»   » ಏಪ್ರಿಲ್ 16 ರಂದು 'ರನ್ನ'ನ ಚಿನ್ನದಂಥ ಹಾಡುಗಳು ಬಿಡುಗಡೆ

ಏಪ್ರಿಲ್ 16 ರಂದು 'ರನ್ನ'ನ ಚಿನ್ನದಂಥ ಹಾಡುಗಳು ಬಿಡುಗಡೆ

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ 'ರನ್ನ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇದೇ ವಾರ ನಡೆಯಲಿದೆ. ಹಾಗಂತ 'ರನ್ನ' ಚಿತ್ರತಂಡ ಹೇಳಿಕೊಂಡಿದೆ. ವಿದೇಶದಲ್ಲಿ ಶೂಟಿಂಗ್ ಕಂಪ್ಲೀಟ್ ಮಾಡಿರುವ 'ರನ್ನ' ಟೀಮ್ ಕೆಲ ದಿನಗಳ ಹಿಂದೆಯಷ್ಟೇ ಕುಂಬಳಕಾಯಿ ಹೊಡೆಯಿತು.

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ರನ್ನ' ಚಿತ್ರದ ಹಾಡುಗಳು ಏಪ್ರಿಲ್ 16 ರಂದು ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ. ಅದಕ್ಕಾಗಿ ಸಕಲ ತಯಾರಿಯಲ್ಲಿ ತೊಡಗಿದ್ದಾರೆ ನಿರ್ದೇಶಕ ನಂದಕಿಶೋರ್ ಮತ್ತು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ. [ಕಿಚ್ಚ ಸುದೀಪ್ ಗೆ ಟೆಂಪರೇಚರ್ ರೈಸ್ ಆದಾಗ.....]


ranna

ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ 'ರನ್ನ'ನ ಚಿನ್ನದಂಥ ಹಾಡುಗಳ ಝಲಕ್ ನ ನೀವೆಲ್ಲಾ ನೋಡಿದ್ದೀರಾ, ಕೇಳಿದ್ದೀರಾ. ಸುದೀಪ್ ಇಂಟ್ರೊಡಕ್ಷನ್ ಸಾಂಗ್ ''ಬಬ್ಬರ್ ಶೇರ್'' ಮತ್ತು ''ಸೀರೆಲಿ ಹುಡುಗೀರ ನೋಡಲೇಬಾರದು....'' ಹಾಡುಗಳು ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ಆಗಿವೆ.


ತೆಲುಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದ ರೀಮೇಕ್ ಆಗಿರುವ 'ರನ್ನ', ಯಾವುದೇ ಆಂಗಲ್ ನಿಂದಲೂ ಟಾಲಿವುಡ್ ಚಿತ್ರಕ್ಕಿಂತ ಗುಣಮಟ್ಟದಲ್ಲಿ ಕಮ್ಮಿಯಿಲ್ಲ. ಅದಕ್ಕೆ ಈಗಾಗಲೇ ರಿಲೀಸ್ ಆಗಿರುವ ಹಾಡುಗಳ ಝಲಕ್ ಸಾಕ್ಷಿ. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


ಆಡಿಯೋ ರಿಲೀಸ್ ಗೂ ಮುನ್ನ ಎರಡು ಸ್ಯಾಂಪಲ್ ಗಳನ್ನ ನೀಡಿರುವ 'ರನ್ನ' ತಂಡ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇದೇ ಪ್ರತಿಕ್ರಿಯೆ 'ರನ್ನ' ಆಡಿಯೋಗೂ ಸಿಕ್ಕರೆ, ಸಿನಿಮಾ ಅರ್ಧ ಗೆದ್ದ ಹಾಗೆ. ಸದ್ಯಕ್ಕೆ ಆಡಿಯೋ ರಿಲೀಸ್ ದಿನಾಂಕ ಮಾತ್ರ ನಿಗದಿಯಾಗಿದ್ದು, ಚಿತ್ರ ಬಿಡುಗಡೆ ಇನ್ನೂ ಫೈನಲ್ ಆಗಿಲ್ಲ. (ಏಜೆನ್ಸೀಸ್)

English summary
Kiccha Sudeep starrer 'Ranna' movie audio release is scheduled on April 16th. The songs of ‘Ranna’ has been composed by V.Harikrishna and already ‘Babbar Sher’ and ‘Seereli Hudugira...’ songs have become popular.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada