For Quick Alerts
  ALLOW NOTIFICATIONS  
  For Daily Alerts

  ಬೇರೆ ಭಾಷೆಗಳಲ್ಲಿ ಕ್ರಾಂತಿ 'ಧರಣಿ' ಹಾಡಿನ ಶೀರ್ಷಿಕೆ ಏನು, ಅಲ್ಲಿ ಸಾಹಿತಿಗಳು ಹಾಗೂ ಗಾಯಕರು ಯಾರು?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಮೊದಲ ಹಾಡು 'ಧರಣಿ ಮಂಡಲ ಮಧ್ಯದಲಿ' ಇಂದು ( ಡಿಸೆಂಬರ್ 10 ) ಮೈಸೂರಿನಲ್ಲಿ ಬಿಡುಗಡೆಗೊಂಡಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸ್ವತಃ ನಿರೂಪಣೆ ಮಾಡಿದ್ದು, ದರ್ಶನ್ ನೆಚ್ಚಿನ ಸೆಲೆಬ್ರಿಟಿಗಳಾದ ಅಭಿಮಾನಿಗಳೇ ಈ ಹಾಡನ್ನು ರಿಲೀಸ್ ಮಾಡಿದ್ದಾರೆ. ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದ್ದ ಈ ಹಾಡಿಗಾಗಿ ಅಭಿಮಾನಿಗಳು ಹಾಗೂ ಸಿನಿ ರಸಿಕರು ಕಾದು ಕುಳಿತಿದ್ದರು. ಈಗ ಈ ಹಾಡು ಕೇಳಲು ಲಭ್ಯವಿದ್ದು, ಎಲ್ಲೆಡೆ ಸದ್ದು ಮಾಡಲು ಸಿದ್ಧವಾಗಿದೆ.

  ಇನ್ನು ಕ್ರಾಂತಿ ಚಿತ್ರವನ್ನು ಕೇವಲ ಕನ್ನಡದಲ್ಲಿ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುತ್ತಿರುವುದರಿಂದ ಧರಣಿ ಹಾಡನ್ನೂ ಸಹ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಸಹ ಬಿಡುಗಡೆಗೊಳಿಸಲಾಗಿದೆ. ಕನ್ನಡದಲ್ಲಿ ಧರಣಿ ಹಾಡಿಗೆ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯವನ್ನು ಬರೆದಿದ್ದರೆ, ಪಂಚಮ್ ಜೀವ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ ಹಾಗೂ ಪೂಜಾ ರಾವ್ ಹೀಗೆ ಒಂಬತ್ತು ಗಾಯಕ ಹಾಗೂ ಗಾಯಕಿಯರು ಹಾಡಿಗೆ ದನಿ ನೀಡಿದ್ದಾರೆ.

  ಹೀಗೆ ಕನ್ನಡದಲ್ಲಿ ಧರಣಿ ಎಂಬ ಶೀರ್ಷಿಕೆಯಲ್ಲಿ ಬಿಡುಗಡೆಯಾಗಿರುವ ಹಾಡು ಇತರೆ ಭಾಷೆಗಳಲ್ಲಿ ಯಾವ ಶೀರ್ಷಿಕೆ ಅಡಿಯಲ್ಲಿ ಬಿಡುಗಡೆಯಾಗಲಿದೆ ಹಾಗೂ ಅಲ್ಲಿ ಯಾರು ಹಾಡಿಗೆ ಸಾಹಿತ್ಯ ಬರೆದಿದ್ದಾರೆ ಮತ್ರು ದನಿ ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

  ಮಲಯಾಳಂ

  ಮಲಯಾಳಂ

  ಕ್ರಾಂತಿ ಚಿತ್ರದ ಥೀಮ್ ಹಾಡು ಮಲಯಾಳಂನಲ್ಲಿಯೂ ಧರಣಿ ಎಂಬ ಪದದಿಂದಲೇ ಆರಂಭವಾಗಲಿದೆ. ಹೀಗಾಗಿ ಅಲ್ಲಿಯೂ ಸಹ ಧರಣಿ ಥೀಮ್ ಹಾಡು ಎಂದೇ ಶೀರ್ಷಿಕೆ ಇಡಲಾಗಿದ್ದು, ಸುದಂಶು ಎಂಬುವವರು ಹಾಡಿಗೆ ಸಾಹಿತ್ಯ ಬರೆದಿದ್ದರೆ, ಅಜಯ್ ವಾರಿಯರ್, ರೆಂಜಿತ್ ಉನ್ನಿ, ಜಿತಿನ್ ರಾಜ್, ಶ್ರೀರಾಜ್ ಶಹಜಾನ್, ಕಮಲಾ ಜಾ, ಐಶ್ವರ್ಯಾ ಹಾಗೂ ಫೆಜಿ ದೇವು ಎಂಬವವರು ಹಾಡಿಗೆ ದನಿ ನೀಡಿದ್ದಾರೆ.

  ತಮಿಳು

  ತಮಿಳು

  ತಮಿಳಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಉಳಗಿಲ್' ಎಂಬ ಶೀರ್ಷಿಕೆ ಇಡಲಾಗಿದೆ. ಅಲ್ಲಿ ಈ ಹಾಡಿಗೆ ಮಧುರಕವಿ ಎಂಬುವವರು ಸಾಹಿತ್ಯ ಗೀಚಿದ್ದು, ಬಾಲಾಜಿ ಶ್ರೀ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.

  ತೆಲುಗು

  ತೆಲುಗು

  ತೆಲುಗಿನಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಮಟ್ಟಿ' ಎಂಬ ಶೀರ್ಷಿಕೆ ಇಡಲಾಗಿದೆ, ಈ ಹಾಡಿಗೆ ಭಾಸ್ಕರ್ ಭಾಟ್ಲಾ ಸಾಹಿತ್ಯ ಬರೆದಿದ್ದು, ಹೇಮಂತ್, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.

  ಹಿಂದಿ

  ಹಿಂದಿ

  ಹಿಂದಿಯಲ್ಲಿ ಕ್ರಾಂತಿ ಚಿತ್ರದ ಥೀಮ್ ಹಾಡಿಗೆ 'ಧರಣಿ' ಎಂದೇ ಹೆಸರನ್ನು ಇಡಲಾಗಿದ್ದು, ಈ ಹಾಡಿಗೆ ದೀಪಕ್ ವಿ ಭಾರ್ತಿ ಸಾಹಿತ್ಯ ಬರೆದಿದ್ದಾರೆ ಹಾಗೂ ಪಂಚಮ್ ಜೀವಾ, ಸಂತೋಷ್ ವೆಂಕಿ, ಅನಿರುದ್ಧಾ ಶಾಸ್ತ್ರಿ, ಮಧ್ವೇಶ್ ಭಾರದ್ವಾಜ್, ವಿಹಾನ್, ಕುಶಾಲಾ, ಲಕ್ಷ್ಮಿ ವಿಜಯ್, ಮೇಘನಾ ಕುಲಕರ್ಣಿ, ಪೂಜಾ ರಾವ್, ಅರ್ಚನಾ ಹಾಗೂ ಪ್ರಾರ್ಥನಾ ಹೀಗೆ ಒಟ್ಟು ಒಂಬತ್ತು ಗಾಯಕ - ಗಾಯಕಿಯರು ದನಿ ನೀಡಿದ್ದಾರೆ.

  English summary
  Kranti movie theme song: All language lyricists and singers details. Take a look
  Saturday, December 10, 2022, 18:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X