»   » 'ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ

'ದೊಡ್ಮನೆ ಹುಡ್ಗ'ನ ಗಾನ ಕಿಚ್ಚ ಸುದೀಪ್ ರಿಂದ ಅನಾವರಣ

Posted By:
Subscribe to Filmibeat Kannada

ಎಲ್ಲಾ ಸಿನಿಮಾಗಳಂತೆ ಒಂದು 'ಆಡಿಯೋ ರಿಲೀಸ್' ಫಂಕ್ಷನ್ ಮಾಡಿ ಇಡೀ ಆಲ್ಬಂನ ಒಮ್ಮೆಲೆ ಬಿಡುಗಡೆ ಮಾಡುತ್ತಿಲ್ಲ ದುನಿಯಾ ಸೂರಿ ಸಾರಥ್ಯದ 'ದೊಡ್ಮನೆ ಹುಡ್ಗ' ಚಿತ್ರತಂಡ.

ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಅಮೃತಹಸ್ತದಿಂದ 'ದೊಡ್ಮನೆ ಹುಡ್ಗ' ಚಿತ್ರದ ಮೊದಲ ಹಾಡು 'ಅಭಿಮಾನಿಗಳೇ ನಮ್ಮನೆ ದೇವ್ರು' ಬಿಡುಗಡೆ ಆಯ್ತು. ['ಅಭಿಮಾನಿಗಳೇ ನಮ್ಮನೆ ದೇವ್ರು...' ಹಾಡನ್ನ ಇನ್ನೂ ಕೇಳಿಲ್ವಾ.?]


listen-to-dodmane-huduga-third-song-kanasive-nooraru

ಬಳಿಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಎರಡನೇ ಹಾಡು 'ಥ್ರಾಸ್ ಆಕ್ಕತಿ' ರಿಲೀಸ್ ಮಾಡಿದರು. ['ದೊಡ್ಮನೆ ಹುಡುಗ'ನಿಗೆ ಭಾಳ 'ಥ್ರಾಸ್ ಆಕ್ಕತಿ' ನೋಡಿ..]


ಈಗ ಮೂರನೇ ಹಾಡು 'ಪರಿಚಯವೇ ಇಲ್ಲದ ಪರಿಣಾಮ ನಿನ್ನದು..' ನೀವು ಕೇಳಲು ಲಭ್ಯ. 'ದೊಡ್ಮನೆ ಹುಡ್ಗ' ಚಿತ್ರದ ಈ ರೋಮ್ಯಾಂಟಿಕ್ ಗೀತೆಯನ್ನ ಕಿಚ್ಚ ಸುದೀಪ್ ಬಿಡುಗಡೆ ಮಾಡಿದ್ದಾರೆ.


ವಿ.ಹರಿಕೃಷ್ಣ ಸಂಗೀತ ನೀಡಿರುವ ಜಯಂತ್ ಕಾಯ್ಕಿಣಿ ಸಾಹಿತ್ಯ ಇರುವ ಕಾರ್ತಿಕ್ ಹಾಗೂ ಶ್ವೇತಾ ಮೋಹನ್ ಹಾಡಿರುವ ''ಪರಿಚಯವೇ ಇಲ್ಲದ ಪರಿಣಾಮ ನಿನ್ನದು...'' ಹಾಡನ್ನ ಕೇಳ್ಕೊಂಡ್ ಬನ್ನಿ...ಪರಿಚಯವೇ ಇಲ್ಲದ ಪರಿಣಾಮ ನಿನ್ನದು
ಪರಿಮಿತಿಯೇ ಇಲ್ಲದ ಪರದಾಟ ನನ್ನದು
ಇರು ಇರು ಇರು ಚೂರು ಜೊತೆಗಿರು
ಕನಸಿವೆ ನೂರಾರು
ನಗು ನಗು ನಗು ನೀನು ನಗದಿರೆ
ಬೆಳಕಿಗೂ ಬೇಜಾರು....


ಸೆಳೆತವು ಅತಿಯಾಗಿರುವಾಗ
ಉಳಿಯುವ ಸ್ಥಿತಿ ಎಲ್ಲಿದೆ ಹೇಳು
ಒಲವಿನ ಅಲೆಯಲ್ಲಿ ಸಿಲುಕುವುದೇ ಮೇಲು...


ನಡೆಯುವ ಬರಿಗಾಲಿಗೆ ಈಗ
ಎಡವಿದೆ ಸಿಹಿ ಮಿಂಚಿನ ಬಳ್ಳಿ
ಬಿದ್ದರೆ ನಾನೀಗ ನಿನ್ನದೇ ತೋಳಲ್ಲಿ....


ಮುತ್ತಿನ ರುಜು ಒತ್ತಿದ ಮೇಲೂ,
ಸಭ್ಯನ ತರ ನೋಡುವೆ ಏಕೆ
ಅಪಹರಿಸುವ ಮುನ್ನ ಅನುಮತಿಯೂ ಬೇಕೆ?


ಇದಕ್ಕಿಂತಲೂ ಚೆಂದದ ಕಾರಣ
ಸಿಗುವುದೇ ಬದುಕಲು?


ಶುರು ಶುರು ಶುರು ಆಗ ಪ್ರಕರಣ
ತಡೆಯಲು ನಾನ್ಯಾರು?
ಇರು ಇರು ಇರು ಚೂರು ಜೊತೆಗಿರು
ಕನಸಿವೆ ನೂರಾರು

English summary
Kannada Actor, Rebel Star, Congress Politician, Ambareesh and Puneeth Rajkumar starrer 'Dodmane Huduga' Third song 'Kanasive Nooraru' has been released by Kiccha Sudeep. Listen to the song here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada