For Quick Alerts
  ALLOW NOTIFICATIONS  
  For Daily Alerts

  ಕೋಲೆ ಬಸವನಿಗೂ ಖರಾಬು ಗುಂಗು: ಧ್ರುವ ಸರ್ಜಾ ಖುಷ್

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಬಿಡುಗಡೆಗಾಗಿ ಸ್ಯಾಂಡಲ್‌ವುಡ್ ಅಭಿಮಾನಿಗಳು ಕಾದು ಕುಂತಿದ್ದಾರೆ. ಡಿಸೆಂಬರ್ ಅಂತ್ಯಕ್ಕೆ ಎಂದು ಹೇಳಲಾಗಿತ್ತಾದರೂ ಜನವರಿಲ್ಲಿ ಪಕ್ಕಾ ಪೊಗರು ಥಿಯೇಟರ್‌ಗೆ ಬರುತ್ತದೆ ಎನ್ನಲಾಗಿದೆ.

  ಸಿನಿಮಾಗೂ ಮುಂಚೆ ಪೊಗರು ಚಿತ್ರದ ಖರಾಬು ಹಾಡು ಬಹುದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ನಿರೀಕ್ಷೆಗೂ ಮೀರಿ ಸಕ್ಸಸ್ ಕಂಡಿರುವ ಈ ಹಾಡು ಯ್ಯೂಟ್ಯೂಬ್‌ನಲ್ಲಿ 175 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.

  ಕ್ರಿಸ್ಮಸ್ ಗೂ ಇಲ್ಲ ಧ್ರುವ ಸರ್ಜಾ 'ಪೊಗರು'; ಯಾವಾಗ ರಿಲೀಸ್ ಆ್ಯಕ್ಷನ್ ಪ್ರಿನ್ಸ್ ಸಿನಿಮಾ?ಕ್ರಿಸ್ಮಸ್ ಗೂ ಇಲ್ಲ ಧ್ರುವ ಸರ್ಜಾ 'ಪೊಗರು'; ಯಾವಾಗ ರಿಲೀಸ್ ಆ್ಯಕ್ಷನ್ ಪ್ರಿನ್ಸ್ ಸಿನಿಮಾ?

  ಸಣ್ಣ ಮಕ್ಕಳ ಬಾಯಲ್ಲೂ ಖರಾಬು ಹಾಡು ಗುನುಗುನುತ್ತಿದೆ. ಯುವಕರ ಪಾಲಿಗೂ ಫೆವರೀಟ್ ಆಗಿರುವ ಈ ಹಾಡಿಗೆ ಕೋಲೆ ಬಸವ ಸಹ ಫಿದಾ ಆಗಿದ್ದು, ನಾದಸ್ವರ ಮೂಲಕ ಖರಾಬು ಟ್ಯೂನ್ ಹಾಕಿದ್ದಾನೆ.

  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖುದ್ದು ಧ್ರುವ ಸರ್ಜಾ ಈ ವಿಡಿಯೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

  ನಂದಕಿಶೋರ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ, ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು ಪ್ರಮುಖ ಖಳನಾಯಕನಾಗಿ ಕಾಣಿಸಿಕೊಂಡಿದ್ದಾರೆ.

  ಧೃವ ಸರ್ಜಾ ಸಿನಿಮಾಕ್ಕೆ ತಮಿಳಿನಲ್ಲೂ ಭಾರಿ ಡಿಮ್ಯಾಂಡ್ಧೃವ ಸರ್ಜಾ ಸಿನಿಮಾಕ್ಕೆ ತಮಿಳಿನಲ್ಲೂ ಭಾರಿ ಡಿಮ್ಯಾಂಡ್

  ಇನ್ನುಳಿದಂತೆ ಜನವರಿ ತಿಂಗಳಲ್ಲಿ ಪೊಗರು ಸಿನಿಮಾ ಬಿಡುಗಡೆ ಮಾಡಲು ಎಲ್ಲ ಸಿದ್ಧತೆ ನಡೆದಿದೆಯಂತೆ. ಸದ್ಯ ಖರಾಬು ಹಾಡು ಹಾಗೂ ಡೈಲಾಗ್ ಟೀಸರ್ ಮೂಲಕ ಭರ್ಜರಿ ಸದ್ದು ಮಾಡ್ತಿರುವ ಚಿತ್ರ ಆದಷ್ಟೂ ಬೇಗ ಪ್ರೇಕ್ಷಕರೆದುರು ಬರಲಿದೆ.

  English summary
  Karabu Song Craz: Kannada actor Dhruva sarja shared beautiful video in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X