For Quick Alerts
  ALLOW NOTIFICATIONS  
  For Daily Alerts

  19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿ ಆಗಿದ್ದೆ: ನೋವಿನ ಕಥೆ ಬಿಚ್ಚಿಟ್ಟ ಲೇಡಿ ಗಾಗಾ

  |

  ಅಮೆರಿಕದ ಅತ್ಯಂತ ಜನಪ್ರಿಯ ಪಾಪ್ ಐಕಾನ್, ಸಿಂಗರ್, ನಟಿ ಲೇಡಿ ಗಾಗಾ ತನ್ನ ವೃತ್ತಿಜೀವನದ ಪ್ರಾರಂಭದಲ್ಲಿ ಅನುಭವಿಸಿದ ಕಷ್ಟದ ದಿನಗಳ ಬಗ್ಗೆ ಸಾಕ್ಷ್ಯಚಿತ್ರವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. 19ನೇ ವಯಸ್ಸಿನಲ್ಲೇ ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿದ್ದ ಲೇಡಿ ಗಾಗಾ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ ಎಂದಿದ್ದಾರೆ.

  ಖ್ಯಾತ ಗಾಯಕಿ ವೃತ್ತಿಜೀವನದ ಪ್ರಾರಂಭದ ದಿನಗಳಲ್ಲಿ ನಿರ್ಮಾಪಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಬಗ್ಗೆ ಈ ಹಿಂದೆಯೇ ಬಹಿರಂಗ ಪಡಿಸಿದ್ದರು. ಈ ಘಟನೆ ಬಳಿಕ ತಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಕುಗ್ಗಿ ಹೋಗಿದ್ದೆ, ಖಿನ್ನತೆಗೆ ಒಳಗಾಗಿದ್ದೆ ಎಂದಿದ್ದರು. ಈ ಕಹಿ ಘಟನೆ ಬಗ್ಗೆ ಗಾಗಾ ಇತ್ತೀಚಿಗೆ ಬಿಡುಗಡೆಯಾಗಿರುವ ಸಾಕ್ಷ್ಯಚಿತ್ರದಲ್ಲಿ ಸಂಪೂರ್ಣವಾಗಿ ವಿವರಿಸಿದ್ದಾರೆ. ಮುಂದೆ ಓದಿ..

  'ಸಂಸ್ಕೃತ' ಬಳಸಿದ ಅಮೆರಿಕಾದ ಪಾಪ್ ತಾರೆ : ಬೆಕ್ಕಸ ಬೆರಗಾದ ಭಾರತೀಯರು.! 'ಸಂಸ್ಕೃತ' ಬಳಸಿದ ಅಮೆರಿಕಾದ ಪಾಪ್ ತಾರೆ : ಬೆಕ್ಕಸ ಬೆರಗಾದ ಭಾರತೀಯರು.!

  ನಿರ್ಮಾಪಕನೊಬ್ಬ ಬಟ್ಟೆ ತೆಗೆಯಲು ಹೇಳಿದ

  ನಿರ್ಮಾಪಕನೊಬ್ಬ ಬಟ್ಟೆ ತೆಗೆಯಲು ಹೇಳಿದ

  'ನಾನು 19ನೇ ವರ್ಷದಲ್ಲಿದ್ದಾಗ ಕೆಲಸ ಮಾಡುತ್ತಿದ್ದೆ. ಆ ಸಮಯದಲ್ಲಿ ನಿರ್ಮಾಪಕನೊಬ್ಬ ನನ್ನ ಬಳಿ ಬಂದು, ನಿಮ್ಮ ಬಟ್ಟೆ ತೆಗೆಯಿರಿ ಎಂದು ಹೇಳಿದ. ನಾನು ಇಲ್ಲ ಎಂದು ಹೇಳಿ ಅಲ್ಲಿಂದ ಹೊರಟೆ. ಆದರೆ ಆತ ಒತ್ತಾಯ ಮಾಡುತ್ತಲೆ ಇದ್ದ ಎಂದಿದ್ದಾರೆ.

  ನನ್ನನ್ನು ಗರ್ಭಿಣಿ ಮಾಡಿದ್ದ; ಲೇಡಿ ಗಾಗಾ

  ನನ್ನನ್ನು ಗರ್ಭಿಣಿ ಮಾಡಿದ್ದ; ಲೇಡಿ ಗಾಗಾ

  ಬಟ್ಟೆ ತೆಗೆಯದಿದ್ದರೇ ಎಲ್ಲಾ ಸಂಗೀತಗಳನ್ನು ಸುಡುವುದಾಗಿ ಹೇಳಿ ಬೆದರಿಕೆ ಹಾಕಿದ. ನಿರ್ಮಾಪಕ ನನ್ನನ್ನು ಸ್ಟುಡಿಯೋದಲ್ಲಿ ತಿಂಗಳ ಗಟ್ಟಲೇ ಲಾಕ್ ಮಾಡಿದ್ದ, ನನ್ನನ್ನು ಗರ್ಭಿಣಿ ಮಾಡಿದ. ಆಗ ನಾನು ತುಂಬಾ ಆತಂಕಕ್ಕೆ ಒಳಗಾಗಿದ್ದೆ. ಬಳಿಕ ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ನನಗೆ ಸ್ಟ್ರೆಸ್ ಡಿಸಾರ್ಡರ್ ಇರುವುದು ಗೊತ್ತಾಯಿತು. ನಾನು ತುಂಬಾ ಮಾನಸಿಕ ಹಿಂಸೆಗೆ ಒಳಗಾಗಿದ್ದೆ. ಕೆಲವು ವರ್ಷಗಳು ನಾನು ಒಂದೇ ತರ ಇರಲಿಲ್ಲ' ಎಂದು ಹೇಳಿದ್ದಾರೆ.

  ಅತ್ಯಾಚಾರ ವೆಸಗಿದ ವ್ಯಕ್ತಿಯ ಹೆಸರು ಬಹಿರಂಗ ಪಡಿಸದ ಗಾಗಾ

  ಅತ್ಯಾಚಾರ ವೆಸಗಿದ ವ್ಯಕ್ತಿಯ ಹೆಸರು ಬಹಿರಂಗ ಪಡಿಸದ ಗಾಗಾ

  ಅತ್ಯಾಚಾರ ವೆಸಗಿದ ವ್ಯಕ್ತಿಯ ಹೆಸರನ್ನು ಇದುವರೆಗೂ ಬಹಿರಂಗ ಪಡಿಸದ 35 ವರ್ಷದ ಗಾಯಕಿ ಲೇಡಿ ಗಾಗಾ, 'ಆ ವ್ಯಕ್ತಿಯನ್ನು ಮತ್ತೆ ಎದುರಿಸಲು ಎಂದಿಗೂ ಸಾಧ್ಯವಾಗಿಲ್ಲ' ಎಂಬ ಕಾರಣಕ್ಕೆ ಆತನ ಹೆಸರನ್ನು ಸಾರ್ವಜನಿಕವಾಗಿ ಬಹಿರಂಗ ಪಡಿಸಲ್ಲ ಎಂದಿದ್ದಾರೆ.

  ಸ್ಟ್ರೆಸ್ ಡಿಸಾರ್ಡರ್ ಕಾಯಿಲೆಯಿಂದ ಬಳಲುತ್ತಿದ್ದ ಗಾಯಕಿ

  ಸ್ಟ್ರೆಸ್ ಡಿಸಾರ್ಡರ್ ಕಾಯಿಲೆಯಿಂದ ಬಳಲುತ್ತಿದ್ದ ಗಾಯಕಿ

  'ಸ್ಟ್ರೆಸ್ ಡಿಸಾರ್ಡರ್ ಕಾಯಿಲೆಯಿಂದ ಬಳಲುತ್ತಿದ್ದೆ. ಅಂತ ಸಮಯದಲ್ಲಿ ನಿಮ್ಮ ಮೆದುಳು ಆಫ್ ಲೈನ್ ಗೆ ಹೋಗುತ್ತದೆ. ರಿಯಾಲಿಟಿ ಬಗ್ಗೆ ನಿಮಗೆ ಗೊತ್ತಿರಲ್ಲ. ನಾವು ಎಲ್ಲಿಗೆ ಹೋದರು ನಿಮ್ಮನ್ನು ಕಪ್ಪು ಮೋಡವೊಂದು ಹಿಂಬಾಲಿಸಿಕೊಂಡು ಬಂದು ನೀವು ನಿಷ್ಟ್ರಯೋಜಕರು ಮತ್ತು ಸಾಯಬೇಕು ಎಂದು ಹೇಳುವ ಹಾಗೆ ಭಾಸವಾಗುತ್ತೆ' ಎಂದಿದ್ದಾರೆ. ನನ್ನನ್ನು ನಾನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಎರಡೂವರೆ ವರ್ಷ ಚಿಕಿತ್ಸೆ ಪಡೆದಿರುವುದಾಗಿ ಲೇಡಿ ಗಾಗಾ ವಿವರಿಸಿದ್ದಾರೆ.

  English summary
  Famous pop Singer Lady Gaga says total Psychotic break after rape and pregnant at the age of 19

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X