»   » ಅತಿ ಅಪರೂಪದ ಐಂದ್ರಿತಾ 'ಪ್ರೇಮ್' ಗೀತೆ

ಅತಿ ಅಪರೂಪದ ಐಂದ್ರಿತಾ 'ಪ್ರೇಮ್' ಗೀತೆ

Posted By:
Subscribe to Filmibeat Kannada

ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಹಾಗೂ ಬಬ್ಲಿ ಸ್ಟಾರ್ ಐಂದ್ರಿತಾ ರೇ ಜೋಡಿಯ ಚಿತ್ರ ಜನಮ ಜನುಮದಲ್ಲೂ ಹೆಸರು ಬದಲಾಯಿಸಿಕೊಂಡು 'ಅತಿ ಅಪರೂಪ' ಎಂಬ ಹೆಸರಿನಲ್ಲಿ ತೆರೆಗೆ ಬರಲು ಸಿದ್ಧವಾಗಿರುವ ಸಂಗತಿ ಎಲ್ಲರಿಗೂ ಈಗಾಗಲೇ ತಿಳಿದಿದೆ. ನಾಲ್ಕು ವರ್ಷಗಳ ನಂತರ ಬರುತ್ತಿರುವ ಚಿತ್ರ ಇದೇ ಏಪ್ರಿಲ್ ತಿಂಗಳಿನಲ್ಲಿ ಬೆಳ್ಳಿ ತೆರೆಗೆ ಬರಲಿದೆ.

ದಿನೇಶ್ ಬಾಬು ನಿರ್ದೇಶನದ ಪ್ರೇಮಕಾವ್ಯ 'ಅತಿ ಅಪರೂಪ' ಚಿತ್ರಕ್ಕೆ ರಮೇಶ್ ಯಾದವ್ ನಿರ್ಮಾಪಕರಾಗಿದ್ದು, ಕೊನೆಗೂ ಚಿತ್ರವನ್ನು ಚಿತ್ರಮಂದಿರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ನೆನಪಿರಲಿ ಪ್ರೇಮ್ ಅವರ ಚಾರ್ಮಿನಾರ್ ಚಿತ್ರ ಹಿಟ್ ಆದ ಮೇಲೆ 'ಜನಮ ಜನುಮದಲ್ಲೂ ಚಿತ್ರ ರಿಲೀಸ್ ಮಾಡುವ ಆಸೆ ಹುಟ್ಟಿತ್ತಂತೆ.

ಐಂದ್ರಿತಾ ರೇ ಭಜರಂಗಿ ಯಶಸ್ಸಿನ ಅಲೆಯ ಮೇಲೆ ತೇಲುತ್ತಿದ್ದರೆ, ನೆನಪಿರಲಿ ಪ್ರೇಮ್ ಅವರು ಮತ್ತೆ ಲವರ್ ಬಾಯ್ ಆಗಿ 'ಫೇರ್ ಅಂಡ್ ಲವ್ಲೀ' ಹಚ್ಚಿಕೊಂಡಿದ್ದಾರೆ. 'ಮಸ್ತ್ ಮೊಹಬ್ಬತ್' ಶೂಟಿಂಗ್ ಕೂಡ ವೇಗವಾಗಿ ನಡೀತಿದೆ. ಮಳೆಗಾಲದ ಹತ್ತಿರಕ್ಕಾದ್ರೂ 'ಮಳೆ' ಶುರುವಾಗುತ್ತೆ ಎಂಬ ಆಸೆ ಸಿನಿರಸಿಕರಲ್ಲಿದೆ.

ಅತಿ ಅಪರೂಪದ ಚಿತ್ರದ ಇನ್ನೊಂದು ಪ್ರಮುಖ ಅಂಶ ಎಂದರೆ ಮನೋ ಮೂರ್ತಿ, ಜಯಂತ್ ಕಾಯ್ಕಿಣಿ ಹಾಗೂ ಸೋನು ನಿಗಮ್ ಸಂಗಮದಲ್ಲಿ ಹೊರ ಬಂದಿರುವ ಹಾಡುಗಳು. ಅದರಲ್ಲೂ 'ಮಳೆಯ ಹನಿಯಲಿ ಕೂತು..' ಹಾಡಂತೂ ಪ್ರೇಮಿಗಳನ್ನು, ಕಾಯ್ಕಿಣಿ ಸಾಲುಗಳನ್ನು ಮೆಚ್ಚುವವರಿಗೆ ಅಚ್ಚುಮೆಚ್ಚಾಗುವಂಥ ಗೀತೆ.

ಮಳೆಯ ಹನಿಯಲ್ಲಿ ಗೀತೆಯಲ್ಲದೆ ಈ ಚಿತ್ರದಲ್ಲಿ ಆಲಂಗಿಸು ಬಾ ನನ್ನನು, ಅಮ್ಮ ನಿನ್ನ ತೋಳಿನಲ್ಲಿ, ಅತಿ ಅಪರೂಪ ಅವಳ ರೂಪ, ಬಪ್ಪರೇ ಬಪ್ಪರೇ, ತುಂಬಳಿ ಬೊಗಸೆಯು ತುಂಬಲಿ ಮುಂತಾದ ಸುಶ್ರಾವ್ಯ ಗೀತೆಗಳಿವೆ. ಹಾಡುಗಳನ್ನು ಜೇಂಕಾರ್ ಆಡಿಯೋ ಸಂಸ್ಥೆ ಹೊರ ತಂದಿರುವ ಸಿಡಿ, ಕ್ಯಾಸೆಟ್ ಗಳಲ್ಲೇ ಕೇಳಿ ಆನಂದಿಸಿ...ಸದ್ಯಕ್ಕೆ ಮಳೆಯ ಹನಿಯಲಿ ಕೂತು ಹಾಡಿನ ಸಾಹಿತ್ಯ ಇಲ್ಲಿದೆ

Maleya Haniyalli Kootu Ati Aparoopa movie song lyrics

ಮಳೆಯಾ ಹನಿಯಲಿ ಕೂತು
ಇಳೆಗೆ ಬಂದಂತೆ ಮುಗಿಲು
ಅಲೆಯ ಮಡಿಲಲ್ಲಿ ಕೂತು
ಬಳಿಗೆ ಬಂದಂತೆ ಕಡಲು

ನನ್ನೆಲ್ಲ ಋತುಮಾನವನ್ನು ನಿನಗೀಗ ನಾ ನೀಡಬೇಕು
ಗೆಳತಿ ಬೇಡೆನ್ನ ಬೇಡ ತುಸು ದೂರ ಜೊತೆ ನಡೆಯಬೇಕು ||ಪಲ್ಲವಿ||

ಹಸುಗೂಸಾಗಿ ನೀ ನಡೆವಾಗ
ಹಿಡಿ ಮುದ್ದಾಗಿ ನನ್ನ ಕಿರುಬೆರಳು
ಹದಿಹರೆಯದಿ ಹಾರಾಡು ಬೇಗ
ನಿನ್ನ ಗರಿಯಾಗಿ ನಾನೇ ಇರಲು
ಅನುರಾಗದ ಬುತ್ತಿಯಿಂದ ಕೈ ತುತ್ತು ನಾ ನೀಡಬೇಕು
ಗೆಳತಿ ಬೇಡೆನ್ನ ಬೇಡ ತುಸು ದೂರ ಜೊತೆ ನಡೆಯಬೇಕು

ಅಲೆಯ ಮಡಿಲಲ್ಲಿ ಕೂತು
ಬಳಿಗೆ ಬಂದಂತೆ ಕಡಲು

ಪುಟ ಹರಿದಂತೆ ಈ ದಿನ ಚರಿತೆ
ಇಕೋ ಸೇರಿಸುವೆ ಹೊಸ ಪುರವಣಿಯ
ಇನ್ನೂ ಜೋರಾಗಿ ದೀಪವೇ ಬೆಳಗು
ದೂರ ಕೈ ಕಟ್ಟಿ ನಿಲ್ಲಲಿ ಸಮಯ

ಮಸುಕಾದ ಈ ಬಾಳ ರೇಖೆ
ಹೊಸದಾಗಿ ನೀ ಕೊರೆಯಬೇಕು
ಗೆಳತಿ ಬೇಡೆನ್ನ ಬೇಡ ತುಸು ದೂರ ಜೊತೆ ನಡೆಯಬೇಕು

ಮಳೆಯಾ ಹನಿಯಲ್ಲಿ ಕೂತು....||ಪಲ್ಲವಿ ರಿಪೀಟ್||

<iframe width="640" height="360" src="//www.youtube.com/embed/Zz3Q3GE-3SY" frameborder="0" allowfullscreen></iframe>
English summary
Here is song lyrics of 'Maleya Haniyalli Kootu..' movie Ati Aparoopa. Song penned by Jayanth Kaykini has a beautiful composing by Mano Murthy with Sonu Nigam pleaseant voice. Prem Kumar and Aindriata Ray starrer Januma Janumadalloo movie is now re named as Ati Aparoopa set to release in April.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada