'ಎದೆಯೊಳಗಿನ ತಮಟೆ' ಬಾರಿಸ್ತಾರೆ ನವೀನ್ ಸಜ್ಜು
ಆರ್ಕೆಸ್ಟ್ರಾ ಸಿಂಗರ್ ಆಗಿದ್ದ ನವೀನ್ ಸಜ್ಜು ಅನ್ನೋ ಮಂಡ್ಯದ ಹೈದನ ಅದೃಷ್ಟವನ್ನ ಬದಲಾಯಿಸಿದ್ದು ನಿರ್ದೇಶಕ ಪವನ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ. 'ಲೂಸಿಯಾ' ಸಿನಿಮಾ ಮೂಲಕ "ಎದೆಯೊಳಗಿನ ತಮತಮ ತಮಟೆ..." ಅಂತ ಹಾಡೋಕೆ ಶುರುಮಾಡಿದ ನವೀನ್ ಲುಕ್ ಈಗ ಚೇಂಜಾಗಿದೆ.
ಲೂಸಿಯಾ ಸಿನಿಮಾದಲ್ಲಿ ನಾಲ್ಕು ಹಾಡನ್ನು ಹಾಡಿ ಸಂಗೀತ ಪ್ರೇಮಿಗಳ ಫೇವರೀಟ್ ಆಗಿದ್ದ ನವೀನ್ ರನ್ನ ಹಾಡಿಸೋಕೆ ಭರ್ಜರಿ ಪ್ರಯತ್ನ ಮಾಡಿದ್ರು ನಿರ್ದೇಶಕ ಪವನ್. ಆರ್ಕೆಸ್ಟ್ರಾ ಸಿಂಗರ್ ನವೀನ್ ಸಜ್ಜುವನ್ನ ಆರು ತಿಂಗಳು ರೆಡಿಮಾಡಿದ ಲೂಸಿಯಾ ಟೀಂಗೆ ನವೀನ್ ಈಗ ಥ್ಯಾಂಕ್ಸ್ ಹೇಳಬೇಕು. ಯಾಕಂದ್ರೆ ಒಂದೇ ಹಾಡಿಗೆ ನವೀನ್ ಹೀರೋ ಆಗಿದ್ದಾರೆ. [ಲೂಸಿಯಾ ಚಿತ್ರ ವಿಮರ್ಶೆ]

ಸಿಕ್ಕರುವ ಅವಕಾಶವನ್ನ ಚೆನ್ನಾಗಿ ಬಳಸಿಕೊಳ್ಳೋಕೆ ಯೋಚಿಸಿರೋ ನವೀನ್ ಹೀರೋ ಆಗಿ ಕೂಡ ಮಿಂಚೋ ವಿಶ್ವಾಸದಲ್ಲಿದ್ದಾರೆ. ನೋಡಲು ಸೋನು ನಿಗಮ್ ತರಹೇ ಇರುವ ನವೀನ್ ಸಜ್ಜು ಅವರನ್ನು ಬೇಕಿದ್ದರೆ ಜೂನಿಯರ್ ಸೋನು ನಿಗಮ್ ಎಂದು ಕರೆಯಬಹುದು.
More from Filmibeat
English summary
Playback singer Naveen Sajju is all set to make his acting debut with Edeyolagina Tamate. The movie will be directed by Eeran Gowda. Naveen crooned songs like Helu Shiva and Jamma Jamma in Lucia.


Click it and Unblock the Notifications











