For Quick Alerts
  ALLOW NOTIFICATIONS  
  For Daily Alerts

  ದುಬೈನ ಬುರ್ಜ್ ಖಲೀಫಾದಲ್ಲಿ ಕನ್ನಡದ ಹಾಡು ಹಾಡಿದ ಕಿಚ್ಚ ಸುದೀಪ್

  |

  ಪ್ರಪಂಚದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣಗೊಳ್ಳಲಿದೆ. ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಹಿನ್ನೆಲೆ ಕಿಚ್ಚ ಸುದೀಪ್ ಅವರ ಭಾವಚಿತ್ರವೂ ಪ್ರದರ್ಶನವಾಗಲಿದೆ.

  Recommended Video

  ಸುದೀಪ್ ಗೆ ವಿಷ್ಣುವರ್ಧನ್ ಕಂಡ್ರೆ ಎಷ್ಟು ಪ್ರೀತಿ ಅನ್ನೋದು ಮತ್ತೊಮ್ಮೆ ಸಾಭೀತಾಯ್ತು | Filmibeat Kannada

  ಈ ಮೂಲಕ ಪ್ರಪಂಚದ ಅತಿ ದೊಡ್ಡ ಕಟ್ಟಡದ ಮೇಲೆ ಕನ್ನಡ ನಟನೊಬ್ಬರ ಕಟೌಟ್ ಹಾರಾಡುವುದು ಸ್ಯಾಂಡಲ್‌ವುಡ್ ಪಾಲಿಗೆ ಹೆಮ್ಮೆಯ ವಿಚಾರ. ಈ ಸಂಭ್ರಮಕ್ಕೆ ಕೆಲವೇ ಗಂಟೆಗಳು ಮಾತ್ರ ಬಾಕಿ ಉಳಿದಿದೆ.

  ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಸುದೀಪ್ ಈ ಸಾಂಗ್ ಹಾಡ್ತಾರೆ ಯಾಕೆ.?

  ಈ ನಡುವೆ ದುಬೈನಲ್ಲಿ ಕನ್ನಡತನ ಮೆರೆದ ಕಿಚ್ಚ ಸುದೀಪ್ ಜೊತೆ ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಬುರ್ಜ್ ಖಲೀಫಾ ಮೇಲೆ ವಿಕ್ರಾಂತ್ ರೋಣ ಟೈಟಲ್ ಲೋಗೋ ಅನಾವರಣ ಹಿನ್ನೆಲೆ ಸ್ಥಳೀಯ ಮಾಧ್ಯಮಗಳ ಜೊತೆ ಸುದೀಪ್ ಅವರ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.

  ಈ ವೇಳೆ ದುಬೈನ ಸ್ಥಳೀಯ ಮಾಧ್ಯಮಗಳು ಸುದೀಪ್ ಅವರ ಸಂದರ್ಶನ ಮಾಡಿದೆ. ದುಬೈ ಪತ್ರಕರ್ತೆಯ ಸಂದರ್ಶನದ ವೇಳೆ ಡಾ ವಿಷ್ಣುವರ್ಧನ್ ನಟನೆಯ 'ಜಿಮ್ಮಿಗಲ್ಲು' ಚಿತ್ರದ 'ತುತ್ತು ಅನ್ನ ತಿನ್ನೋಕೆ' ಹಾಡನ್ನು ಹಾಡಿದ್ದಾರೆ. ಇದು ನನ್ನ ನೆಚ್ಚಿನ ನಟ ಹಾಡು ಎಂದು ಸಹ ಹೇಳಿದ್ದಾರೆ.

  ಕಿಚ್ಚ ಸುದೀಪ್‌ಗೆ ಶುಭಕೋರಿದ ಮಲಯಾಲಂ ಸೂಪರ್ ಸ್ಟಾರ್ ಮೋಹನ್ ಲಾಲ್ಕಿಚ್ಚ ಸುದೀಪ್‌ಗೆ ಶುಭಕೋರಿದ ಮಲಯಾಲಂ ಸೂಪರ್ ಸ್ಟಾರ್ ಮೋಹನ್ ಲಾಲ್

  ಅಂದ್ಹಾಗೆ, ಸುದೀಪ್ ಅವರು ಜಿಮ್ಮಿಗಲ್ಲು ಚಿತ್ರದ ಹಾಡು ಹಾಡಿರುವುದು ಇದೇ ಮೊದಲಲ್ಲ. ಅನೇಕ ವೇದಿಕೆಗಳಲ್ಲಿ, ಟಿವಿ ಕಾರ್ಯಕ್ರಮಗಳಲ್ಲಿ ಈ ಹಾಡಿ ನನ್ನ ನೆಚ್ಚಿನ ಸಾಂಗ್ ಎಂದಿದ್ದಾರೆ. ಇಂದು ಇನ್ನು ಒಂದು ಹೆಜ್ಜೆ ಮುಂದೆ ಸಾಗಿ ದುಬೈನಲ್ಲಿ ಅತ್ಯಂತ ಎತ್ತರದ ಕಟ್ಟಡದಲ್ಲಿ ನಿಂತು ಈ ಹಾಡು ಹಾಡಿರುವುದು ನಿಜಕ್ಕೂ ಖುಷಿ ತರುವ ವಿಚಾರ.

  English summary
  Kannada Actor Kiccha Sudeep sings a kannada song (tuttu anna tinnoke bogase neeru kudiyoke) at Dubai.
  Monday, February 1, 2021, 9:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X