For Quick Alerts
  ALLOW NOTIFICATIONS  
  For Daily Alerts

  ಮೊದಲ ಕನ್ನಡ ಹಾಡು ಹಾಡಿದ ಮಂಗ್ಲಿ: ಯಾವ ಸಿನಿಮಾ, ಹಾಡು ಯಾವುದು?

  |

  ಈ ಮೊದಲು ಕೆಲವೇ ಕನ್ನಡಿಗರಿಗೆ ಗೊತ್ತಿದ್ದ ಅಪ್ಪಟ ತೆಲುಗಿನ ಗಾಯಕಿ ಮಂಗ್ಲಿ ಈಗ ರಾಜ್ಯದಲ್ಲಿ ಮನೆ ಮಾತಾಗಿದ್ದಾರೆ. 'ರಾಬರ್ಟ್' ಸಿನಿಮಾದ ತೆಲುಗು ಡಬ್ ವರ್ಷನ್‌ನ 'ಕಣ್ಣೇ ಅಧಿರಿಂದಿ' ಹಾಡು ಹಾಡಿರುವ ಮಂಗ್ಲಿ ತನ್ನ ಅದ್ಭುತ ಕಂಠಸಿರಿಯಿಂದ ರಾಜ್ಯದ ಸಂಗೀತ ಪ್ರೇಮಿಗಳನ್ನು ಸೆಳೆದಿದ್ದಾರೆ.

  'ರಾಬರ್ಟ್' ಸಿನಿಮಾದ ತೆಲುಗು ವರ್ಷನ್‌ನ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಂಗ್ಲಿ, ವೇದಿಕೆ ಮೇಲೆ ನಿಂತು 'ಕಣ್ಣೇ ಅಧಿರಿಂದಿ' ಹಾಡು ಹಾಡಿದ್ದೇ ತಡ ಕೆಲವೇ ಗಂಟೆಗಳಲ್ಲಿ ಹಾಡು ವೈರಲ್ ಆಗಿಬಿಟ್ಟಿತು. ಯೂಟ್ಯೂಬ್‌ನಲ್ಲಿಯೂ ಹಾಡು ಸೂಪರ್-ಡೂಪರ್ ಹಿಟ್. ಸಾಮಾಜಿಕ ಜಾಲತಾಣ ತೆಗೆದರೆ ಮಂಗ್ಲಿಯದ್ದೇ ಮಾತು.

  'ರಾಬರ್ಟ್' ಹಾಡು ಕೇಳಿ ಫಿದಾ ಆಗಿದ್ದ ಹಲವರು ಮಂಗ್ಲಿಯನ್ನು ಕನ್ನಡಕ್ಕೆ ಕರೆತನ್ನಿ, ಆಕೆಯಿಂದ ಕನ್ನಡದ ಹಾಡು ಹಾಡಿಸಿ ಎಂದು ಒತ್ತಾಯ ಮಾಡಿದ್ದರು. ಅದಕ್ಕೆ ತಕ್ಕಂತೆ ಮಂಗ್ಲಿ ಈಗ ಮೊದಲ ಕನ್ನಡ ಹಾಡು ಹಾಡಿದ್ದಾರೆ.

  ಹೌದು, ಕನ್ನಡದ 'ಕರಿಯಾ ಐ ಲವ್ ಯೂ' ಸಿನಿಮಾದಲ್ಲಿ ಮೊದಲ ಬಾರಿಗೆ ಮಂಗ್ಲಿ ಕನ್ನಡದ ಹಾಡಿಗೆ ದನಿ ಆಗಿದ್ದಾರೆ. ಸಿನಿಮಾದಲ್ಲಿ ಹಳ್ಳಿ ಸೊಗಡಿನ ಹಾಡೊಂದನ್ನು ಮಂಗ್ಲಿ ಹಾಡಿದ್ದಾರೆ. ಇದೊಂದು ಯುಗಳ ಗೀತೆ ಆಗಿದ್ದು, ಮಂಗ್ಲಿ ಜೊತೆಗೆ ನವೀನ್ ಸಜ್ಜು ಸಹ ಹಾಡಿಗೆ ದನಿಯಾಗಿದ್ದಾರೆ. ಹಾಡು ಈಗಾಗಲೇ ರೆಕಾರ್ಡ್ ಆಗಿದೆ.

  'ಕರಿಯಾ ಐ ಲವ್‌ ಯೂ' ಸಿನಿಮಾವು ಹೊಸಬರ ಸಿನಿಮಾ ಆಗಿದ್ದು, ಹಳ್ಳಿಯಲ್ಲಿ ನಡೆವ ಪ್ರೇಮಕತೆ ಇದಾಗಿದೆ. ಸಿನಿಮಾವನ್ನು ತಿಪ್ಪೇಶ್ ಎಂಬುವರು ನಿರ್ದೇಶಿಸಿದ್ದಾರೆ. ಈ ಹಿಂದೆ ಇವರು 'ರಾಹುಕಾಲ' ಸಿನಿಮಾ ನಿರ್ದೇಶನ ಮಾಡಿದ್ದರು. ಲೋಕಿ ಎಂಬುವರು ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ಮಂಜು ಬಳ್ಳಾರಿ ನಟಿಸಿದ್ದರೆ ನಾಯಕಿಯಾಗಿ ಶಕುಂತಲಾ ನಟಿಸಿದ್ದಾರೆ.

  English summary
  Telugu folk and movie singer Mangli sang her first Kannada song for movie 'Kariya I Love You' along with Naveen Sajju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X