»   » 'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

'ಮಾಸ್ ಲೀಡರ್'ಗಾಗಿ ಒಂದಾದ ಸ್ಯಾಂಡಲ್ ವುಡ್ ತಾರೆಯರು

Posted By:
Subscribe to Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಮಾಸ್​ ಲೀಡರ್' ಆಗಸ್ಟ್ 11ರಂದು ರಾಜ್ಯಾದ್ಯಂತ ರಿಲೀಸ್​ ಆಗುತ್ತಿದೆ. ಇದೊಂದು ದೇಶಪ್ರೇಮದ ಕಥೆಯಾಗಿದ್ದು, ಚಿತ್ರದಲ್ಲಿ ಶಿವಣ್ಣ ಆರ್ಮಿ ಆಫೀಸರ್ ಆಗಿ ಘರ್ಜಿಸಲಿದ್ದಾರೆ.

ಇದೇ ವಾರ ಬಿಗ್ ಸ್ಕ್ರೀನ್ ಮೇಲೆ ರಾರಾಜಿಸಲಿರುವ 'ಮಾಸ್ ಲೀಡರ್' ಈಗೊಂದು ಪ್ರಮೋಷನಲ್ ಹಾಡನ್ನ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ನಟ ಶಿವರಾಜ್ ಕುಮಾರ್ ಜೊತೆ ಸ್ಯಾಂಡಲ್ ವುಡ್ ನ ಹಲವು ತಾರೆಯರು ಕಾಣಿಸಿಕೊಂಡಿದ್ದಾರೆ.

ಟೈಟಲ್ ವಿವಾದ ಅಂತ್ಯ: 'ಮಾಸ್ ಲೀಡರ್' ಆಗಸ್ಟ್ 11ಕ್ಕೆ ರಿಲೀಸ್

Mass Leader E Manninalli Promotional Video Song Release

ದೇಶಪ್ರೇಮದ ಕುರಿತಾಗಿದೆ ಮೂಡಿ ಬಂದಿರುವ 'ಈ ಮಣ್ಣಿನಲ್ಲಿ.......' ಎಂಬ ಸಾಲುಗಳಿಗೆ ವಿ ನಾಗೇಂದ್ರ ಪ್ರಸಾದ್​ ಅವರು ಸಾಹಿತ್ಯ ಬರೆದಿದ್ದು, ವೀರ ಸಮರ್ಥ ಸಂಗೀತ ನೀಡಿದ್ದಾರೆ. ಇನ್ನು ಪ್ರಮೋಷನಲ್ ಹಾಡಿನಲ್ಲಿ ಶಿವರಾಜ್ ಕುಮಾರ್, ಪುನೀತ್​ ರಾಜ್ ಕುಮಾರ್​, ಜಗ್ಗೇಶ್​, ಶರಣ್, ರಾಗಿಣಿ, ಆಶಿಕ ರಂಗನಾಥ್, ನೆನಪಿರಲಿ ಪ್ರೇಮ್​, ಶ್ರೀ ಮುರುಳಿ, ವಿಜಯ ರಾಘವೇಂದ್ರ, ಪ್ರೀಯಾಂಕ ಉಪೇಂದ್ರ ತೆರೆ ಹಂಚಿಕೊಂಡಿದ್ದಾರೆ.

'ಮಾಸ್ ಲೀಡರ್' ಶಿವಣ್ಣನಿಗೆ ಸೆನ್ಸಾರ್ ನಿಂದ ಗ್ರೀನ್ ಸಿಗ್ನಲ್

ನರಸಿಂಹ ಅವರು ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ಜೋಗಿ ಪ್ರೇಮ್, ಚಿಂತನ್ ವಿಕಾಸ್, ಗೋವಿಂದ ಕರ್ನೂಲ್ ಈ ಹಾಡಿಗೆ ದ್ವನಿಯಾಗಿದ್ದಾರೆ. ಇನ್ನು ಉಳಿದಂತೆ ಚಿತ್ರದಲ್ಲಿ ಶಿವರಾಜ್ ಕುಮಾರ್, ಪ್ರಣಿತಾ, ವಿಜಯ ರಾಘವೇಂದ್ರ, ಲೂಸ್ ಮಾದ ಯೋಗೀಶ್, ಗುರು ಜಗ್ಗೇಶ್, ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

English summary
Mass Leader's 'E Manninalli' Promo Video Song Release. The Movie directed by narasimha, and features Shiva rajkumar, vijaya raghavendra, guru jaggesh, lose mada yogesh and others.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada