For Quick Alerts
  ALLOW NOTIFICATIONS  
  For Daily Alerts

  'ಅದ್ದೂರಿ' ಜೋಡಿಯ ಹೊಸ ಸಿನಿಮಾ ಪ್ರಾರಂಭಕ್ಕೂ ಮೊದಲೇ ಆಡಿಯೋ ರೈಟ್ಸ್ ಸೇಲ್

  |

  ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ದುಬಾರಿ' ಸಿನಿಮಾ ಪಕ್ಕಕ್ಕಿಟ್ಟು 'ಅದ್ಧೂರಿ' ನಿರ್ದೇಶಕ ಎಪಿ ಅರ್ಜುನ್ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಅದಾಗಲೇ ಈ ಸಿನಿಮಾದ ಚಿತ್ರೀಕರಣ ಸಹ ಭರ್ಜರಿಯಾಗಿ ನಡೆಯುತ್ತಿದೆ. ಆರಂಭಿಕ ಹಂತದಲ್ಲಿ ಆಕ್ಷನ್ ದೃಶ್ಯಗಳನ್ನು ಶೂಟ್ ಮಾಡಲಾಗುತ್ತಿದ್ದು, ಭಾರತದ ಟಾಪ್ ಫೈಟ್ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನ ಮಾಡ್ತಿದ್ದಾರೆ.

  ಚೊಚ್ಚಲ ಚಿತ್ರದಲ್ಲಿ ಬ್ರೇಕ್ ಕೊಟ್ಟ ನಿರ್ದೇಶಕನ ಜೊತೆ ಮತ್ತೆ ಆಕ್ಷನ್ ಪ್ರಿನ್ಸ್ ಕೆಲಸ ಮಾಡ್ತಿರುವುದು ಸಹಜವಾಗಿ ಅಭಿಮಾನಿಗಳಲ್ಲಿ ಥ್ರಿಲ್ ಹೆಚ್ಚಿಸಿದೆ. ಈ ಕಾಂಬಿನೇಷನ್ ನಲ್ಲಿ ಈ ಸಲ ಯಾವ ರೀತಿ ಸಿನಿಮಾ ನಿರೀಕ್ಷೆ ಮಾಡಬಹುದು ಎಂಬ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ. ಅಂದಹಾಗೆ ಧ್ರುವ ಸರ್ಜಾ ಹೊಸ ಸಿನಿಮಾಗೆ ಮಾರ್ಟಿನ್ ಎಂದು ಟೈಟಲ್ ಇಡಲಾಗಿದೆ. ಮುಂದೆ ಓದಿ...

  ಆಡಿಯೋ ಹಕ್ಕು ಮಾರಾಟ

  ಆಡಿಯೋ ಹಕ್ಕು ಮಾರಾಟ

  ಇನ್ನು ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಆಗುವ ಮೊದಲೇ ಆಡಿಯೋ ಹಕ್ಕು ಮಾರಾಟವಾಗಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಪ್ರಸಿದ್ಧ ಆಡಿಯೋ ಸಂಸ್ಥೆ ಆಡಿಯೋ ಹಕ್ಕನ್ನು ಖರೀದಿ ಮಾಡಿದೆ. ಮಾರ್ಟಿನ್ ಸಿನಿಮಾದ ಆಡಿಯೋವನ್ನು ದಕ್ಷಿಣ ಭಾರತದ ಪ್ರಸಿದ್ಧ ಆಡಿಯೋ ಸಂಸ್ಥೆ ಲಹರಿ ಸಂಸ್ಥೆ ತನ್ನದಾಗಿಸಿಕೊಂಡಿದೆ. ಭರ್ಜರಿ ಮೊತ್ತಕ್ಕೆ ಆಡಿಯೋ ಹಕ್ಕು ಖರೀದಿ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

  ಅಧಿಕೃತ ಮಾಹಿತಿ ಬಹಿರಂಗ ಪಡಿಸಿದ ಲಹರಿ ಸಂಸ್ಥೆ

  ಅಧಿಕೃತ ಮಾಹಿತಿ ಬಹಿರಂಗ ಪಡಿಸಿದ ಲಹರಿ ಸಂಸ್ಥೆ

  ಆಡಿಯೋ ಹಕ್ಕು ಖರೀದಿ ಮಾಡಿದ ಬಗ್ಗೆ ಲಹರಿ ಸಂಸ್ಥೆ ತನ್ನ ಅಧಿಕೃತ ಟ್ಟಿಟ್ಟರ್ ಖಾತೆಯಲ್ಲಿ ಬಹಿರಂಗ ಪಡಿಸಿದೆ. ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ನಟನೆಯ ಹೊಸ ಸಿನಿಮಾದ ಆಡಿಯೋ ಖರೀದಿಸಿದ ವಿಚಾರ ಹಂಚಿಕೊಳ್ಳಲು ಸಂತಸವಾಗುತ್ತಿದೆ ಎಂದು ಲಹರಿ ಮ್ಯೂಸಿಕ್ ಬಹಿರಂಗ ಪಡಿಸಿದೆ.

  ಆಗಸ್ಟ್ 15ಕ್ಕೆ ಟೈಟಲ್ ಟೀಸರ್ ಬಿಡುಗಡೆ

  ಆಗಸ್ಟ್ 15ಕ್ಕೆ ಟೈಟಲ್ ಟೀಸರ್ ಬಿಡುಗಡೆ

  ಅಂದಹಾಗೆ ಇಬ್ಬರ ಹೊಸ ಸಿನಿಮಾಗೆ ಖ್ಯಾತ ನಿರ್ಮಾಪಕ ಉದಯ್ ಕೆ ಮಹ್ತಾ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ಚಿತ್ರಕ್ಕೆ ಮಾರ್ಟಿನ್ ಎನ್ನುವ ಟೈಟಲ್ ಇಟ್ಟಿದ್ದಾರೆ ಎನ್ನುವ ವಿಚಾರವಾಗಿದೆ ಆದರೆ ಸಿನಿಮಾತಂಡ ಇನ್ನು ಅಧಿಕೃತವಾಗಿ ಬಹಿರಂಗ ಪಡಿಸಿಲ್ಲ. ಇದೇ ತಿಂಗಳು ಆಗಸ್ಟ್ 15ರಂದು ಚಿತ್ರತಂಡ ಅಧಿಕೃತವಾಗಿ ಟೈಟಲ್ ಟೀಸರ್ ಲಾಂಚ್ ಮಾಡುವುದಾಗಿ ಬಹಿರಂಗಪಡಿಸಿದೆ.

  ಧ್ರುವ ಸರ್ಜಾ 5ನೇ ಸಿನಿಮಾ

  ಧ್ರುವ ಸರ್ಜಾ 5ನೇ ಸಿನಿಮಾ

  ಅಂದಹಾಗೆ ಮಾರ್ಟಿನ್ ಧ್ರುವ ಸರ್ಜಾ ನಟನೆಯ 5ನೇ ಸಿನಿಮಾವಾಗಿದೆ. ಹೊಸ ಸಿನಿಮಾದ ಟೈಟಲ್ ಟೀಸರ್ ಆಗಸ್ಟ್ 15 ಸಂಜೆ 5.30ಕ್ಕೆ ಬಿಡುಗಡೆಯಾಗಲಿದೆ. ಅಂದಹಾಗೆ ಈ ಸಿನಿಮಾ ಪ್ರಾರಂಭ ಮಾಡುವ ಮೊದಲೇ ನಿರ್ದೇಶಕ ನಂದಕಿಶೇರ್ ಜೊತೆ ಮತ್ತೊಂದು ಸಿನಿಮಾ ಅನೌನ್ಸ್ ಮಾಡಿದ್ದರು. ಅಲ್ಲದೇ ಮುಹೂರ್ತ ಕೂಡ ನೆರವೇರಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಪಕ್ಕಕ್ಕಿಟ್ಟು, ಮಾರ್ಟಿನ್ ಕೈಗೆತ್ತಿಕೊಂಡಿದ್ದಾರೆ.

  9 ವರ್ಷದ ಬಳಿಕ ಒಂದಾದ ಅದ್ಧೂರಿ ಜೋಡಿ

  9 ವರ್ಷದ ಬಳಿಕ ಒಂದಾದ ಅದ್ಧೂರಿ ಜೋಡಿ

  ಸದ್ಯ ಚಿತ್ರದ ಟೈಟಲ್ ಮೂಲಕ ಕುತೂಹಲ ಮೂಡಿಸಿರುವ ಧ್ರುವ ಸರ್ಜಾ ಹೊಸಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿಸಿದೆ. ಸುಮಾರು 9 ವರ್ಷದ ನಂತರ ಧ್ರುವ ಮತ್ತು ಅರ್ಜುನ್ ಒಟ್ಟಿಗೆ ಸಿನಿಮಾ ಮಾಡ್ತಿರುವುದು ಕೂಡ ಸಹಜವಾಗಿ ಥ್ರಿಲ್ ಹೆಚ್ಚಿಸಿದೆ. ಧ್ರುವ ಸರ್ಜಾ ಚೊಚ್ಚಲ ಸಿನಿಮಾ 'ಅದ್ಧೂರಿ' 2012ರಲ್ಲಿ ಬಿಡುಗಡೆಯಾಗಿತ್ತು. ರಾಧಿಕಾ ಪಂಡಿತ್ ನಾಯಕಿಯಾಗಿದ್ದರು.

  ಪ್ರೇಮ್-ರಾಘವೇಂದ್ರ ಜೊತೆ ಧ್ರುವ ಸಿನಿಮಾ

  ಪ್ರೇಮ್-ರಾಘವೇಂದ್ರ ಜೊತೆ ಧ್ರುವ ಸಿನಿಮಾ

  ಈ ನಡುವೆ 'ಜೋಗಿ' ಪ್ರೇಮ್ ಜೊತೆಯೂ ಧ್ರುವ ಸಿನಿಮಾ ಮಾಡಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಪ್ರೇಮ್ ತಮ್ಮ ಮುಂದಿನ ಸಿನಿಮಾವನ್ನು ಆಗಸ್ಟ್ 24 ರಂದು ಘೋಷಣೆ ಮಾಡಲಿದ್ದಾರೆ. ಅದಾಗಲೇ ಸ್ಕ್ರಿಪ್ಟ್ ಕೆಲಸ ಮುಗಿಸಿ ಪೂಜೆ ಸಹ ಮಾಡಿದ್ದರು. ಈ ಚಿತ್ರಕ್ಕೆ ಹೀರೋ ಯಾರಾಗ್ತಾರೆ ಎನ್ನುವ ಕುತೂಹಲ ಹೆಚ್ಚಿದ್ದು, ಧ್ರುವ ಸರ್ಜಾ ಹೆಸರು ಜೋರಾಗಿ ಚರ್ಚೆಯಲ್ಲಿದೆ. ಇನ್ನು ಜಗ್ಗುದಾದ ನಿರ್ದೇಶನ ಮಾಡಿದ್ದ ರಾಘವೇಂದ್ರ ಹೆಗ್ಡೆ ಜೊತೆಯೂ ಧ್ರುವ ಸಿನಿಮಾವೊಂದಕ್ಕೆ ಕಮಿಟ್ ಆಗಿದ್ದಾರೆ ಎನ್ನಲಾಗಿದೆ.

  English summary
  Lahari music Acquired Dhruva Sarja and AP Arjun's Martin Movie Audio Rights.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X