twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ಸಿಂಗರ್ ಮನೋಜ್ ವಶಿಷ್ಠ ಚೊಚ್ಚಲ ಆಲ್ಬಂ 'ತತ್ವ'

    By Rajendra
    |

    ಇದು ಕಂಡು ಬಂದಿರೋದು ಸ್ಟಾರ್ ಸಿಂಗರ್ ಖ್ಯಾತಿಯ ಸಿಂಗರ್ ಮನೋಜ್ ವಶಿಷ್ಠ ಬಿಡುಗಡೆ ಮಾಡಿರುವ ಚೊಚ್ಚಲ ಆಡಿಯೋ ಆಲ್ಬಂ 'ತತ್ವ'ದಲ್ಲಿ. 'ತತ್ವ' ಅನ್ನೋದು ಮರೆತು ಹೋಗಿರುವ ಸಂತರ ಕವನ, ಜಾತಿ, ಬಣ್ಣ ಮತ್ತು ಕಾಲಕ್ಕೂ ಮಿಗಿಲಾದ ಭಾವನೆಯನ್ನಯ ಹೊಂದಿರುವ ವಿಭಿನ್ನ ಆಲ್ಬಂ.

    ಇತ್ತೀಚೆಗೆ ಬಿಡುಗಡೆಯಾಗಿರುವ ಮನೋಜ್ ಅವರ ಆಡಿಯೋ ಆಲ್ಬಂ ತತ್ವದಲ್ಲಿ ಹಲವು ವರುಷಗಳ ಹಿಂದೆ ಸಂತರು ಬರೆದಿದ್ದ ಆದರೆ ಈಗಿನ ಸಮಾಜಕ್ಕೂ ಅನ್ವಯವಾಗುವ, ಜಾತಿಯತೆ, ಬಣ್ಣ ಮತ್ತು ಸಮಯಕ್ಕಿಂತಲೂ ಹೆಚ್ಚು ಸಂಬಂಧಗಳನ್ನು ಹೊಂದಿರುವ ಮೌಲ್ಯಗಳನ್ನು ಹೊಂದಿದೆ.

    ಮನೋಜ್ ವಶಿಷ್ಠರ ಆಲ್ಬಂ ತತ್ವಕ್ಕೆ ಖ್ಯಾತ ಸಂಗೀತಕಾರ ಪ್ರವೀಣ್ ಡಿ ರಾವ್ ಸಂಗೀತ ನಿರ್ದೇಶನ ನೀಡಿದ್ದಾರೆ. ತತ್ವ ಆಲ್ಬಂಖ್ಯಾತ ಸಂಗೀತಕಾರರ ಮತ್ತು ಅದ್ಭುತ ಹಾಡುಗಾರರ ಸಂಗೀತ ಲಹರಿಯನ್ನು ಹೊಂದಿದೆ.

    Manoj Vasishta
    ತತ್ವದಲ್ಲಿ ಉಸ್ತಾದ್ ಫೈಯಾಜ್ ಖಾನ್ ಸಾರಂಗಿಯ ಇಂಪು ನೀಡಿದರೆ, ಎನ್.ಎಸ್ ಪ್ರಸಾದ್ ಮಾಂಡೋಲಿನ್ ನುಡಿಸಿದ್ದಾರೆ. ಸಿತಾರ್ ಗೆ ಶ್ರುತಿ ಕಾಮತ್ ಸಾಥ್ ನೀಡಿದರೆ, ಶ್ರೀನಿವಾಸ್ ಆಚಾರ್ ಗೀಟಾರ್ ಗೆ ನಾಯಕ. ಕೊಳಲು ವಾದನದಲ್ಲಿ ವಾರಿಜ ವೇಣುಗೋಪಾಲ್ ಸಂಗೀತ ನುಡಿಸಿದ್ರೆ, ಗುರುಮೂರ್ತಿ ತಬಲ ಬಾರಿಸಿದ್ದಾರೆ. ಪ್ರಮತ್ ಕಿರಣ್ ಪಕ್ರ್ಯುಷನ್ ಸ್ಕೇಪ್, ಸತ್ಯಮೂರ್ತಿ ಡೋಲಕ್ ಜೊತೆಗೆ ಅಂತರ್ಧನಿಯ ಹಾಡುಗಾರರು ತತ್ವಕ್ಕೆ ಧ್ವನಿಗೂಡಿಸಿದ್ದಾರೆ.

    ತತ್ವ ಆಡಿಯೋ ಆಲ್ಬಂನಲ್ಲಿ ಒಟ್ಟು 7 ಟ್ರ್ಯಾಕ್ ಗಳಿವೆ. ಕೇವಲ ರು.99 ಬೆಲೆಯಲ್ಲಿ ಕೈಗೆಟುಕುವ ಈ ಆಲ್ಬಂನಲ್ಲಿ ಹರಿದಾಸರು ಸೇರಿದಂತೆ ಇತರೆ ಸಂತರ ಹಾಡುಗಳು ಮನೋಜ್ ಧ್ವನಿಯಲ್ಲಿವೆ. ಪ್ರತಿಯೊಂದು ಸಿ.ಡಿ. ಕೊಂಡಾಗಲೂ ಹಾರ್ಟ್ ಅಂಡ್ ಸೋಲ್ ಫೌಂಡೇಷನ್ ಗೆ ಸ್ವಲ್ಪ ನೆರವಾಗುತ್ತದೆ.

    ಮನೋಜ್ ರ 'ತತ್ವ' ರೇಡಿಯೋ ಸಿಟಿ ಫ್ರೀಡಂ ರೆಡಿಯೋ ಪ್ರಶಸ್ತಿಗೆ ನಾಮಿನೇಟ್ ಕೂಡ ಆಗಿತ್ತು. ಮೊದಲ ಯತ್ನದಲ್ಲೇ ನಾಮಿನೇಷನ್ ಗೌರವ ಸಿಕ್ಕಿದ್ದಕ್ಕೆ ಮನೋಜ್ ಖುಷಿ ವ್ಯಕ್ತಪಡಿಸಿದ್ದಾರೆ. ತನ್ನ ಗುರು ಪ್ರವೀಣ್ ಡಿ ರಾವ್ ಗೆ ವಂದನೆ ಸಲ್ಲಿಸಿದ್ದಾರೆ.

    ತನ್ನ 4ನೇ ವಯಸ್ಸಿನಲ್ಲೇ ಸಂಗೀತ ಅಭ್ಯಾಸವನ್ನು ಆರಂಭಿಸಿದರು ಮನೋಜ್ ಅವರದು ತುಮಕೂರು. ಕಳೆದ 10 ವರ್ಷಗಳಿಂದ ಮನೋಜ್ ಗಾನಕಲಾ ಭೂಷಣ್ ಆರ್.ಕೆ.ಪದ್ಮನಾಭ ಗರಡಿಯಲ್ಲಿಸಂಗೀತ ಕಲಿಯುತ್ತಿದ್ದಾರೆ. 25ರ ಹರೆಯದ ಮನೋಜ್ ಎಂಬಿಎ ಪದವಿಧರ ಕೂಡ ಹೌದು.

    ಸುವರ್ಣವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾನ್ಫಿಡೆಂಟ್ ಸ್ಟಾರ್ ಸಿಂಗರ್ ರಿಯಾಲಿಟಿ ಶೋನ ಸೀಸನ್-1ರಲ್ಲಿ ಮನೋಜ್ ಮೊದಲ ರನ್ನರ್ ಅಪ್. ರಿಯಾಲಿಟಿ ಶೋದಲ್ಲಿ ಮನೋಜ್ ಮೊದಲ ಸುತ್ತಿನಿಂದ-ಕೊನೆಯ ಹಂತದವರೆಗೆ ವೀಕ್ಷಕರಿಂದ ಮತ್ತು ತೀರ್ಪುಗಾರರಿಂದ ಅತೀ ಹೆಚ್ಚು ವೋಟುಗಳನ್ನು ಪಡೆದಿದ್ದರು. ಇದು ಈಗ ಆಲ್ಬಂ ಹೊರತರಲು ಸ್ಫೂರ್ತಿ ತಂದಿದೆ.

    ಮನೋಜ್ ಅವರಿಗೆ ಇಂಟರ್ನೆಟ್ ಪೈರೆಸಿ ಬಗ್ಗೆ ಅಸಮಾಧಾನವಿದೆ. ಹೀಗಾಗಿ ಮಾನಸ್ ಆಡಿಯೋ ಮೂಲಕ ಸಂಗೀತ ಪ್ರೇಮಿಗಳ ಮನ ಗೆಲ್ಲಲು ಮನೋಜ್ ವಿಭಿನ್ನ ಪ್ರಯತ್ನ ಮಾಡುತ್ತಿದ್ದಾರೆ. ಗುರು ಪ್ರವೀಣ್ ರಾವ್ ಮಾರ್ಗದರ್ಶನದಂತೆ ಮನೆ ಮನೆಗಳಿಗೂ ಸಂಗೀತದ ಬಗ್ಗೆ ಜ್ಞಾನ ಹೆಚ್ಚಿಸುವ ಯೋಜನೆ ಕೂಡ ಮಾಡಿದ್ದಾರೆ. ಕೇವಲ 99 ರೂಪಾಯಿಗಳಿಗೆ ಆಲ್ಬಂ ನೀಡಿ ಪೈರೆಸಿ ತಡೆಯುವ ಪ್ರಯತ್ನ ಕೂಡ ಮಾಡುತ್ತಿದ್ದಾರೆ.

    ಈಗಾಗಲೇ ತತ್ವ ಆಲ್ಬಂಗೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ಮನೋಜ್ ಹಾಡನ್ನು ಕೇಳಬೇಕಾದ್ರೆ www.facebook.com/tatva.manojvasishta, Or ಇ-ಮೇಲ್ ಮಾಡಬಹುದು: [email protected] (ಒನ್ಇಂಡಿಯಾ ಕನ್ನಡ)

    English summary
    Indian classical music with a contemporary touch: Hum to this divine amalgam in Manoj Vasishta's debut audio album Tatva. The album comprises 7 tracks of Haridaasas and saints in Kannada by Manoj Vasishta and is priced at only Rs. 99/-. Part of the proceeds of its sales will go to the Heart and Soul Foundation.
    Wednesday, July 3, 2013, 18:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X