»   » 8ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಂಗಳೂರು 'ಬಿಗ್ ಎಫ್.ಎಮ್'

8ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಮಂಗಳೂರು 'ಬಿಗ್ ಎಫ್.ಎಮ್'

Posted By:
Subscribe to Filmibeat Kannada

ಕರಾವಳಿ ಪ್ರದೇಶ ಮಂಗಳೂರಿನ ನಂ.1 ರೇಡಿಯೊ 92.7 ಬಿಗ್ ಎಫ್ ಎಮ್ ಕೇಂದ್ರದಿಂದ 'ಬಿಗ್ ಜೂನಿಯರ್ ಆರ್ ಜೆ' ಹಾಗು ಬಿಗ್ ಎಫ್ ಎಮ್ ನ 8 ನೇ ವಾರ್ಷಿಕೋತ್ಸವದ ಸಂಭ್ರಮಾಚರಣೆಯನ್ನು ಮಂಗಳೂರಿನ ಉಳ್ಳಾಳದ ಸಮ್ಮರ್ ಸ್ಯಾಂಡ್ ರೆಸಾರ್ಟ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಂಗಳೂರಿನ ವಿವಿಧ ಶಾಲೆಗಳಿಂದ ಆಡಿಶನ್ ನಡೆಸಿ ಟಾಪ್ 5 ಸ್ಪರ್ದಿಗಳನ್ನು ಆಯ್ಕೆ ಮಾಡಲಾಗಿತ್ತು, ಈ ಸ್ಪರ್ಧೆಯಲ್ಲಿ ಪುಟಾಣಿ ಪಂಚಮಿ 'ಡಾಬರ್ ಹನಿಟಸ್' 'ಬಿಗ್ ಜೂನಿಯರ್ ಆರ್ ಜೆ ಸೀಜನ್ -3' ನ ವಿಜೇತೆಯಾದರು.[ಮಂಗಳೂರಿನ ಸಾಧಕರಿಗೆ 'ಬಿಗ್ ಎಫ್ ಎಂ' ನಿಂದ ಬಿಗ್ ಪ್ರಶಸ್ತಿ]

Mangaluru 92.7 Big FM celebrates 8th anniversary

ಬಿಗ್ ಎಫ್ ನ ವಾರ್ಷಿಕೋತ್ಸವದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಶ್ರೀ ಯು. ಟಿ ಖಾದರ್ ಅವರು ಮನೋರಂಜನೆಯ ಕ್ಷೇತ್ರದಲ್ಲಿ 92.7 ಬಿಗ್ ಎಫ್ ಎಮ್ ನನಗೆ ತಿಳಿದ ಮಟ್ಟಿಗೆ ಮುಂಚೂಣಿಯಲ್ಲಿದೆ ನಾನು ಬಿಡುವು ಸಿಕ್ಕಾಗಲೆಲ್ಲ ಬಿಗ್ ಎಫ್ ಎಮ್ ಕೇಳುತ್ತಿರುತ್ತೇನೆ 8 ವರ್ಷ ಪೂರೈಸಿದ ಬಿಗ್ . ಎಫ್ ಎಮ್ ಸಂಸ್ಥೆಗೆ ನನ್ನ ಪರವಾಗಿ ಹಾಗು ಕರ್ನಾಟಕ ಸರ್ಕಾರದ ವತಿಯಿಂದ ಶುಭ ಹಾರೈಸುತ್ತೇನೆ ಎಂದು ನುಡಿದರು.

ಕನ್ನಡ ಚಲನಚಿತ್ರ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ್, ತುಳು ಸಿನೆಮಾ ನಟ ಕಮ್ ನಿರ್ದೇಶಕ ಶರತ್ ಚಂದ್ರ ಕುಮಾರ್ ಕದ್ರಿ ಹಾಗೂ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಹೊಚ್ಚ ಹೊಸ ತುಳು ಸಿನೆಮಾ 'ಬೊಳ್ಳಿಲು' ಚಿತ್ರ ತಂಡ ಕೂಡ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.['ಬಿಗ್ ಗೋಲ್ಡನ್ ವಾಯ್ಸ್' ಗೆ ಐಶ್ವರ್ಯ ಮಲ್ಲಿಕಾರ್ಜುನ ಆಯ್ಕೆ]

Mangaluru 92.7 Big FM celebrates 8th anniversary

ತುಳು ನಟಿ ಸೌಜನ್ಯ ಹೆಗ್ಡೆ ಹಾಗು ತುಳು ನಟ ಶ್ರವಣ್ ಕುಮಾರ್ ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದರು. 92.7 ಬಿಗ್ ಎಫ್ ಎಮ್ ನ ಆರ್ ಜೆ ಗಳಾದ ಎರೋಲ್, ಆರ್.ಜೆ. ರಕ್ಷಿತಾ, ಆರ್.ಜೆ. ರೂಪೇಶ್ ಜೊತೆಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿರುವ ಶ್ರೀಮತಿ ಶಿಲ್ಪಾ ಶೆಟ್ಟಿ ,ಜೋಯೆಲ್ ರೆಬೆಲ್ಲೊ ಮತ್ತಿತ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

English summary
Mangaluru's number one FM station 92.7 BIG FM celebrated its eighth anniversary with 'BIG Junior RJ-Season 3' contest with top five contestants. 92.7 BIG FM conducted Junior RJ contest in various schools in Mangaluru and top five candidates were chosen for the final round based on judgeís points and public voting.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada