For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಚಿತ್ರದ ವಸ್ತ್ರಾಪಹರಣದ ಹಾಡು ಬಿಡುಗಡೆ

  |
  Kurukshetra Kannada Movie: ಕುರುಕ್ಷೇತ್ರ' ಚಿತ್ರದ ವಸ್ತ್ರಾಪಹರಣದ ಹಾಡು ಬಿಡುಗಡೆ | FILMIBEAT KANNADA

  ಮಹಾಭಾರತದ ಮಹತ್ವದ ಸನ್ನಿವೇಶ ವಸ್ತ್ರಾಪಹರಣ. 'ಕುರುಕ್ಷೇತ್ರ' ಸಿನಿಮಾದ ಈ ಸನ್ನಿವೇಶದ ಹಾಡು ಬಿಡುಗಡೆಯಾಗಿದೆ.

  'ಕುರುಕ್ಷೇತ್ರ' ಸಿನಿಮಾದ ಮೂರನೇ ಹಾಡು ಇದಾಗಿದೆ. ಹಾಡಿನ ಮೂಲಕ ದ್ರೌಪದಿ ಪಾತ್ರದ ಸ್ನೇಹ ರಕ್ಷಣೆಗಾಗಿ ಶ್ರೀಕೃಷ್ಣನನ್ನು ಪ್ರಾರ್ಥನೆ ಮಾಡುತ್ತಾರೆ. ರವಿಚಂದ್ರನ್ ಶ್ರೀಕೃಷ್ಣನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಮಯೂರ, ಬಬ್ರುವಾಹನ ಚಿತ್ರದ ಬಗ್ಗೆ ದರ್ಶನ್ ಹೇಳಿದ ಮಾತಿದು

  ಈ ಹಾಡಿನ ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. 'ಎಲ್ಲಿರುವೇ ಹರಿಯೇ...' ಹಾಡಿಗೆ ಸದ್ಯ 1 ಲಕ್ಷಕ್ಕೂ ಹೆಚ್ಚು ಹಿಟ್ಸ್ ಸಿಕ್ಕಿದೆ.

  ಮೊದಲನೇ ಹಾಡು ದುರ್ಯೋಧನನ ಕುರಿತು, ಕೌರವನ ವ್ಯಕ್ತಿತ್ವವನ್ನ ವೈಭವಿಕರಿಸುವಂತಿತ್ತು. ಎರಡನೇ ಹಾಡು ದುರ್ಯೋಧನ ಮತ್ತು ಭಾನುಮತಿ ನಡುವಿನ ರೋಮ್ಯಾಂಟಿಕ್ ಗೀತೆಯಾಗಿತ್ತು. ಮೂರನೇ ಹಾಡು ದ್ರೌಪದಿ ವಸ್ತ್ರಾಪಹರಣದ ವೇಳೆ ಶ್ರೀಕೃಷ್ಣನಿಗಾಗಿ ದ್ರೌಪದಿ ಮನವಿ ಮಾಡುವ ಶೋಕ ಗೀತೆಯಾಗಿದೆ.

  ದ್ರೌಪದಿ ಪಾತ್ರದಲ್ಲಿ ಬಹುಭಾಷಾ ನಟಿ ಸ್ನೇಹಾ ನಟಿಸಿದ್ದು, ಪಾಂಡವರಾಗಿ ಶಶಿಕುಮಾರ್ (ಧರ್ಮರಾಯ), ಸೋನು ಸೂದ್ (ಅರ್ಜುನ), ಡ್ಯಾನಿಶ್ ಅಖ್ತರ್ (ಭೀಮ) ನಕುಲ ಮತ್ತು ಸಹದೇವನ ಪಾತ್ರದಲ್ಲಿ ಚಂದನ್ ಕುಮಾರ್ ಮತ್ತು ಯಶಸ್ ಸೂರ್ಯ ನಟಿಸಿದ್ದಾರೆ.

  ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಬಂಡವಾಳ ಹಾಕಿದ್ದಾರೆ. ಆಗಸ್ಟ್ 2 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ

  ಹಾಡು ನೋಡಲು ಇಲ್ಲಿ ಕ್ಲಿಕ್ ಮಾಡಿ

  English summary
  Challenging star Darshan 'Kurukshetra' kannada movie yelliruve hariye song out. The movie will be releasing on August 2nd.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X