»   » ಮಂಗಳೂರಿನ ಸಾಧಕರಿಗೆ 'ಬಿಗ್ ಎಫ್ ಎಂ' ನಿಂದ ಬಿಗ್ ಪ್ರಶಸ್ತಿ

ಮಂಗಳೂರಿನ ಸಾಧಕರಿಗೆ 'ಬಿಗ್ ಎಫ್ ಎಂ' ನಿಂದ ಬಿಗ್ ಪ್ರಶಸ್ತಿ

Posted By:
Subscribe to Filmibeat Kannada

ಮಂಗಳೂರಿನ '92.7 ಬಿಗ್ ಎಫ್ ಎಂ' ಕೇಂದ್ರ ಹಾಗು ಬಿಗ್ ಬಜಾರ್ ಇವರ ಜಂಟಿ ಆಶ್ರಯದಲ್ಲಿ ಈ ವರ್ಷದ 69 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಗಸ್ಟ್ 15ರಂದು ತೆರೆಮರೆಯ ಹಿಂದೆ ಸಾಧನೆ ಮಾಡಿರುವ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆರು ಸಾಧಕರಿಗೆ 'ಬಿಗ್ ಸೂಪರ್ ಗುರು' ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಯಿತು.

ಮಂಗಳೂರಿನ ಬಿಗ್ ಬಜಾರ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಂಗಳೂರು ಉತ್ತರ ವಲಯದ ಶಾಸಕರಾದ ಮೊಯಿದ್ದಿನ್ ಬಾವಾ ಅವರು ಅಧ್ಯಕ್ಷತೆ ವಹಿಸಿದ್ದರು.

Mangaluru Big 92.7 FM Big Super Guru Event Report

ಮಕ್ಕಳ ಹೋರಾಟಗಾರ ಚೈಲ್ಡ್ ಲೈನ್ ಮಂಗಳೂರು-1098 ನ ಸಂಪತ್ ಕಟ್ಟಿ, ಪರಿಸರ ಪ್ರೇಮಿಗಳಾದ ಜೀತ್ ಮಿಲನ್ ರೋಚೆ, ಎಚ್.ಐ.ವಿ ಭಾದಿತ ಮಕ್ಕಳಿಗಾಗಿ ಕೆಲಸ ಮಾಡುತ್ತಿರುವ, ಸ್ನೇಹದೀಪ್ ಸಂಸ್ಥೆಯ ಸಂಸ್ಥಾಪಕಿ ತಬಸುಮ್. [ಬಿಗ್ ಗೋಲ್ಡನ್ ವಾಯ್ಸ್' ಗೆ ಐಶ್ವರ್ಯ ಮಲ್ಲಿಕಾರ್ಜುನ ಆಯ್ಕೆ]

ಮಾನಸಿಕ ಅಸ್ವಸ್ಥರಿಗೆ ಹಾಗೂ ಮನೆಯಿಂದ ತಿರಸ್ಕರಿಸಲ್ಪಟ್ಟ ಜನರಿಗಾಗಿ ಕೆಲಸ ಮಾಡುತ್ತಿರುವ ವೈಟ್ ಡೌಸ್ ಸಂಸ್ಥೆಯ ಸಂಸ್ಥಾಪಕಿ ಕೋರಿನ ರಸ್ಕಿನೊ, ಸಮಾಜ ಸೇವಕ ವಿಶು ಶೆಟ್ಟಿ, ಪ್ರಾಣಿ ಪ್ರೇಮಿ ಅನಿಮಲ್ ಕೇರ್ ಟ್ರಸ್ಟ್ ಸಂಸ್ಥಾಪಕಿ ಸುಮ ನಾಯಕ್ ಮುಂತಾದವರಿಗೆ ಶಾಲು ಹೊದೆಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ದಕ್ಷಿಣ ಕನ್ನಡ ಜಿಲ್ಲಾ ಪೋಲಿಸ್ ಅಧಿಕಾರಿ ಡಾ.ಶರಣಪ್ಪ ಎಸ್.ಡಿ ಮಾತನಾಡುತ್ತ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕಾಗಿ ತುಂಬಾ ಸಂತೋಷವಾಗುತ್ತಿದೆ.

ಸಮಾಜದಲ್ಲಿ ಉತ್ತಮ ಕೆಲಸ ಮಾಡಿರುವವರನ್ನು ಅಭಿನಂದಿಸಿದರೆ ಅವರಿಗೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಹುಮ್ಮಸ್ಸು ಬರುತ್ತದೆ. ಇದೀಗ ಇಂತಹ ಕೆಲಸವನ್ನು '92.7 ಬಿಗ್ ಎಫ್.ಎಂ' ಮಾಡಿದೆ ಇನ್ನೂ ಇಂತಹ ಅನೇಕ ಕಾರ್ಯಕ್ರಮಗಳು ಮೂಡಿ ಬರಲಿ ಅಂತ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಮೊಯಿದ್ದಿನ್ ಬಾವಾ ಅವರು ತೆರೆಮರೆಯ ಹಿಂದೆ ಕೆಲಸ ಮಾಡುತ್ತ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವ ಸಾಧಕರಿಗೆ ಸನ್ಮಾನ ಮಾಡುತ್ತಿರುವುದು ಸಂತೋಷ ಇನ್ನು ಈ ಸಂಪ್ರದಾಯ ಹೀಗೆ ಮುಂದುವರಿಯಲಿ ಎಂದು ನುಡಿದರು.

Mangaluru Big 92.7 FM Big Super Guru Event Report

'ಬಿಗ್ ಸೂಪರ್ ಗುರು' ಸಮಾರಂಭದಲ್ಲಿ ತುಳು ಚಿತ್ರನಟಿ ಸೋನಲ್ ಮೊಂತೆರೋ, ಬಿಗ್ ಬಜಾರ್ ಮಾರುಕಟ್ಟೆ ಮುಖ್ಯಸ್ಥ ನಿಖಿಲ್ ಕುಮ್ಟಾಕರ್, ಬಿಗ್ ಬಜಾರ್ ಈಶಾನ್ಯ ಕರ್ನಾಟಕ ಮ್ಯಾನೇಜರ್ ಕಾರ್ತೀಕ್ ಟಿ.ಎಲ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಸಿಶ್ ಮತ್ತು ಜಿತೇಶ್ ರಚಿಸಿದ ಮಾಜಿ ರಾಷ್ಟ್ರಪತಿ ಹಾಗೂ ಯುವಪ್ರೇಮಿ ದಿ.ಎ.ಪಿ.ಜೆ ಅಬ್ದುಲ್ ಕಲಾಂ ಅವರ 'ಫ್ಲ್ಯಾಶ್' ಕಲಾಚಿತ್ರವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ 'ಬಿಗ್ ಎಫ್.ಎಮ್ 92.7' ನಿರ್ಮಾಪಕ ಜೋಯೆಲ್ ರೆಬೆಲ್ಲೊ, ಪ್ರವೀಣ್ ಆಚಾರ್ಯ, ಸುಶಾನ್ ಪೆರಿಂಜೆ, ಉದಯ್ ಸಾಗರ್ ಹಾಗೂ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು. ಆರ್ ಜೆ ಶಿಲ್ಪಾ ಶೆಟ್ಟಿ ಸ್ವಾಗತಿಸಿ, ಆರ್ ಜೆ ರಕ್ಷಿತಾ ಧನ್ಯವಾದವಿತ್ತರು, ಆರ್.ಜೆ ಎರೋಲ್ ಹಾಗೂ ಆರ್ ಜೆ ರೂಪೇಶ್ ಕಾರ್ಯಕ್ರಮ ನಿರೂಪಿಸಿದರು.

English summary
South Canaras most heard FM station 92.7 BIG FM, organised the programme "Big Super Guru" on Saturday, August 15th Big Bazar Mangalore. Big 92.7 FM Presents Big Super Guru honour Social workers Sampath Katty, Jeeth Milan, Vishu Shetty.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada