ಚಂದನ್ ಶೆಟ್ಟಿಗೆ ಹೊಡೆಯಿತು ಬಂಪರ್: 5 ಹಾಡಿಗೆ ಸಂಭಾವನೆ ಎಷ್ಟು ಗೊತ್ತಾ.?

Recommended Video

ಚಂದನ್ ಶೆಟ್ಟಿಗೆ ಒಲಿದು ಬಂತು ಅಮೋಘ ಅವಕಾಶ | ಸಂಭಾವನೆ ಎಷ್ಟು ಗೊತ್ತಾ? | FILMIBEAT KANNADA

''ಮೂರೇ ಮೂರು ಪೆಗ್ ಗೆ ತಲೆ ಗಿರ ಗಿರ ಅಂದಿದೆ...'', ''ಹಾಳಾಗೋದೆ...'', ''ಚಾಕಲೇಟ್ ಗರ್ಲ್...'', ''ಟಕಿಲ...'', ''ಫೈಯರ್...'' ಹೀಗೆ ಒಂದಕ್ಕಿಂತ ಒಂದು ಭಿನ್ನ-ವಿಭಿನ್ನ ಹಾಡುಗಳ ಮೂಲಕ ಕನ್ನಡಿಗರ ಮನೆ-ಮನ ಗೆದ್ದಿರುವವರು ಕನ್ನಡ ರಾಪರ್ ಚಂದನ್ ಶೆಟ್ಟಿ.

ರಾಪ್ ಹಾಡುಗಳ ಮೂಲಕ ಕನ್ನಡ ಸಂಗೀತ ಲೋಕದಲ್ಲಿ ಹೊಸ ಸಂಚಲನ ಹುಟ್ಟು ಹಾಕಿರುವ ಚಂದನ್ ಶೆಟ್ಟಿಗೆ ಇದೀಗ ಅದೃಷ್ಟ ಖುಲಾಯಿಸಿದೆ. ಬಂಪರ್ ಆಫರ್ ವೊಂದು ಚಂದನ್ ಶೆಟ್ಟಿ ರವರನ್ನು ಹುಡುಕಿಕೊಂಡು ಬಂದಿದೆ.

ಅದೇನಪ್ಪಾ ಅಂದ್ರೆ, ಪ್ರಸಿದ್ಧ ಆಡಿಯೋ ಕಂಪನಿ ಲಹರಿ ಸಂಸ್ಥೆ ಜೊತೆಗೆ ಚಂದನ್ ಶೆಟ್ಟಿ ಒಪ್ಪಂದ ಮಾಡಿಕೊಂಡಿದ್ದಾರೆ. ಐದು ಹಾಡುಗಳು ಇರುವ ಒಂದು ಆಲ್ಬಂ ರೆಡಿ ಮಾಡಲು ಲಹರಿ ಸಂಸ್ಥೆ ಜೊತೆಗೆ ಚಂದನ್ ಶೆಟ್ಟಿ ಕೈ ಜೋಡಿಸಿದ್ದಾರೆ.

Lahari Audio Company to pay Rs 1 crore as remuneration to Chandan Shetty

ಆರು ತಿಂಗಳ ಒಳಗೆ ಒಂದು ಆಲ್ಬಂ... ಅಂದ್ರೆ ಐದು ಹಾಡುಗಳನ್ನು ರೆಡಿ ಮಾಡಲು ಚಂದನ್ ಶೆಟ್ಟಿಗೆ ಲಹರಿ ಸಂಸ್ಥೆ ನೀಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ.? ಬರೋಬ್ಬರಿ ಒಂದು ಕೋಟಿ.! ನಂಬಿದ್ರೆ ನಂಬಿ... ಬಿಟ್ಟರೆ ಬಿಡಿ.!

'ಬಿಗ್ ಬಾಸ್ ಕನ್ನಡ-5' ವಿನ್ನರ್ ಆದ್ಮೇಲೆ ಚಂದನ್ ಶೆಟ್ಟಿಗೆ ಇದೀಗ ಭಾಗ್ಯದ ಲಕ್ಷ್ಮೀ ಒಲಿದಿದ್ದಾಳೆ. ಲಹರಿ ಸಂಸ್ಥೆ ಕೊಟ್ಟಿರುವ ಆಫರ್ ಗೆ ಚಂದನ್ ಶೆಟ್ಟಿ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಉತ್ತಮ ಹಾಡುಗಳನ್ನು ರೆಡಿ ಮಾಡಲು ಚಂದನ್ ಶೆಟ್ಟಿ ಸಜ್ಜಾಗಿದ್ದಾರೆ.

'ಬಿಗ್ ಬಾಸ್' ಮನೆಯಲ್ಲಿ ಇದ್ದಾಗ, ಒಂದೊಂದು ಸ್ಪರ್ಧಿ ಮೇಲೂ ಚಂದನ್ ಶೆಟ್ಟಿ ಹಾಡು ತಯಾರಿಸಿದ್ದರು. ನಿವೇದಿತಾ ಗೌಡ ಬಗ್ಗೆ ರೆಡಿ ಮಾಡಿದ್ದ 'ಗೊಂಬೆ.. ಗೊಂಬೆ' ಹಾಡು ಯಾರಿಗ್ತಾನೆ ಗೊತ್ತಿಲ್ಲ ಹೇಳಿ.? ಇದೀಗ ಲಹರಿ ಸಂಸ್ಥೆಗಾಗಿ ಚಂದನ್ ಶೆಟ್ಟಿ ಯಾವೆಲ್ಲ ಹಾಡುಗಳನ್ನು ತಯಾರಿಸುತ್ತಾರೆ ಅಂತ ಕಾದು ನೋಡಬೇಕು.

More from Filmibeat

English summary
Lahari Audio Company to pay Rs 1 crore as remuneration to Chandan Shetty for 5 songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X