಿಲೀಸ್ ಆಗಲಿದೆ.

  English summary
  Kannada Rapper Chandan Shetty Starrer Suthradaari Movie Dash Song Released,Know More.
  Tuesday, December 27, 2022, 14:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X