twitter
    For Quick Alerts
    ALLOW NOTIFICATIONS  
    For Daily Alerts

    ಕಾಂತಾರ ಹಾಡು ಕಾಪಿ ವಿವಾದ: 'ವರಾಹ ರೂಪಂ' ಹಾಡು ಡಿಲಿಟ್!

    |
    Kantara movies Varaha Roopam song has been deleted from Hombale films youtube channel

    ಕಾಂತಾರ ಸದ್ಯ ಉತ್ತಮ ಪ್ರದರ್ಶನ ಕಾಣುತ್ತಿದ್ದು ಕನ್ನಡ ಚಲನಚಿತ್ರರಂಗದ ನೂತನ ಇಂಡಸ್ಟ್ರಿ ಹಿಟ್ ಆಗುವತ್ತ ಹೆಜ್ಜೆ ಇಟ್ಟಿದೆ. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಹಿಂದಿ ಭಾಷೆಯ ಸಿನಿ ಪ್ರೇಕ್ಷಕರಿಂದಲೂ ಮೆಚ್ಚುಗೆ ಗಳಿಸಿರುವ ಕಾಂತಾರ ಚಿತ್ರ ಪುಷ್ಪ ಹಾಗೂ ಕೆಜಿಎಫ್ ಚಾಪ್ಟರ್ 1 ಚಿತ್ರಗಳ ಕಲೆಕ್ಷನ್ ದಾಖಲೆಯನ್ನು ಹಿಂದಿಕ್ಕಿ ಅಬ್ಬರಿಸುತ್ತಿದೆ.

    ಹೀಗೆ ಯಾವ ಅಡೆತಡೆಯೂ ಇಲ್ಲದೇ ಅಬ್ಬರಿಸುತ್ತಿದ್ದ ಕಾಂತಾರ ಚಿತ್ರಕ್ಕೆ ತೈಕ್ಕುಡಂ ಬ್ರಿಡ್ಜ್ ಎಂಬ ಬ್ಯಾಂಡ್ ಕಂಪನಿ ನಮ್ಮ ಹಾಡನ್ನು ಕಾಂತಾರ ಚಿತ್ರದಲ್ಲಿ ಕಾಪಿ ಮಾಡಲಾಗಿದೆ ಎಂದು ಕೇಸನ್ನು ದಾಖಲಿಸಿತ್ತು. ಪರಿಣಾಮವಾಗಿ ಕೇರಳದ ಸ್ಥಳೀಯ ನ್ಯಾಯಾಲಯ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಪ್ರಸಾರ ಮಾಡುವಂತಿಲ್ಲ ಎಂದು ನೋಟಿಸ್ ನೀಡಿತ್ತು.

    ನವರಸಮ್ ಎಂಬ ಆಲ್ಬಂ ಹಾಡಿನ ಟ್ಯೂನ್ ಅನ್ನು ಕಾಂತಾರ ಚಿತ್ರದ ವರಾಹ ರೂಪಂ ಹಾಡಿನಲ್ಲಿ ಕಾಪಿ ಮಾಡಲಾಗಿದೆ ಎಂದು ತೈಕ್ಕುಡಂ ಬ್ರಿಡ್ಜ್ ಹಾಗೂ ಕಪ್ಪ ಟಿವಿ ದೂರನ್ನು ನೀಡಿದ್ದವು. ಇಷ್ಟೆಲ್ಲಾ ಆದರೂ ಹೊಂಬಾಳೆ ಫಿಲ್ಮ್ಸ್ ಈ ವರಾಹ ರೂಪಂ ಹಾಡನ್ನು ತೆಗೆದು ಹಾಕಿರಲಿಲ್ಲ, ಆದರೆ ಇದೀಗ ನಿನ್ನೆಯಿಂದ ( ನವೆಂಬರ್ 11 ) ವರಾಹ ರೂಪಂ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ಕಾಣೆಯಾಗಿದೆ. ಇನ್ನು ಮಾತೃಭೂಮಿ ಕಪ್ಪ ಟಿವಿ ಚಾನೆಲ್ ಮಾಡಿದ ಕಾಪಿ ರೈಟ್ ಕ್ಲೈಮ್ ಕಾರಣದಿಂದ ಹಾಡನ್ನು ತೆಗೆದು ಹಾಕಲಾಗಿದೆ ಎಂದು ಯುಟ್ಯೂಬ್ ತೋರಿಸುತ್ತಿದೆ.

    ಯುಟ್ಯೂಬ್‌ನಿಂದ ಮಾತ್ರ ಹಾಡು ಮಾಯ

    ಯುಟ್ಯೂಬ್‌ನಿಂದ ಮಾತ್ರ ಹಾಡು ಮಾಯ

    ಇನ್ನು ವರಾಹ ರೂಪಂ ಹಾಡು ಯುಟ್ಯೂಬ್‌ನಿಂದ ಮಾತ್ರ ಡಿಲಿಟ್ ಆಗಿದೆ. ಇನ್ನುಳಿದಂತೆ ಆಡಿಯೊ ಅಪ್ಲಿಕೇಶನ್‌ಗಳಾದ ಸ್ಪಾಟಿಫೈ, ಅಮೆಜಾನ್ ಮ್ಯೂಸಿಕ್, ವಿಂಕ್ ಮ್ಯೂಸಿಕ್, ಜಿಯೊ ಸಾವ್ನ್‌ನಲ್ಲಿ ವರಾಹ ರೂಪಂ ಹಾಡು ಸದ್ಯಕ್ಕೆ ಲಭ್ಯವಿದೆ. ಅಷ್ಟೇ ಅಲ್ಲದೇ ಚಿತ್ರಮಂದಿರಗಳಲ್ಲಿಯೂ ಚಿತ್ರದಲ್ಲಿ ಹಾಡನ್ನು ಪ್ರಸಾರ ಮಾಡಲಾಗುತ್ತಿದೆ. ಈ ಮೂಲಕ ಯುಟ್ಯೂಬ್‌ನಲ್ಲಿ ಹುಡುಕಿ ಹಾಡು ಸಿಗದಿದ್ದವರು ಈ ಅಪ್ಲಿಕೇಶನ್‌ಗಳಲ್ಲಿ ಹಾಡನ್ನು ಕೇಳಬಹುದಾಗಿದೆ.

    ವಿವಾದದ ಬಗ್ಗೆ ಮಿಶ್ರ ಪ್ರತಿಕ್ರಿಯೆ

    ವಿವಾದದ ಬಗ್ಗೆ ಮಿಶ್ರ ಪ್ರತಿಕ್ರಿಯೆ

    ಸದ್ಯ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಿಂದ ವರಾಹ ರೂಪಂ ಹಾಡು ಕಾಣೆಯಾಗಿರುವುದರ ಕುರಿತು ಕಾಮೆಂಟ್ ಮಾಡುತ್ತಿರುವ ಕೆಲ ನೆಟ್ಟಿಗರು ಈ ಹಾಡಿಗೂ ನವರಸಮ್ ಹಾಡಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಕಾಂತಾರ ಚಿತ್ರದ ಬಗ್ಗೆ ಬ್ಯಾಟ್ ಬೀಸಿದ್ದಾರೆ. ಇನ್ನೂ ಕೆಲ ನೆಟ್ಟಿಗರು ಒಂದು ಹಾಡನ್ನು ಸಂಯೋಜಿಸುವುದು ಸುಲಭದ ಮಾತಲ್ಲ, ಹೀಗಾಗಿ ಹಾಡನ್ನು ಕಾಪಿ ಮಾಡುವವರ ವಿರುದ್ಧ ಸರಿಯಾದ ಕ್ರಮ ಜರುಗಿಸಬೇಕು, ಚಿತ್ರ ಚೆನ್ನಾಗಿದೆ ಎಂದು ಬೆಂಬಲ ನೀಡೋಣ, ಆದರೆ ವರಾಹ ರೂಪಂ ವಿಷಯದಲ್ಲಿ ನಮ್ಮ ಬೆಂಬಲ ತೈಕ್ಕುಡಂ ಬ್ರಿಡ್ಜ್ ಬ್ಯಾಂಡ್‌ಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    ತೈಕ್ಕುಡಂ ಬ್ರಿಡ್ಜ್ ಬೇಡಿಕೆ ಇಷ್ಟೇ

    ತೈಕ್ಕುಡಂ ಬ್ರಿಡ್ಜ್ ಬೇಡಿಕೆ ಇಷ್ಟೇ

    ವರಾಹ ರೂಪಂ ಹಾಡಿನ ಮೇಲೆ ಕೃತಿಚೌರ್ಯ ದೂರನ್ನು ದಾಖಲಿಸಿದ ನಂತರ ಮಾತನಾಡಿದ್ದ ತೈಕ್ಕುಡಂ ಬ್ಯಾಂಡ್‌ನ ಸದಸ್ಯ ವಿಯಾನ್ ಫೆರ್ನಾಂಡಿಸ್ ಹಣ ಪಡೆಯುವ ಉದ್ದೇಶದಿಂದ ನಾವು ಕೇಸ್ ಹಾಕಲಿಲ್ಲ, ಈಗಲೂ ಸಹ ಚಿತ್ರತಂಡ ನಮಗೆ ಕ್ರೆಡಿಟ್ ನೀಡಿ ಹಾಡನ್ನು ಉಪಯೋಗಿಸಿದರೆ ನಮ್ಮ ಯಾವುದೇ ಅಭ್ಯಂತರವೂ ಇಲ್ಲ, ಈಗ ಹೊಂಬಾಳೆ ಫಿಲ್ಮ್ಸ್ ಯಾವ ನಡೆ ಇಡುತ್ತೆ ಎಂಬುದು ಮುಖ್ಯ ಎಂದು ಹೇಳಿಕೆ ನೀಡಿದ್ದರು. ಈ ಮೂಲಕ ತಮ್ಮ ಸಂಸ್ಥೆ ಹಣಕ್ಕಾಗಿ ಕೇಸ್ ದಾಖಲಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

    English summary
    Kantara movie's Varaha Roopam song has been deleted from Hombale films youtube channel
    Saturday, November 12, 2022, 12:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X