»   » ಹೆಡ್ ಫೋನ್ ಹಾಕ್ಕೊಳ್ಳಿ...'ರನ್ನ' ಎಲ್ಲಾ ಹಾಡು ಕೇಳಿ...

ಹೆಡ್ ಫೋನ್ ಹಾಕ್ಕೊಳ್ಳಿ...'ರನ್ನ' ಎಲ್ಲಾ ಹಾಡು ಕೇಳಿ...

Posted By:
Subscribe to Filmibeat Kannada

ಕಡೆಗೂ ಕಿಚ್ಚ ಸುದೀಪ್ ಅಭಿಮಾನಿಗಳು ಕುಣಿದು ಕುಪ್ಪಳಿಸುವ ಸಮಯ ಬಂದೇ ಬಿಟ್ಟಿದೆ. 'ರನ್ನ'ನ ಚಿನ್ನದಂಥ ಹಾಡುಗಳನ್ನ ಕೇಳಿ ಆನಂದಿಸಬೇಕು ಅಂತ ತಿಂಗಳುಗಳಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರನ್ನ' ಆಡಿಯೋ ಇಂದು ರಿಲೀಸ್ ಆಗಿದೆ. ಆಗಲೇ ಯೂಟ್ಯೂಬ್ ನಲ್ಲಿ 'ರನ್ನ'ನ ಎಲ್ಲಾ ಹಾಡುಗಳು ಬಿಡುಗಡೆಯಾಗಿವೆ. 'ರನ್ನ' ಹಾಡುಗಳೆಲ್ಲವೂ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಲಭ್ಯವಾಗಿವೆ. ಅದನ್ನ ನೀವೇ ನಿಮ್ಮ ಕಿವಿಯಾರೆ ಕೇಳಿ....


Listen Kiccha Sudeep starrer 'Ranna' audio songs

ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ 'ರನ್ನ'ನ ಹಾಡುಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದೆ. ಸುದೀಪ್ ಸ್ಟೈಲ್ ಮತ್ತು ಮ್ಯಾನರಿಸಂಗೆ ತಕ್ಕಂತಿರುವ ''ಬಬ್ಬರ್ ಶೇರ್..'' ಹಾಡು ಸುದೀಪ್ ಕಟ್ಟಾ ಭಕ್ತರಿಗೆ ಇಷ್ಟವಾಗುವುದರಲ್ಲಿ ಡೌಟ್ ಬೇಡ.


ದೇವಿ ಶ್ರೀ ಪ್ರಸಾದ್ ಗಾಯನದಲ್ಲಿ ಮೂಡಿಬಂದಿರುವ ''ಬಬ್ಬರ್ ಶೇರ್...''ಗೆ ಸಾಹಿತ್ಯ ಬರೆದವರು ಡಾ.ವಿ.ನಾಗೇಂದ್ರ ಪ್ರಸಾದ್. ಈಗಾಗಲೇ ರಿಲೀಸ್ ಆಗಿರುವ ''ಸೀರೆಲಿ ಹುಡುಗೀರ....'' ಹಾಡು ಪಡ್ಡೆಗಳ ಹೃದಯ ಕದ್ದಿದೆ. ಅದಕ್ಕೆ ಕಾರಣ ವಿಜಯ್ ಪ್ರಕಾಶ್ ಕಂಠ ಮತ್ತು ಯೋಗರಾಜ್ ಭಟ್ರ ಸಾಹಿತ್ಯ. ['ರನ್ನ' ಚಿತ್ರದ ಟೆಂಪರೇಚರ್ ಏರಿಸುತ್ತಿರುವ ಸೀರೆ ಹಾಡು]


ಈ ಎರಡು ಹಾಡುಗಳಿಗಿಂತ ಮಾಸ್ ಪ್ರೇಕ್ಷಕರನ್ನೇ ಗುರಿಯಾಗಿಸಿಕೊಂಡಿರುವ ಹಾಡು 'ವಾಟ್ ಟು ಡು...ವಾಟ್ ನಾಟ್ ಟು ಡು..''. ಭಟ್ರ ಸಾಹಿತ್ಯ ಮತ್ತು ವಿಜಯ್ ಪ್ರಕಾಶ್ ಗಾಯನದಲ್ಲಿ ಮೂಡಿಬಂದಿರುವ ಈ ಹಾಡು 'ರನ್ನ' ಚಿತ್ರದ ಸರ್ಪ್ರೈಸ್ ಪ್ಯಾಕೇಜ್. ['ರನ್ನ' ಚಿತ್ರದ ಸೂಪರ್ ಸಾಂಗ್ ಟೀಸರ್ ರಿಲೀಸ್]


Listen Kiccha Sudeep starrer 'Ranna' audio songs

ಕೆ.ಕಲ್ಯಾಣ್ ಸಾಹಿತ್ಯದಲ್ಲಿ ಟಿಪ್ಪು ಮತ್ತು ಸಂಗೀತ ರವೀಂದ್ರನಾಥ್ ಹಾಡಿರುವ ತಿತ್ಲಿ ಹಾಡು ಕೊಂಚ ರೋಮ್ಯಾಂಟಿಕ್ ಆಗಿದೆ. ಇವೆಲ್ಲದರ ಜೊತೆಗೆ ಶ್ರೀ ಪುರಂದರದಾಸರ ''ಜಗದೋದ್ಧಾರನಾ...'' ಹಾಡೂ ಕೂಡ ಚಿತ್ರದಲ್ಲಿದೆ. ['ರನ್ನ'ನ ಅತ್ತೆ ಮಧು ರಿಚ್ ಲುಕ್ ವಿಡಿಯೋ ಔಟ್]


ಎಂ.ಚಂದ್ರಶೇಖರ್ ನಿರ್ಮಾಣದಲ್ಲಿ ಮೂಡಿಬಂದಿರುವ ಅದ್ದೂರಿ ಚಿತ್ರ 'ರನ್ನ'. ನಂದಕಿಶೋರ್ ಆಕ್ಷನ್ ಕಟ್ ಹೇಳಿರುವ 'ರನ್ನ'ದಲ್ಲಿ ಬಹುಭಾಷಾ ನಟಿ ಮಧು ಮುಖ್ಯ ಭೂಮಿಕೆಯಲ್ಲಿದ್ದಾರೆ. ಸದ್ಯದಲ್ಲೇ 'ರನ್ನ' ತೆರೆಮೇಲೆ ಗ್ರ್ಯಾಂಡ್ ಎಂಟ್ರಿ ನೀಡಲಿದ್ದಾನೆ. ಅಲ್ಲಿವರೆಗೂ 'ರನ್ನ'ನ ಹಾಡುಗಳನ್ನ ಕೇಳುತ್ತಿರಿ...ಗುನುಗುತ್ತಿರಿ. (ಫಿಲ್ಮಿಬೀಟ್ ಕನ್ನಡ)

English summary
Kiccha Sudeep starrer 'Ranna' movie audio has hit the market. The songs of ‘Ranna’ has been composed by V.Harikrishna and already ‘Babbar Sher’ and ‘Seereli Hudugira...’ songs have become popular. Listen to all songs of 'Ranna' here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada