»   » ಅಜಯ್ -ಅಮೂಲ್ಯ ಕೃಷ್ಣ ರುಕ್ಕು ಆಡಿಯೋ ವಿಮರ್ಶೆ

ಅಜಯ್ -ಅಮೂಲ್ಯ ಕೃಷ್ಣ ರುಕ್ಕು ಆಡಿಯೋ ವಿಮರ್ಶೆ

By: ರಾಘವೇಂದ್ರ ಸಿ.ವಿ
Subscribe to Filmibeat Kannada

ಕೃಷ್ಣ ಅಲಿಯಾಸ್ ಅಜಯ್ ರಾವ್ ಮತ್ತು ಗೋಲ್ಡನ್ ಕ್ವೀನ್ ಅಮೂಲ್ಯ ಅಭಿನಯದ ಕೃಷ್ಣ ರುಕ್ಕು ಚಿತ್ರದ ಹಾಡುಗಳು ಬೆಂಗಳೂರಿನ ಸಿಟಡೆಲ್ ಹೋಟೆಲ್ ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಫಿಲ್ಮಿ ಬೀಟ್ ನಲ್ಲಿ ಈ ಚಿತ್ರದ ಹಾಡುಗಳ ಬಗ್ಗೆ ವಿಮರ್ಶೆ ಓದಿ ..

ಉದಯ್ ಮೆಹ್ತಾ ರವರ ನಿರ್ಮಾಣದಲ್ಲಿ, ಅನಿಲ್ ಕುಮಾರ್ ರವರ ನಿರ್ದೇಶನದಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಒಟ್ಟು 5 ವಿಭಿನ್ನ ಹಾಡುಗಳನ್ನು ವಿ . ಶ್ರೀಧರ್ ಸಂಭ್ರಮ್ ರವರು ಸಂಯೋಜಿಸಿದ್ದಾರೆ. ಆನಂದ್ ಆಡಿಯೋ ಮೂಲಕ ಹಾಡುಗಳು ಲೋಕಾರ್ಪಣೆಗೊಳ್ಳುತ್ತಿದೆ.

Krishna Rukku Kannada Film Audio review

1 - ಹೇಳಿಲ್ಲಾ ಯಾರಲ್ಲೂ ನಾನು

ಡಾ . ಜಯಂತ್ ಕಾಯ್ಕಿಣಿ ರವರು ರಚಿಸಿರುವ ಈ ಡುಯೆಟ್ ಹಾಡಿಗೆ ಸೋನು ನಿಗಮ್ ಮತ್ತು ಶ್ರೇಯಾ ಘೋಶಾಲ್ ದನಿ ಗೂಡಿಸಿದ್ದು ಕೆಲವು ಹಿಂದಿ ವಾಕ್ಯಗಳನ್ನು ಬಳಸಿ ಕವಾಲಿ ಶೈಲಿಯಲ್ಲಿ ಮೂಡಿಬಂದಿರುವ ಈ ಹಾಡು ಸಾಹಿತ್ಯ ಮತ್ತು ಸಂಗೀತದ ದೃಷ್ಟಿಯಲ್ಲಿ ಕೇಳುಗರ ಹೃದಯದಲ್ಲಿ ಮೊದಲ ಸ್ಥಾನ ಪಡೆಯುವುದರಲ್ಲಿ ಯಾವದೇ ಸಂಶಯ ಇಲ್ಲ.

2. ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ

ಇತ್ತೀಚಿನ ಬಹುಬೇಡಿಕೆಯ ಗಾಯಕರ ಲಿಸ್ಟ್ ನಲ್ಲಿ ಟಾಪ್ ನಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮತ್ತು ಉದಯೋನ್ಮುಖ ಗಾಯಕಿ ಶ್ವೇತ ಪ್ರಭು ಹಾಡಿರುವ ಈ ಹಾಡು ಚಿತ್ರದ ಒಂದು ಪೆಪ್ಪಿ ಸಾಂಗ್ ಆಗಿದ್ದು
ಆನಂದ್ ಪ್ರಿಯಾ ರವರ ಸಾಹಿತ್ಯವಿದೆ.

Krishna Rukku Kannada Film Audio review

3. ಸಾಕು ಸಾಕಿನ್ನು

ಕಾರ್ತಿಕ್ ಮತ್ತು ಅನುರಾಧ ಭಟ್ ಧ್ವನಿಯಲ್ಲಿ ಹೊರಬಂದಿರುವ ಈ ಮಾಧುರ್ಯ ಪ್ರಧಾನವಾದ ವಿರಹ ಗೀತೆಗೆ ನಿರ್ದೇಶಕ ಅನಿಲ್ ಕುಮಾರ್ ರವರೆ ಪದ ಪೋಣಿಸಿದ್ದಾರೆ .

4. ಸಿ ಫಾರ್ ಕವ್ವು

ಈ ಚಿತ್ರದ ಒಂದು ಫಾಸ್ಟ್ ಬೀಟ್ ಹಾಡು ಇದಾಗಿದ್ದು ಮೇಲ್ನೋಟಕ್ಕೆ ಯುವಕರನ್ನು ಗಮನದಲ್ಲಿ ಇಟ್ಟುಕ್ಕೊಂಡು ಈ ಹಾಡನ್ನು ಶ್ರೀಧರ್ ರವರು ಸಂಯೋಜಿಸಿರುವಂತಿದೆ ಅಲ್ಲದೆ ಈ ಹಾಡಿಗೆ ಖುದ್ದು ಅವರೇ ಸಾಹಿತ್ಯ ರಚಿಸಿರುವುದು ವಿಶೇಷವಾದ ಸಂಗತಿ.

Krishna Rukku Kannada Film Audio review

5. ಸಾಕುಸಾಕಿನ್ನು ( ಸೋಲೋ )

ನಾಯಕಿ ತನ್ನ ವಿರಹದ ವೇದನೆಯನ್ನು ಹೇಳಿಕೊಳ್ಳುವ ಅನುರಾಧ ಭಟ್ ಧ್ವನಿಯಲ್ಲಿ ಮೂಡಿಬಂದಿದ್ದು ಚಿತ್ರದಲ್ಲಿ ಎರಡು ಬಾರಿ ಕೇಳಸಿಗುತ್ತದೆ.

ಒಟ್ಟಾರೆ ಕೃಷ್ಣ ಮತ್ತು ರುಕ್ಕುಗೆ ವಿ . ಶ್ರೀಧರ್ ಸಂಭ್ರಮ್ ರವರು ಒಂದೊಳ್ಳೆ ಅಲ್ಬಮ್ ಕೊಟ್ಟಿದ್ದು ಕೇಳುಗರ ಹೃದಯದಲ್ಲಿ ಸ್ಥಾನ ಗಿಟ್ಟಿಸಲಿ ಎಂದು ನಾವು ಹಾರೈಸೋಣ. ನೀವು ಹಾಡುಗಳನ್ನು ಕೇಳಿ ಅಭಿಪ್ರಾಯ ಹಂಚಿಕೊಳ್ಳಿ...

English summary
Krishna Rukku Kannada Film audio released recently Sridhar V Sambhram is the music director of the film. The movie has Ajai Rao and Amoolya in the lead role. Here is the audio review.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada