»   » ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ

ಗಾಂಧಿನಗರದ ಎಲ್ಲಾ 'ರಿಯಲ್' ನಟರ ಕಾಲೆಳೆದ ಉಪೇಂದ್ರ

Posted By: ಹರಾ
Subscribe to Filmibeat Kannada

ರೀಲ್ ನಲ್ಲೂ ರಿಯಲ್ ನಲ್ಲೂ 'ರಿಯಲ್ ಸ್ಟಾರ್' ಉಪೇಂದ್ರ ಸಖತ್ ರಿಯಲ್. ನಾಲಿಗೆಗೂ ಮನಸ್ಸಿಗೂ ಫಿಲ್ಟರ್ ಇಲ್ಲದೆ ಇದ್ದದ್ದನ್ನ ಇದ್ದ ಹಾಗೆ ಹೇಳುವ ಉಪೇಂದ್ರ ಯಾರಿಗೂ ಕೇರ್ ಮಾಡಿದವರಲ್ಲ.

'ರಿಯಲಿಸ್ಟಿಕ್' ಫಾರ್ಮುಲಾದಿಂದ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಉಪೇಂದ್ರ ಗಾಂಧಿನಗರದ ಟ್ರೆಂಡ್ ಸೆಟರ್. ಇದು ಎಲ್ಲಾ 'ರಿಯಲ್' ಅಭಿಮಾನಿಗಳು ಮನಸ್ಸಿಂದ ಒಪ್ಪಿಕೊಳ್ಳುವ ಮಾತು.


ಇಂತಿಪ್ಪ ಉಪೇಂದ್ರ 'ಸ್ಯಾಂಡಲ್ ವುಡ್ ಸ್ಟಾರ್ ಹೀರೋ'ಗಳ ಕಾಲೆಳೆದಿದ್ದಾರೆ. ತಮ್ಮದೇ ಸ್ಪೆಷಲ್ ಸ್ಟೈಲ್ ನಲ್ಲಿ ಎಲ್ಲರನ್ನ ಬೆಂಡೆತ್ತಿ ಬ್ರೇಕ್ ಹಾಕಿದ್ದಾರೆ. 'ನಾನು', 'ನನ್ನಿಂದ', 'ಉಪ್ಪಿಗಿಂತ ರುಚಿ ಬೇರೆ ಇಲ್ಲ' ಅನ್ನೋ 'ಸ್ವಾಭಿಮಾನ'ದಲ್ಲಿ ಕನ್ನಡ ಚಿತ್ರರಂಗದ ಇತರೆ ನಟರಿಗೆ ಉಪೇಂದ್ರ ಟಾಂಗ್ ನೀಡಿದ್ದಾರೆ. ಮುಂದೆ ಓದಿ.....


'ಉಪ್ಪಿಟ್ಟಿಂದ ಸತ್ಯ ಕಕ್ಕಿದ ಉಪೇಂದ್ರ'

ರಿಯಲ್ ಸ್ಟಾರ್ ಉಪೇಂದ್ರ ನಟಿಸಿ ನಿರ್ದೇಶಿಸಿರುವ 'ಉಪ್ಪಿ-2' ಚಿತ್ರದ ಆಡಿಯೋ ಅದ್ದೂರಿಯಾಗಿ ರಿಲೀಸ್ ಆಗಿದೆ. 'ಉಪ್ಪಿ-2' ಚಿತ್ರದ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡಲ್ಲಿ ಉಪೇಂದ್ರ ವೃತ್ತಿ ಬದುಕಲ್ಲಾದ ಕೆಲ ರಿಯಲ್ ಇನ್ಸಿಡೆಂಟ್ ಗಳನ್ನ ಬಾಯಿ ಬಿಟ್ಟಿದ್ದಾರೆ. ['ಉಪ್ಪಿ-2' ಆಡಿಯೋ ರಿಲೀಸ್ ಮಾಡಿದ್ದು ಯಾರು?]


ದೊಡ್ಡ ದೊಡ್ಡ ನಟರಿಗೆ ಉಪೇಂದ್ರ ಟಾಂಗ್

ಗಾಂಧಿನಗರದ ವಾಸ್ತವವನ್ನ ಸೆನ್ಸಾರ್ ಇಲ್ಲದೆ ಹಾಡಲ್ಲಿ ಬರೆದಿರುವ ಉಪೇಂದ್ರ, ಇವರೇ ಅಂತ ಬೆಟ್ಟು ಮಾಡಿ ತೋರಿಸದೆ, ಸ್ಯಾಂಡಲ್ ವುಡ್ ನ ಕೆಲ ನಟರ ಕಾಲು ಎಳೆದಿದ್ದಾರೆ. ಅದ್ಹೇಗೆ ಅಂತ ತಿಳಿದುಕೊಳ್ಳುವುದಕ್ಕೆ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...


Volcano ಯಾರು, ಮಾರ್ಕೆಟ್ ನಂದು ಅಂದೋರ್ಯಾರು?

''ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್...ಎಲ್ಲರ ಕಾಲೆಳೀತದೆ ಕಾಲ, ಅದರದ್ದೊಂದು ಸಣ್ಣ ಟ್ರೈಲರ್ ನೋಡೋ ಮುದುರಿಕೊಂಡು ಬಾಲ...Volcano ಸೈಲೆಂಟ್ ಆಗಿದೆ ಅಂತ ಅದರ ಅಕ್ಕ-ಪಕ್ಕ ಟೆಂಟ್ ಹಾಕಿ ನಂದೇ ಮಾರ್ಕೆಟ್ ಅಂತ ಅಂದ್ರೆ ಅಷ್ಟೆ...'' ಅಂತ ಹಾಡೊಂದಕ್ಕೆ ಉಪೇಂದ್ರ ಸಾಹಿತ್ಯ ಬರೆದಿದ್ದಾರೆ. ಇದರಲ್ಲಿ Volcano ಯಾರು, ಈಗ ನಂದೇ ಮಾರ್ಕೆಟ್ ಅಂತಿರೋದು ಯಾರು ಅಂತ ನಾವು ಬಾಯಿಬಿಟ್ಟು ಹೇಳ್ಬೇಕಾಗಿಲ್ಲ ಅಲ್ವಾ? [ಉಪ್ಪಿ-2 ಚಿತ್ರದ 'ಭಂಗಿ ಹಾಡು' ಲೀಕ್.!?]


ರಿಯಲ್ ಡೈಲಾಗ್ ಯಾವುದು ಗೊತ್ತಾ?

ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಡೈಲಾಗ್ ಡೆಲಿವರಿಯನ್ನ ಆಡಿಕೊಂಡು ಉಪೇಂದ್ರ ಬರೆದಿರುವ ಸಾಲುಗಳು ಹೀಗಿವೆ - ''ಡೈಪರ್ ಹಾಕೋ ಮಗು 'ಅದೆದೆ ಪದದೆ' ಅನ್ನೋದಲ್ಲ ಡೈಲಾಗು...ಡೈಲಾಗ್ ಗೆ ಡೈವ್ ಹೊಡೆದು ಲಾಗ ಲಾಗ ಹೊಡೆಸಿದ್ದು ಡೈಲಾಗು.!''


ಲಾಂಗ್ ತಯಾರಿಸಿದ್ದು 'ನಾನು'.!

ಸ್ಯಾಂಡಲ್ ವುಡ್ ನಲ್ಲಿ ಲಾಂಗ್ ಹಿಡಿಯೋದು ಹೇಗೆ, ರೌಡಿಸಂ ಸಿನಿಮಾ ಅಂದ್ರೇನು ಅಂತ ತಿಳಿಸಿಕೊಟ್ಟಿದ್ದೇ ರಿಯಲ್ ಸ್ಟಾರ್ ಉಪೇಂದ್ರ. ಆದ್ರೆ, ಉಪ್ಪಿಯನ್ನೇ ಮರೆತು ಈಗ ಬಹುತೇಕ ಎಲ್ಲರೂ ಲಾಂಗ್ ಹಿಡಿದು ಯಶಸ್ವಿ ಆಗಿದ್ದಾರೆ. ಅದಕ್ಕೆ ಉಪ್ಪಿ ಗರ್ವದಿಂದ ಹೇಳಿಕೊಳ್ಳುವುದು ಹೀಗೆ - ''ಲಾಂಗ್ ತಯಾರಾದ್ಮೇಲೆ ನಾನ್ ಕೊಟ್ಟೆ, ನೀನ್ ಕೊಟ್ಟೆ, ನಾನ್ ಹಿಡಿದೆ, ನೀನ್ ಹಿಡಿದೆ ಅಲ್ಲ...ಲಾಂಗ್ ನ ಬಿಸಿ ಕುಲುಮೆ ಮೇಲೆ ಹಾಕಿ ತಯಾರ್ಮಾಡಿದ್ದು ಯಾರು ಮರೆತಿಲ್ಲ. ನೋ ಎಕ್ಸ್ ಕ್ಲೂಸ್ ಮೀ ಪ್ಲೀಸ್...'' ['ಉಪ್ಪಿ 2' ಪೋಸ್ಟರ್ ಯಾಕೆ ಖಾಲಿಯಾಗೈತೆ!]


'ಅಣ್ತಮ್ಮ'ನಿಗೂ ಬಿತ್ತು ನೋಡಿ....

''ಅಪ್ಪ-ಅಮ್ಮ, ಅಣ್ತಮ್ಮನ್ನ ಹಿಡ್ಕೊಂಡು ಬಂದೋನಲ್ಲ. ಸಿಂಗಲ್ ಸಿಂಗಲ್ಲಾಗ್ ಬಂದೋನು. ಎಲ್ಲರ ಜೊತೆ ಮಿಂಗಲ್ ಆಗ್ಬೇಕ್ ಅನ್ನೋ ಆಸೆ ಇದೆ. ಕಿಂಡಲ್ ಮಾಡಿದ್ರೆ ಪೊಂಗಲ್ ಮಾಡಿ ಟೆಂಪಲ್ ಮುಂದೆ ಬೆಗ್ಗರ್ಸ್ ಗುಂಪಲ್ಲಿ ಹಂಚ್ ಬಿಡ್ತಿನಿ. ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್. ಎಲ್ಲರ ಕಾಲೆಳೀತದೆ ಕಾಲ'' ಅಂತ ಉಪ್ಪಿ ಹಾಡಿದ್ದಾರೆ. ಗಾಂಧಿನಗರದಲ್ಲಿ ಅಪ್ಪ-ಅಮ್ಮನ ಹೆಸರು ಹೇಳಿಕೊಂಡು, 'ಅಣ್ತಮ್ಮಂದಿರನ್ನ' ಹಿಡ್ಕೊಂಡು ಹೆಸರು ಮಾಡಿದವರು ಯಾರು ಅನ್ನೋದು ನಿಮಗೇ ಚೆನ್ನಾಗಿ ಗೊತ್ತಿದೆ.


ಹಣೆಬರಹ ಬದಲಾಯಿಸಿದ್ದು 'ನಾನು'

''ಹಾಳೆಗಳ ಮೇಲೆ ಗೀಚಿಲ್ಲ. ಹಣೆ ಹಣೆಗಳ ಮೇಲೆ ಗೀಚಿದ್ದು. ಆ ಗೀಚಿದ್ದು ಈಗಲೂ ಟೀಚ್ ಮಾಡ್ಕೊಂಡು ಎಷ್ಟೋ ಜನ ಉಪ್ಪರಿಗೆ ರೀಚ್ ಆದರು'' ಅಂತ ಹಾಡಿನ ಸಾಹಿತ್ಯ ಬರೆದಿದ್ದಾರೆ ಉಪೇಂದ್ರ. ರಿಯಲ್ ಸ್ಟಾರ್ ಆಕ್ಷನ್ ಕಟ್ ಹೇಳಿರುವ ಚಿತ್ರಗಳಿಂದ ಯಾರ್ಯಾರ ಕೆರಿಯರ್ ಗೆ ಟರ್ನಿಂಗ್ ಪಾಯಿಂಟ್ ಸಿಕ್ತು ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. [ಕಷ್ಟದಲ್ಲಿ ಬಂದ ಉಪೇಂದ್ರ ಪ್ರತಿಭೆಗಳನ್ನು ಚಿವುಟುತ್ತಿದ್ದಾರೆ!]


ಉಪ್ಪಿಯನ್ನ ಕ್ಯಾಚ್ ಹಾಕೊಳೋಕೆ ಬಂದ್ರು.!

''ಕೆಲವು ನೀಚ್ ನನ್ ಮಕ್ಕಳು ನನ್ ಆಚೆ ಈಚೆ ನೀಚೆ ಪೀಚೆ ಇದ್ರು. ಲಾಸ್ಟ್ ನಲ್ಲಿ ನನ್ನೇ ಕ್ಯಾಚ್ ಹಾಕೋಳ್ಳೋಕೆ ಹೋಗಿ ಪ್ಯಾಚ್ ಪ್ಯಾಚ್ ಆಗೋಗ್ಬುಟ್ರು. ಎಲ್ಲರ ಕಾಲೆಳೀತದೆ ಕಾಲ. ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್'' ಅಂತ ಉಪ್ಪಿ ಹೇಳಿದ್ದಾರೆ ಹೊರತು, ಆ 'ನೀಚ'ರು ಯಾರು ಅಂತ ಬಾಯ್ಬಿಟ್ಟಿಲ್ಲ.


ಮಾಸ್ಟರ್ ಪೀಸ್ 'ನಾನು'

''ಟೈಮ್ ಪಾಸ್ ಗೆ ನನ್ ನೋಡಲ್ಲ. ಟೈಮ್ ನ ಪಾಸ್ ಮಾಡಿ, ಲೈಫ್ ನ ಬೇಸ್ ಮಾಡಿ, ಪ್ರಾಬ್ಲಂನ ಸೀಸ್ ಮಾಡಿ, ಲವ್ ನ ಟೀಸ್ ಮಾಡಿ, ರೆಕಾರ್ಡ್ ನ ಪೀಸ್ ಮಾಡಿ, ಫಾರ್ಮುಲಾ ಗ್ರೀಸ್ ಹೊಡೆದು ಇಡೀ ಇಂಡಿಯಾಗೆ ಐಡಿಯಾನ ಹೇಳ್ಕೊಡೋ ಈ ಮಾಸ್ಟರ್ ಪೀಸ್ ನ ಫಾಲೋ ಮಾಡ್ತಾರೆ'' ಅಂತ ತಮ್ಮ ಸಿನಿಮಾಗಳಲ್ಲಿರುವ ಐಡಿಯಾಗಳ ಬಗ್ಗೆ ಉಪ್ಪಿ ಬರೆದುಕೊಂಡಿದ್ದಾರೆ.


ಅಭಿಮಾನಿಗಳಲ್ಲ, ಸ್ವಾಭಿಮಾನಿಗಳು.!

''ನಾವು ಮಾಡೋ ಲವ್ ಎರೆಸ್ ಆಗೋ ವಾಟ್ಸ್ ಆಪ್ ನಲ್ಲಿ ಲವ್ ಮೆಸೇಜ್ ಕಳುಹಿಸ್ತಾರೆ. ನನ್ ಲವ್ ಮಾಡೋರು ಮೈ ಕೈ ಎದೆ ಮೇಲೆ ಎರೇಸ್ ಮಾಡೋಕೆ ಆಗ್ದೇ ಇರೋ ಹಚ್ಚೆ ಹಾಕಿಸಿಕೊಂಡು ಓಡಾಡೋಕೆ ಕೆಚ್ಚೆದೆ ಇರೋ ಸ್ವಚ್ಛ ಮನಸ್ಸಿನ ಹುಚ್ಚು ಸ್ವಾಭಿಮಾನಿಗಳು'' ಅಂತ ತಮ್ಮ ಅಭಿಮಾನಿಗಳನ್ನ ಉಪ್ಪಿ ಕೊಂಡಾಡಿದ್ದಾರೆ.


ಉಪ್ಪಿ ಅಭಿಮಾನಿಗಳು ಎಂಥವರು ಗೊತ್ತಾ?

ರಿಯಲ್ ಅಭಿಮಾನಿಗಳ ಬಳಗ ಹೇಗಿದೆ ಅಂತ ಉಪ್ಪಿ ಕಣ್ಣಾರೆ ಕಂಡಿರುವುದು ಹೀಗೆ - ''ಓಡೋ ಕುದುರೆ ಹಿಂದೆ ಓಡಿ, ಅದ್ನ ಸೈಡ್ ಎತ್ತಿ ರೇಸ್ ಬುಕ್ ನಲ್ಲಿ ಬೆರಣಿ ತಟ್ಟೋರಲ್ಲ ನನ್ ಫ್ಯಾನ್ಸು. ಕುತ್ತೆ ತರಹ ನಿಯತ್ತಿಂದ ಕತ್ತೆ ತರಹ ಕೆಲಸ ಮಾಡೋ ನನಗೆ, ಪ್ರಾಣ ಒತ್ತೆ ಇಟ್ಟು, ಅಭಿಮಾನ ಅನ್ನೋ ಮತ್ತಲ್ಲಿ, ನಿರೀಕ್ಷೆ ಅನ್ನೋ ಬೆತ್ತ ಹಿಡ್ಕೊಂಡು, ಕಾದು ನಾನಾಡೋ ಮಾತಲ್ಲಿ ಮುತ್ತು ಹುಡುಕಿ, ಅದನ್ನ ಲೈಫ್ ನಲ್ಲಿ ಮೆತ್ಕೊಂಡು, ಕತ್ತೆತ್ಕೊಂಡು ಓಡಾಡೋ ಸ್ವಾತಿ ಮುತ್ತಂಥ ಸಖತ್ ಸ್ವಾಭಿಮಾನಿಗಳು''


'ಉಪ್ಪಿಗಿಂತ ರುಚಿ ಬೇರಿಲ್ಲ'

''ಏ...ನಾನ್ ಹಾಲಿವುಡ್ ಸೂಪರ್ ಸ್ಟಾರ್. ಉಪ್ಪಿಗಿಂತ ರುಚಿ ಬೇರಿಲ್ಲ ಅಂತ ಉಪ್ಪು ಜಾಸ್ತಿ ತಿಂದು H20 ಕುಡಿದು ರಕ್ತ ಕಣೀರು ಸುರಿಸಿದ್ ಮರ್ತಿಲ್ಲ. ನಾನು ನಾನು ಅಂದಿದ್ದು ನಾನಲ್ಲ, ಅಂತಿದ್ದು ನೀನು ಅಂತ ಗೊತ್ತಾಗೋಕೆ ಜಾಸ್ತಿ ಟೈಮ್ ಬೇಕಾಗಿಲ್ಲ'' ತಮ್ಮ ಸಿನಿಮಾಗಳನ್ನಿಟ್ಟುಕೊಂಡೇ ಉಪ್ಪಿ ಸಾಹಿತ್ಯ ರಚಿಸಿರುವ ಪರಿ ಇದು.


'ನನ್ ಕಾಲೂ ಎಳೀತದೆ ಕಾಲ'

'ನಾನು', 'ನಂದು' ಅಂತ ಇಷ್ಟೆಲ್ಲಾ ಗರ್ವದಿಂದ ಹೇಳಿ ಎಲ್ಲರನ್ನ ಕಾಲೆಳೆದ ಉಪ್ಪಿ, ತಮ್ಮ ಕಾಲನ್ನ ಎಳೆದುಕೊಂಡಿರುವುದು ಹೀಗೆ - ''ನಾನು ಹುಟ್ಗೆ, ಹೊಟ್ಟೇಗ್ ಹಾಕೋ ಒಂದೊಂದು ಹಿಟ್ ಗೆ, ಹಿಟ್ಟು ಸೂಪರ್ ಹಿಟ್ಟು ಅನ್ನೋ ಜುಟ್ಕೆ ಹೂವ ಕಟ್ಟೋದ್ ಬುಟ್ಟು, ಗುಟ್ಟು ಕೊಟ್ಟಂ ಬಯಲಾಗೋದೇ ನಮ್ ಲೈಫು ಉಪ್ಪಿಟ್ಟಾದಾಗ ಗುರೂ...ಉಪ್ಪಿಟ್ಟು...ನೋ ಎಕ್ಸ್ ಕ್ಯೂಸ್ ಮೀ ಆಲ್ಸೋ...ಎಲ್ರ ಕಾಲೆಳೀತದೆ ಕಾಲ. ನನ್ ಕಾಲೂ ಎಳೀತದೆ ಕಾಲ....ನಮಸ್ಕಾರ''


'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಹಾಡು ಕೇಳಿ

ಸಖತ್ ರಿಯಲ್ಲಾಗಿರುವ 'ಉಪ್ಪಿ-2' ಚಿತ್ರದ ಕಾಲೆಳೆಯುವ ಸಾಂಗ್ ಇಲ್ಲಿದೆ. ಉಪ್ಪಿ ದನಿಯಲ್ಲಿ ಗುರುಕಿರಣ್ ಸಂಗೀತ ಸಂಯೋಜಿಸಿರುವ 'ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್' ಕೇಳಿ, ಎಂಜಾಯ್ ಮಾಡಿ....


English summary
Kannada Actor Upendra directorial 'Uppi-2' audio has hit the market. In a song 'No Excuse me Please', Upendra is said to have taunted Sandalwood Star Heros. So, Listen to the song to know whats in the store.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada