twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ : ಕನ್ನಡ ಚಿತ್ರರಂಗದಲ್ಲಿ ವಿಶ್ವಮಾನವ ಕುವೆಂಪು ಸಾಹಿತ್ಯ ಡಿಂಡಿಮ

    By Naveen
    |

    ಇಂದು ಕುವೆಂಪು ಅವರ ಜನ್ಮದಿನ. ಕುವೆಂಪು ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾನ್ ವ್ಯಕ್ತಿ. ಮಲೆನಾಡ ಮಣ್ಣಿನ ಮಗನಾಗಿ ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಶ್ರೇಷ್ಟ ಕವಿ.

    ಕನ್ನಡ ಚಿತ್ರರಂಗದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಅನೇಕ ಹಾಡುಗಳನ್ನು ಬಳಸಿಕೊಳ್ಳಲಾಗಿದೆ. ಸಾಹಿತ್ಯ ಮತ್ತು ಸಿನಿಮಾ ಒಂದೇ ನಾಣ್ಯದ ಎರಡು ಮುಖಗಳು ಎನ್ನುವ ಹಾಗೆ ಕುವೆಂಪು ಹಾಡುಗಳು ಕನ್ನಡ ಚಿತ್ರರಂಗದಲ್ಲಿ ಇವೆ. ಒಂದು ರೀತಿಯಲ್ಲಿ ಸಿನಿಮಾ ಹಾಡುಗಳಲ್ಲಿ ಕುವೆಂಪು ಸಾಹಿತ್ಯವನ್ನು ಬಳಸಿಕೊಂಡಿರುವುದು ಅನೇಕರಿಗೆ ಆ ಹಾಡುಗಳು ತಲುಪುವುದಕ್ಕೆ ಸಹಾಯವಾಗಿದೆ.

    ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ನಮನ

    ಸಾಹಿತ್ಯದ ಬಗ್ಗೆ ಜಾಸ್ತಿ ಒಲವು ಇಲ್ಲದ ವ್ಯಕ್ತಿಗಳನ್ನು ಮುಟ್ಟುವುದಕ್ಕೆ ಸಿನಿಮಾಗಳ ಈ ಹಾಡುಗಳು ಸೇತುವೆ ಆಗಿದೆ. ಪ್ರಮುಖವಾಗಿ ಕುವೆಂಪು ಅವರ 'ನೇಗಿಲು ಹಿಡಿದು...', 'ನಾ ನಿನಗೆ ನೀ ನನಗೆ..', 'ಬಾರಿಸು ಕನ್ನಡ ಡಿಂಡಿಮ..' ಸೇರಿದಂತೆ ಸಾಕಷ್ಟು ಹಾಡುಗಳು ಸಿನಿಮಾ ಹಾಡುಗಳಲ್ಲಿ ಬೆರೆತು ಹೋಗಿದೆ. ಅಂದಹಾಗೆ, ಕುವೆಂಪು ಅವರ ಜನ್ಮದಿನ.. ವಿಶ್ವಮಾನವ ದಿನ ಆಗಿರುವ ಈ ಸುದಿನ ರಸಖುಷಿಯ ಕೆಲ ಸಿನಿಮಾ ಹಾಡುಗಳು ಮುಂದಿದೆ....

    'ನೇಗಿಲು ಹಿಡಿದು...'

    ಕುವೆಂಪು ಬರೆದಿರುವ 'ನೇಗಿಲು ಹಿಡಿದು..' ಹಾಡನ್ನು ರಾಜ್ ಕುಮಾರ್ ಮತ್ತು ಅನಂತ್ ನಾಗ್ ನಟಿಸಿರುವ 'ಕಾಮನಬಿಲ್ಲು' ಸಿನಿಮಾದಲ್ಲಿ ಬಹಳಸಿಕೊಳ್ಳಲಾಗಿದೆ. ಕುವೆಂಪು ಸಾಹಿತ್ಯ, ಸಿ.ಅಶ್ವತ್ ಧ್ವನಿ ಮತ್ತು ಉಪೇಂದ್ರ ಕುಮಾರ್ ಸಂಗೀತದಲ್ಲಿ ಹೊರಬಂದ ಈ ಹಾಡು ಅನ್ನದಾತ ರೈತನ ಮಹತ್ವವನ್ನು ಸಾರುತ್ತಿದೆ.

    'ನಾ ನಿನಗೆ ನೀ ನನಗೆ...'

    ದೊಡ್ಡ ಸಾಹಿತ್ಯ ಪ್ರೇಮಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ 'ಇಷ್ಟಕಾಮ್ಯ' ಚಿತ್ರದಲ್ಲಿ ಕುವೆಂಪು ಸಾಹಿತ್ಯವನ್ನು ಬಳಸಿಕೊಂಡಿದ್ದಾರೆ. ಚಿತ್ರದ ಒಂದು ಸನ್ನಿವೇಶಕ್ಕೆ ಸೂಕ್ತವಾಗುವಂತೆ 'ನಾ ನಿನಗೆ ನೀ ನನಗೆ..' ಹಾಡು ಬರುತ್ತದೆ. ಈ ಹಾಡನ್ನು ಚಿಂತನ್ ವಿಕಾಸ್ ಹಾಡಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

    'ಬಾರಿಸು ಕನ್ನಡ ಡಿಂಡಿಮ...'

    ಕುವೆಂಪು ಅವರ 'ಬಾರಿಸು ಕನ್ನಡ ಡಿಂಡಿಮ...' ಹಾಡಿಗೆ ಹೊಸ ಮೆರಗು ತುಂಬಿದ್ದು 'ಲೂಸಿಯ' ಖ್ಯಾತಿಯ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಅವರ ಹಾಡು. ಈ ಹಾಡು ಕೇಳಿದರೆ ನಿಜಕ್ಕೂ ನಮ್ಮ ಕನ್ನಡದ ಅಭಿಮಾನ ಉಕ್ಕಿ ಬರುತ್ತದೆ.

    'ಕನ್ನಡವೇ ಸತ್ಯ..'

    'ಕನ್ನಡವೇ ಸತ್ಯ.. ಕನ್ನಡವೇ ನಿತ್ಯ...' ಎಂಬ ಕುವೆಂಪು ಅವರ ಶ್ರೇಷ್ಟ ವಾಕ್ಯವನ್ನು ಡಾ.ರಾಜ್ ಕುಮಾರ್ ಹಾಡಿದ್ದು ಬಲು ಸೊಗಸಾಗಿ ಇತ್ತು. ಪುಟ್ಟಪ್ಪ ಅವರ ಪದ ಅಣ್ಣವ್ರ ಧ್ವನಿ ಎರಡು ಬೆರತಾಗ ಕೇಳಿವ ಕಿವಿಯೇ ಧನ್ಯ.

    'ನೂರು ದೇವರನೆಲ್ಲ..'

    ಕುವೆಂಪು ಬರವಣಿಗೆಯನ್ನು ಹೆಚ್ಚು ಹೆಚ್ಚು ಜನರಿಗೆ ಮುಟ್ಟಿಸಿದ ಕೀರ್ತಿ ಸಿ.ಅಶ್ವತ್ ಅವರಿಗೆ ಸಲ್ಲುತ್ತದೆ. ಕುವೆಂಪು ಅವರ ಅನೇಕ ಹಾಡುಗಳಿಗೆ ಸಂಗೀತ ನೀಡಿ ಅಶ್ವತ್ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ. ಅದರಲ್ಲಿಯೂ 'ನೂರು ದೇವರನೆಲ್ಲ..' ಹಾಡು ಅಶ್ವತ್ ಕಂಚಿನ ಕಂಠದಲ್ಲಿ ಕೇಳುವುದೇ ಒಂದು ಭಾಗ್ಯ.

    'ಕಾನೂರು ಹೆಗ್ಗಡತಿ' ಚಿತ್ರ

    'ಕಾನೂರು ಹೆಗ್ಗಡತಿ' ಚಿತ್ರ

    ಹಾಡುಗಳು ಜೊತೆಗೆ ಕುವೆಂಪು ಅವರ 'ಕಾನೂರು ಹೆಗ್ಗಡತಿ..' ಕಾದಂಬರಿ ಸಿನಿಮಾವಾಗಿ ಬೆಳ್ಳಿ ತೆರೆ ಮೇಲೆ ಕಂಗೊಳಿಸಿದೆ. ಗಿರೀಶ್ ಕಾರ್ನಾಡ್ ಈ ಕಾದಂಬರಿ ಆಧಾರಿತವಾದ ಸಿನಿಮಾ ಮಾಡಿದ್ದು, ಚಿತ್ರದಲ್ಲಿ ನಟಿ ತಾರ ಅಭಿನಯಿಸಿದ್ದಾರೆ.

    'ರಸಋಷಿ' ಸಿನಿಮಾ

    'ರಸಋಷಿ' ಸಿನಿಮಾ

    'ರಸಋಷಿ' ಎಂಬ ಹೆಸರಿನಲ್ಲಿ ಕುವೆಂಪು ಅವರ ಬಗ್ಗೆ ಸಿನಿಮಾ ಒಂದು ಬಂತು. ಈ ಚಿತ್ರದಲ್ಲಿ ಸಿ.ಆರ್.ಸಿಂಹ ರಾಷ್ಟ್ರಕವಿ ಕುವೆಂಪು ಅವರ ಪಾತ್ರವನ್ನು ಮಾಡಿದ್ದರು.

    'ಕಾನೂರು ಹೆಗ್ಗಡತಿ' ಚಿತ್ರ

    'ಕಾನೂರು ಹೆಗ್ಗಡತಿ' ಚಿತ್ರ

    ಹಾಡುಗಳು ಜೊತೆಗೆ ಕುವೆಂಪು ಅವರ 'ಕಾನೂರು ಹೆಗ್ಗಡತಿ..' ಕಾದಂಬರಿ ಸಿನಿಮಾವಾಗಿ ಬೆಳ್ಳಿ ತೆರೆ ಮೇಲೆ ಕಂಗೊಳಿಸಿದೆ. ಗಿರೀಶ್ ಕಾರ್ನಾಡ್ ಈ ಕಾದಂಬರಿ ಆಧಾರಿತವಾದ ಸಿನಿಮಾ ಮಾಡಿದ್ದು, ಚಿತ್ರದಲ್ಲಿ ನಟಿ ತಾರ ಅಭಿನಯಿಸಿದ್ದಾರೆ.

    English summary
    Watch video : Greatest kannada poet Kuvempu celebrating 113th Birth anniversary. These are Kuvempu songs used in Kannada movies.
    Friday, December 29, 2017, 12:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X