»   » ಮಂಜುಳಾ ಕಂಠಸಿರಿಯಲ್ಲಿ ಮತ್ತೆ ಗುಂಡಿನ ಹಾಡು

ಮಂಜುಳಾ ಕಂಠಸಿರಿಯಲ್ಲಿ ಮತ್ತೆ ಗುಂಡಿನ ಹಾಡು

Posted By:
Subscribe to Filmibeat Kannada

'ನಂಜುಂಡಿ ಕಲ್ಯಾಣ' ಚಿತ್ರದ ಗುಂಡಿನ ಹಾಡು ನೆನಪಿರಬೇಕಲ್ಲವೆ? ಅಯ್ಯೋ ಅದು ಮರೆಯುವಂತಹ ಹಾಡೇ. ಗುಂಡಿನ ಬಗ್ಗೆ ಬಂದಂತಹ ಹಾಡುಗಳಲ್ಲಿ ತನ್ನದೇ ಆದಂತಹ ಕಿಕ್ ಕೊಟ್ಟಂತಹ ಸಾಂಗ್ ಅದು. ಈಗ್ಯಾಕೆ ಮತ್ತೆ ಆ ಹಾಡನ್ನು ನೆನೆಪಿಸುತ್ತಿದ್ದೀರಾ ಅಂತೀರಾ.

ಚಿ.ಉದಯ್ ಶಂಕರ್ ರಚಿಸಿದ "ಒಳಗೆ ಸೇರಿದರೆ ಗುಂಡು ಹುಡುಗಿಯಾಗುವಳು ಗಂಡು, ಬಿಸಿಯಾಗಿದೆ, ನಶೆಯೇರಿದೆ, ಮಿತಿ ಮೀರಿದೆ ಜೋಪಾನ..." ಹಾಡಿಗೆ ಮಂಜುಳಾ ಗುರುರಾಜ್ ಭಾವ ತುಂಬಿದ್ದರು, ಮಾಲಾಶ್ರೀ ಜೀವ ತುಂಬಿದ್ದರು. ಈಗ ಮತ್ತೊಮ್ಮೆ ಅಂತಹದ್ದೇ ಗುಂಡಿನ ಹಾಡನ್ನು ಮಂಜುಳಾ ಅವರು ಹಾಡುತ್ತಿದ್ದಾರೆ.

ಆದರೆ ಈ ಬಾರಿ ಹೆಜ್ಜೆ ಹಾಕುತ್ತಿರುವವರು ಮಾತ್ರ ಮಾಲಾಶ್ರೀ ಅಲ್ಲ ಪರುಲ್ ಯಾದವ್. ಸುರೇಶ್ ಆರ್ಟ್ಸ್ ನಿರ್ಮಾಣದ 'ಶ್ರಾವಣಿ ಸುಬ್ರಮಣ್ಯ' ಚಿತ್ರತಂಡ ಅಮೋಘ ಗಾಯಕಿಯನ್ನು ಮತ್ತೆ ವಾಪಸ್ಸು ಕರೆತಂದಿದೆ.

ಈ ಬಾರಿ ಅವರು ಹಾಡಿರುವ ಹಾಡಿನ ಸಾಹಿತ್ಯ ಹೀಗಿದೆ..."ಕುಡಿದ್ರೆ ತಲೆ ಧಿಂ ಅನ್ನಬೇಕು, ಮೈಯೆಲ್ಲಾ ಜುಂ ಅನ್ನಬೇಕು ಫ್ರೆಂಡು ಒಳಗೆ ಸೇರಿದರೆ ಗುಂಡು ನೀನೆಂತ ಗಂಡು...". ಮಂಜುಳ ಗುರುರಾಜ್ ಅವರು ಈ ಹಾಡನ್ನು ಸಾಧನ ಸ್ಟುಡಿಯೋದಲ್ಲಿ ಧ್ವನಿ ಗೂಡಿಸಿದ್ದಾರೆ.

ಮಂಜುಳಾ ಗಾನಕೆ ವಿ ಹರಿಕೃಷ್ಣ ಸಂಗೀತ

ವಿ ಹರಿಕೃಷ್ಣ ಅವರ ಸಂಗೀತದಲ್ಲಿ ಇದೇ ಮೊದಲು ಮಂಜುಳ ಗುರುರಾಜ್ ಅವರು ಹಾಡಿರುವುದು. ಈ ಹಾಡನ್ನು ಪ್ರೊಫೆಸರ್ ಎಂ ಕೃಷ್ಣೆಗೌಡರು (ಗುಂಡಿನ ಅವಘಡ ಬಗ್ಗೆ ಸುಪ್ರಭಾತ ಮೂಲಕ ಹೇಳಿರುವರು, ಹಾಸ್ಯ ಚಟಾಕಿ ಸರದಾರ) ರಚಿಸಿರುವರು.

ಪರುಲ್ ಯಾದವ್, ಅಮೂಲ್ಯಾ ಹೆಜ್ಜೆ

ಈ ಹಾಡಿನ ಚಿತ್ರೀಕರಣದಲ್ಲಿ ಪರುಲ್ ಯಾದವ್ ಹಾಗೂ ಅಮೂಲ್ಯಾ ಕೆಲವು ದೃಶ್ಯಗಳಲ್ಲಿ ಕಾಣಿಸುತ್ತಾರೆ. ರಾಕ್ ಲೈನ್ ಸ್ಟುಡಿಯೋದಲ್ಲಿ ಇದಕ್ಕೆ ಭರ್ಜರಿ ಸೆಟ್ ಸಹ ನಿರ್ಮಾಣವಾಗಿದೆ. ಮೂರು ದಿನಗಳಲ್ಲಿ ಅ.15 ರಿಂದ ಈ ಹಾಡನ್ನು ನೃತ್ಯ ನಿರ್ದೇಶಕ ಮುರಳಿ ಅವರು ಸಂಪೂರ್ಣಗೊಳಿಸಲಿದ್ದಾರೆ. ಬಾಬು ಖಾನ್ ಅವರು ಈ ಹಾಡಿನ ಸೆಟ್ ನಿರ್ಮಿಸಿದ್ದಾರೆ.

ಪ್ಯಾರ್ ಗೆ ಆಗ್ಬಿಟ್ಟ ಪರುಲ್ ಯಾದವ್

ಚಿತ್ರೀಕರಣ ಹಾಗೂ ಇನ್ನಿತರ ಚಟುವಟಿಗೆಗಳನ್ನು ಮುಗಿಸಿ ಕೊಂಡಿರುವ 'ಶ್ರಾವಣಿ ಸುಬ್ರಮಣ್ಯ' ಚಿತ್ರಕ್ಕೆ ಎರಡು ಜನಪ್ರಿಯ ವ್ಯಕ್ತಿಗಳು ಸೇರ್ಪಡೆ ಆಗಿದ್ದಾರೆ. ಅಂದಹಾಗೆ ಪರುಲ್ ಅವರು ಈ ಹಿಂದೆ ‘ಗೋವಿಂದಯ ನಮಃ' ಚಿತ್ರದ ನಟಿ. ಆ ಸಿನಿಮದಿಂದಲೇ ಅವರು ಜಯಪ್ರಿಯ ಆಗಿದ್ದು ಕೂಡ. ಅವರ ಪ್ಯಾರ್ ಗೆ....ಹಾಡನ್ನು ಸಿನಿಮಾಕ್ಕೆ ಅಳವಡಿಸಿದ ನಿರ್ಮಾಪಕ ಕೆ ಎ ಸುರೇಶ್ ಅವರು ಮತ್ತೆ ಅವರನ್ನೇ ಈ ಸಿನಿಮಾಕ್ಕೂ ಒಂದು ಹಾಡಿಗೆ ಕರೆತಂದಿದ್ದಾರೆ.

ನಿರ್ಮಾಪಕ ಕೆಎ ಸುರೇಶ್ ಅವರ ಮೂರನೇ ಚಿತ್ರ

ನಿರ್ಮಾಪಕ ಸುರೇಶ್ ಅವರ ಮೂರನೇ ಚಿತ್ರ 'ಶ್ರಾವಣಿ ಸುಬ್ರಮಣ್ಯ' ಮಂಜು ಸ್ವರಾಜ್ ಅವರ ನಿರ್ದೇಶನದಲ್ಲಿ ತಯಾರಾಗುತ್ತಿದೆ.

ಮತ್ತೊಮ್ಮೆ ಚೆಲುವಿನ ಚಿತ್ತಾರ ಜೋಡಿ

ಸುರೇಶ್ ಬಾಬು ಅವರ ಛಾಯಾಗ್ರಹಣ, ಬಸವರಾಜ್ ಅವರ ಸಂಕಲನ ಇರುವ ಈ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಅಮೂಲ್ಯ ‘ಚೆಲುವಿನ ಚಿತ್ತಾರ' ನಂತರ ನಟಿಸಿರುವ ಚಿತ್ರ.

ಚಿತ್ರದ ಟ್ರೇಲರ್ ಸಾಕಷ್ಟು ಜನರನ್ನು ಆಕರ್ಷಿಸಿದೆ

ಈ ಚಿತ್ರದ ಟ್ರೇಲರ್ ಈಗಾಗಲೇ ಬಹಳಷ್ಟು ಜನರನ್ನು ಆಕರ್ಷಿಸಿದೆ. ಚಿತ್ರದ ಇನ್ನಿತರ ತಾರಾಗಣದಲ್ಲಿ ಆನಂತ ನಾಗ್, ತಾರಾ, ಸಾಧು ಕೋಕಿಲ, ಮಂಡ್ಯ ರಮೇಶ್, ನೀನಾಸಮ್ ಅಶ್ವಥ್ ಹಾಗೂ ಇನ್ನಿತರರು ಇದ್ದಾರೆ.

ಮುಗ್ಧ ಹುಡುಗಿಗೆ ಮನಸೋಲುವ ನಾಯಕ

'ಶ್ರಾವಣಿ ಸುಬ್ರಮಣ್ಯ' ಚಿತ್ರದಲ್ಲಿ ಮುಗ್ದ ಹುಡುಗಿಯ ಪರಾಕಾಷ್ಠೆಗೆ ನಾಯಕ ಮನಸೋತು ಪ್ರೇಮಿಸುವುದು ಚಿತ್ರದ ಮೂಲ ಅಂಶ.

English summary
Kannada films popular playback singer Manjula Gururaj sings a same style song “Olage Seridare Gundu” from the movie Nanjundi Kalyana in Shravani Subramanya. A romantic comedy film written and directed by Manju Swaraj and produced by K. A Suresh under his home production banner Suresh Arts Productions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada